Advertisement
ಸೆ. 27ರಂದು ಘಾಟ್‌ಕೋಪರ್ ಪೂರ್ವ ಪಂತ್‌ನಗರದ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಕನ್ನಡ ವೆಲ್ಫೇರ್ ಸೊಸೈಟಿ ಇದರ ನೂತನ ಮಹೇಶ್ ಎಸ್. ಶೆಟ್ಟಿ (ಬಾಬಾಸ್ ಗ್ರೂಪ್) ಹವಾನಿಯಂತ್ರಿತ ಸಭಾಗೃಹವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹೇಶ್ ಶೆಟ್ಟಿ ಅವರಂತಹ ಕನ್ನಡಿಗ ಮಹಾದಾನಿಗಳು ಇಂತಹ ಸಮಾಜಪರ ಸಂಸ್ಥೆಗಳಿಗೆ ಸಹಾಯ ನೀಡುತ್ತಿ ರುವುದು ಸಂತೋಷದ ಸಂಗತಿಯಾಗಿದೆ. ಕನ್ನಡ ವೆಲ್ಫೆàರ್ ಸೊಸೈಟಿಯು ಅನೇಕ ಸಮಾಜಪರ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನೇಕ ಸಮಾಜಪರ ಕಾರ್ಯಗಳಿದ್ದು, ಈ ಸಂಸ್ಥೆಯು ಈ ಯೋಜನೆಗಳತ್ತ ಗಮನಹರಿಸಿ ಯೋಜನೆಗಳ ಉಪಯೋಗವು ಸಮಾಜದ ಜನತೆಗೆ ತಲುಪುವಂತೆ ಮಾಡಬೇಕು ಎಂದು ನುಡಿದು ಸಂಸ್ಥೆಗೆ ಶುಭಹಾರೈಸಿದರು.
ಉದ್ಘಾಟಕರಾಗಿ ಆಗಮಿಸಿದ ಬಾಬಾಸ್ ಗ್ರೂಪ್‌ನ ಸಿಎಂಡಿ, ಮಹಾದಾನಿ ಮಹೇಶ್ ಶೆಟ್ಟಿ ಅವರು ಮಾತನಾಡಿ, ಕನ್ನಡ ವೆಲ್ಫೆàರ್ ಸೊಸೈಟಿಯ ಸಮಾಜಪರ ಕಾರ್ಯಕ್ರಮಗಳನ್ನು ನೋಡಿ ಈ ಸಂಸ್ಥೆಗೆ ತಾನು ಮಾಡಿದ ಸಹಾಯವು ನನಗೆ ಆತ್ಮತೃಪ್ತಿಯನ್ನು ನೀಡಿದೆ. ಭವಿಷ್ಯದಲ್ಲೂ ಸಂಸ್ಥೆಗೆ ತನ್ನಿಂದಾದ ಸಹಾಯ ಮಾಡಲು ನಾನು ಸಿದ್ಧನಿದ್ದೇನೆ ಎಂದು ನುಡಿದು ಸುವರ್ಣ ಮಹೋತ್ಸವಕ್ಕೆ ಶುಭಕೋರಿದರು.
ಇನ್ನೋರ್ವ ಉದ್ಘಾಟಕ, ದಾನಿ ಮತ್ತು ವೆಲ್‌ಕಂ ಪ್ಯಾಕೇಜಿಂಗ್ ಇಂಡಸ್ಟ್ರೀನ್ ಮಾಲಕ ರವೀಂದ್ರನಾಥ ಎಂ. ಭಂಡಾರಿ ಅವರು ಮಾತನಾಡಿ, ಹಿರಿಯರು ಸ್ಥಾಪಿಸಿದ ಈ ಸಂಘವು ಇಂದು ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದ್ದು, ಹವಾನಿಯಂತ್ರಿತ ಸಭಾಗೃಹವನ್ನು ಸಮಾಜಕ್ಕೆ ನೀಡಿರುವುದು ಅಭಿನಂದನೀಯ. ಸಮಾಜಕ್ಕೆ ಈ ಸಂಸ್ಥೆಯಿಂದ ಇನ್ನಷ್ಟು ಸೇವೆಯು ಸಲ್ಲುತ್ತಿರಲಿ. ಇದರ ಸುವರ್ಣ ಮಹೋತ್ಸವದ ಕಾರ್ಯಯೋಜನೆಗಳು ಯಶಸ್ವಿಯಾಗಲಿ ಎಂದು ಹಾರೈಸಿದರು. ಯಶಸ್ಸಿಗೆ ಎಲ್ಲರೂ ಸಹಕರಿಸಿ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ, ಕನ್ನಡ ವೆಲ್ಫೆàರ್ ಸೊಸೈಟಿಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ವೆಲ್ಫೆàರ್ ಸೊಸೈಟಿಯ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಅನೇಕ ಯೋಜನೆಗಳನ್ನು ಆಯೋಜಿಸಿದ್ದು, ಇದರ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ನುಡಿದು ಸಂಸ್ಥೆಯ ಸಮಾಜಪರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
