Advertisement

ಕನ್ನಡ ಅಂಕಿ‌ ಬಳಸಿದ್ದಕ್ಕೆ 2 ಬಾರಿ ವಜಾಗೊಂಡಿದ್ದ ನೌಕರ…ಕುಷ್ಟಗಿಯಲ್ಲಿ ಹೀಗೊಬ್ಬ ಕನ್ನಡಿಗ

08:07 AM Nov 01, 2022 | Team Udayavani |

ಕುಷ್ಟಗಿ: ಕನ್ನಡ ಅಂಕಿಗಳನ್ನು ಬಳಸಿದ್ದಕ್ಕೆ ಎರಡು ಬಾರಿ ವಜಾ ಆಗಿದ್ದ ಸಾರಿಗೆ ನೌಕರ, ನೌಕರಿ ಆಸೆ ಬಿಟ್ಟರೇ..ಹೊರತು ಕನ್ನಡತನ ಬಿಡಲಿಲ್ಲ .

Advertisement

ಹೌದು..ಕುಷ್ಟಗಿಯ ಶರಣಪ್ಪ ಜೀರ್(ಹೂಗಾರ) ಸಾರಿಗೆ ಇಲಾಖೆಯಲ್ಲಿ ಕಿರಿಯ ಸಹಾಯಕ ಹುದ್ದೆಯಲ್ಲಿದ್ದರು. ಇವರು ಪತ್ರ ವ್ಯವಹಾರ, ಕಚೇರಿಯ ದಾಖಲಾತಿಗಳ‌ ನಿರ್ವಹಣೆಯಲ್ಲಿ ಕನ್ನಡ ಅಂಕಿ ಬಳಸಿದರು ಎನ್ನುವ ಕಾರಣಕ್ಕೆ ಒಮ್ಮೆ ಅಲ್ಲ ಎರಡು ಬಾರಿ ವಜಾ ಆಗಿದ್ದಾರೆ.

1997 ರಲ್ಲಿ ಬಳ್ಳಾರಿ ವಿಭಾಗದ ಕೂಡ್ಲಗಿ ಸಾರಿಗೆ ಘಟಕದಲ್ಲಿದ್ದಾಗ ಕನ್ನಡ ಅಂಕಿ ಬಳಸಿದ್ದರು. ಇಂಗ್ಲೀಷ್ ಅಂಕಿ ಬಳಸಲು ತಾಕೀತು ಮಾಡಿದ್ದರು. ರಾಜ್ಯದಲ್ಲಿ ಕನ್ನಡ ಅಂಕಿ ಎಲ್ಲಿದೆ ಆದೇಶ? ಪ್ರಶ್ನಿಸಿದ್ದ ಸಂದರ್ಭದಲ್ಲಿ ಸಾರಿಗೆ ಜಿಲ್ಲಾ ಅಧಿಕಾರಿ ಫಯಾಜ್ ವಜಾಗೊಳಿಸಿದ್ದರು. ಆಗ ಕಲಬುರಗಿ ಸಂಚಾರಿ ಪೀಠದ ಕಾರ್ಮಿಕ ನ್ಯಾಯಾಲಯದ ರಜಾ ಅವಧಿಯಲ್ಲಿ ನ್ಯಾಯದೀಶರು ಮನ್ನಿಸಿ ಪುನಃ ಸೇವೆಗೆ ಅವಕಾಶ ಕಲ್ಪಿಸಿದ್ದರು.

2017 ರಲ್ಲಿ ಹೊಸಪೇಟೆ ಘಟಕದ ಸೇವೆಯಲ್ಲಿದ್ದ ಸಂದರ್ಭದಲ್ಲಿ ಜಿಲ್ಲಾ ಅಧಿಕಾರಿ ಸುಭಾಶ್ಚಂದ್ರ ಇದೇ ಕಾರಣಕ್ಕೆ ಕಿರಿಯ ಸಹಾಯಕ ಶರಣಪ್ಪ ಜೀರ್ ಅವರನ್ನು ವಜಾ ಮಾಡಿದ್ದರು. ಇದಕ್ಕೆ ತಲೆ ಕೆಡಿಸಿಕೊಳ್ಳದ ಶರಣಪ್ಪ ಜೀರ್ ಅವರು, ಉಪ ಜೀವನಕ್ಕಾಗಿ ಕುಲ ವೃತ್ತಿ ಹೂ ಕಟ್ಟುವ,ಮದುವೆಯ ಬಾಸಿಂಗ ಮಾಡುವ, ಭಾಗ್ಯದ ಆಂಜನೇಯ ಪೂಜೆ, ಹೊಲದ ಕೆಲಸ ಹಾಗೂ ಸರ್ವ ಧರ್ಮ ವಧು- ವರನ್ವೇಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರೆ.

