Advertisement

“ಕನ್ನಡಕ್ಕಾಗಿ ನಾವು’ಗೀತೆ ಗಾಯನದಲ್ಲಿ 18 ಲಕ್ಷ ಮಂದಿ ಭಾಗಿ

11:31 PM Oct 28, 2021 | Team Udayavani |

ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಮೆಟ್ಟಿಲು, ಗ್ರಾಮಪಂಚಾಯತ್‌, ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯ ಸಹಿತ ವಾಗಿ ನಾಡಿನಾದ್ಯಂತ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು, ಕುಲಪತಿಗಳು, ವಿದ್ಯಾರ್ಥಿಗಳು, ಕಲಾವಿದರು ಹಾಗೂ ಸಾಮಾನ್ಯ ಜನರ ಕಂಠದಿಂದ ಕನ್ನಡ ಗೀತೆಗಳು ಮಾರ್ದನಿಸಿದೆ. ಇದರಲ್ಲಿ 18 ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗಿದ್ದಾರೆ.

Advertisement

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬಣ್ಣಬಣ್ಣದ ಉಡುಗೆ ತೊಟ್ಟು  2 ಸಾವಿರಕ್ಕೂ ಅಧಿಕ ಅಧಿಕಾರಿ, ಸಿಬಂದಿ ವರ್ಗ, ಆರಕ್ಷಕ ಅಧಿಕಾರಿ ಗಳು, ಸಿಬಂದಿ ಜತೆಯಾಗಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ವಿ. ಸುನಿಲ್‌ ಕುಮಾರ್‌ “ಕನ್ನಡಕ್ಕಾಗಿ ನಾವು’ ಅಭಿಯಾನದ ಭಾಗವಾಗಿ ಲಕ್ಷಕಂಠ ಗಾಯನದಲ್ಲಿ ಪಾಲ್ಗೊಂಡಿದ್ದರು.

ವಿಶ್ವವಿಖ್ಯಾತ ಗೋಲ್‌ ಗುಂಬಜ್‌ ಮುಂಭಾಗದಲ್ಲಿ 50 ಕಲಾತಂಡಗÙ 250 ಕಲಾವಿದರು, ಮಂಡ್ಯದ ಸರ್‌ಎಂವಿ ಕ್ರೀಡಾಂಗಣದಲ್ಲಿ 3 ಸಾವಿರಕ್ಕೂ ಅಧಿಕ ಮಂದಿ,  ಹಂಪಿಯ  ಸ್ಮಾರಕಗಳ ಮುಂದೆ   ಗಾಯನ ನಡೆದಿದೆ.

ಬೆಂಗಳೂರು ವಿಭಾಗದ 125 ಸ್ಥಳಗಳಲ್ಲಿ 1,61,232 ಮಂದಿ ಕನ್ನಡ ಗೀತೆಗಳಿಗೆ ದನಿಗೂಡಿಸಿದ್ದರು. ಮೈಸೂರು ವಿಭಾಗದ 96 ಸ್ಥಳಗಳಲ್ಲಿ 5,41,365 ಜನ ಸಾಮೂಹಿಕ ಗೀತೆ ಗಾಯನದಲ್ಲಿ ಪಾಲ್ಗೊಂಡಿದ್ದರು. ಬೆಳಗಾವಿ ವಿಭಾಗದ 105 ಸ್ಥಳಗಳಲ್ಲಿ 10,74,418 ಮಂದಿ ಕನ್ನಡ ಗೀತೆಗೆ ಧ್ವನಿಯಾಗಿದ್ದರು. ಕಲಬುರಗಿ ವಿಭಾಗದ 60 ಸ್ಥಳಗಳಲ್ಲಿ 77,125 ಮಂದಿ, ದಿಲ್ಲಿ, ಮುಂಬಯಿ, ಕಾಸರ ಗೋಡು ಮತ್ತು ಪುಣೆ ಸಹಿತವಾಗಿ ಹೊರರಾಜ್ಯಗಳ 31 ಸ್ಥಳಗಳಲ್ಲಿ 350 ಮಂದಿ ಗೀತಾ ಗಾಯನದ ಸಂಭ್ರಮದಲ್ಲಿ ಜತೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next