Related Articles
Advertisement
ಇದೇ ಸಂದರ್ಭ ಅತಿಥಿ-ಗಣ್ಯರು ಸುವರ್ಣ ಮಹೋತ್ಸವದ ವಿಜ್ಞಾಪನಾ ಪತ್ರವನ್ನು ಬಿಡುಗೊಳಿಸಿ ದರು. ವಿಧವಾ ವೇತನವನ್ನು ವಿತರಿಸಲಾಯಿತು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಗಣಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ ಜರಗಿತು. ಸಂಸ್ಥೆಯ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯೆ ಯರು, ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಊರಿನಿಂದ ಬಂದ ತುಳು-ಕನ್ನಡಿಗರು ಇಲ್ಲಿ ತಮ್ಮ ಅಸ್ತಿತ್ವವನ್ನು ಬೆಳೆಸುವುದರೊಂದಿಗೆ ಸಂಘಟನೆಗಳ ಮೂಲಕ ತಮ್ಮ ಶಕ್ತಿಯನ್ನು ತೋರಿಸುತ್ತಿದ್ದಾರೆ. ನಾವು ಸಂಘಟಿತರಾದಾಗ ಮಾತ್ರ ನಮಗೆ ಈ ನೆಲದಲ್ಲಿ ಬಲ ಸಿಗುತ್ತದೆ. ನಮ್ಮಲ್ಲಿ ಶಕ್ತಿಯಿರುವ ತನಕ ನಾವು ಸಮಾಜಕ್ಕಾಗಿ ಸೇವೆ ಮಾಡುತ್ತಿರಬೇಕು – ಐಕಳ ಹರೀಶ್ ಶೆಟ್ಟಿ (ಉಪಾಧ್ಯಕ್ಷರು : ವಿಶ್ವ ಬಂಟರ ಸಂಘಗಳ ಒಕ್ಕೂಟ). ತುಳುನಾಡಿನ ಜನತೆ ಮುಂಬಯಿಗೆ ಬಂದು ಇಲ್ಲಿ ಸಂಪಾದಿಸಿ ಕೇವಲ ತಮ್ಮ ಕುಟುಂಬವನ್ನು ಮಾತ್ರ ನೋಡದೆ ಸಂಘಟನೆಗಳ ಮೂಲಕ ಜನಸೇವೆಯಲ್ಲಿ ತೊಡಗಿದ್ದಾರೆ. ಇದು ತುಳು-ಕನ್ನಡಿಗರ ಹೆಗ್ಗಳಿಕೆಯಾಗಿದೆ. ಜನಸೇವೆಯೇ ಜನಾರ್ದನ ಸೇವೆ ಎಂದು ತಿಳಿದು, ಇಂತಹ ಸಂಘಟನೆಗಳ ಮೂಲಕ ತಮ್ಮನ್ನು ತೊಡಗಿಸಿಕೊಂಡಿರುವುದಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿರುವುದು ಹೆಮ್ಮೆಯ ವಿಷಯವಾಗಿದೆ
– ಕಡಂದಲೆ ಸುರೇಶ್ ಭಂಡಾರಿ (ಅಧ್ಯಕ್ಷರು : ಯಕ್ಷಧ್ರುವ ಪಟ್ಲ ಫೌಂಡೇಷನ್ ಮುಂಬಯಿ ಘಟಕ). ತುಳು-ಕನ್ನಡಿಗರು ಯಾವುದೇ ಊರಿಗೆ ಹೋದರೂ ಅಲ್ಲಿ ಸಂಘಟನೆಗಳ ಮೂಲಕ ಸಮಾಜಪರ ಕಾರ್ಯಗಳೊಂದಿಗೆ ತಮ್ಮ ಪ್ರತಿಭೆಗಳನ್ನು ತೋರಿಸುತ್ತಾರೆ. ಕನ್ನಡ ವೆಲ್ಫೆàರ್ ಸೊಸೈಟಿಯ ಜನಪರ ಕಾರ್ಯಗಳು ಅಭಿನಂದನೀಯವಾಗಿದೆ
– ಪ್ರಭಾಕರ ಎಲ್. ಶೆಟ್ಟಿ (ಅಧ್ಯಕ್ಷರು : ಬಂಟರ ಸಂಘ ಮುಂಬಯಿ). ಚಿತ್ರ-ವರದಿ : ಸುಭಾಷ್ ಶಿರಿಯಾ