ಇದೀಗ 60 ರ ವಯಸ್ಸಿನ ಅವರು, ಕನ್ನಡ ಅಂದರೆ ಇವರ ಎದೆ ಉಬ್ಬುತ್ತದೆ.ಅಪ್ಪಿ ತಪ್ಪಿ ಇಂಗ್ಲಿಷ್ ಬಳಸದೇ ಕನ್ನಡ ಮಾತನಾಡುವುದು ವಿವರ ವಿಶಿಷ್ಟ ಶೈಲಿ. ಇವರು ನವೆಂಬರ ಕನ್ನಡಿಗರಲ್ಲ. ಕನ್ನಡ ನಿತ್ಯೋತ್ಸವ ಇವರ ನಾಲಿಗೆ ಮೇಲಿರುತ್ತದೆ‌.

Advertisement

ಕಾಣೆಯಾಗುತ್ತಿವೆ ಕನ್ನಡ ಪದಗೋಳ್ :
ಕಳೆದ 12 ವರ್ಷಗಳಿಂದ ತಮ್ಮ ಕನ್ನಡ ದ ಮನೆಯಲ್ಲಿ ಕನ್ನಡ ಧ್ಚಜಾರೋಹಣ ಮಾಡಿ ಸಂಭ್ರಮಿಸುವ ಅವರ ಮನೆಯ ಮೇಲೆ 365 ದಿನಗಳು ಸದಾ ಕನ್ನಡ ಹಾರಾಡುತ್ತಿರುತ್ತದೆ. ಮನೆಯಲ್ಲೂ ಮಕ್ಕಳು, ಪತ್ನಿ ಇಂಗ್ಲಿಷ್ ಬಳಸಿಲ್ಲ. ಇವರೊಂದಿಗೆ ವಾದಕ್ಕೆ ಇಳಿದರೂ ಇಂಗ್ಲಿಷ್ ಬಳಸಿಲ್ಲ. ಅವರ ಪ್ರಕಾರ ಕನ್ನಡ ಬಳಸಿದರೆ ಬೆಳೆಯುತ್ತದೆ. ಪ್ರತಿ ವರ್ಷ ತಾಂತ್ರಿಕ ಬಳಕೆ ಹೆಚ್ಚಾದಂತೆ ಇಂಗ್ಲೀಷ್ ಬೆಳೆಯುತ್ತಿದ್ದು ಕನ್ನಡ ಸೊರಗುತ್ತಿದೆ. ಪ್ರತಿ ವರ್ಷವೂ ಕನ್ನಡ ಪದಗಳು ಕಾಣೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿದರು. ಜನರು ಕನ್ನಡಿಗ ಎಂದಾಗ ಸಂತಸ ಆಗುತ್ತದೆ. ಕೆಲವರು ಕನ್ನಡ ಭಾಷೆ ತಾಂತ್ರಿಕ ಪದಗಳ ಪರ್ಯಾಯ ಅರ್ಥ ಕೇಳುತ್ತಿರುತ್ತಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕನ್ನಡ ನಿಘಂಟು ತಯಾರಿಬೇಕೆನ್ನುವುದು ಬಹು ದಿನದ ಕನಸು ಎಂದರು.

– ಮಂಜುನಾಥ ಮಹಾಲಿಂಗಪುರ ಕುಷ್ಟಗಿ

Advertisement

Udayavani is now on Telegram. Click here to join our channel and stay updated with the latest news.

Next