Advertisement

ಘಾಟ್‌ಕೋಪರ್‌:”ಜನಪದ ಸಿರಿ-ದೇಶದ ಸಿರಿ’ಸಂಭ್ರಮ

04:44 PM Dec 21, 2017 | Team Udayavani |

ಮುಂಬಯಿ: ತುಳು- ಕನ್ನಡಿಗರು ಹೊಟ್ಟೆಪಾಡಿಗಾಗಿ ಮುಂ ಬಯಿಗೆ ಬಂದರೂ ತಮ್ಮ ಹಸಿವನ್ನು ನೀಗಿಸುವುದರೊಂದಿಗೆ ಇತರರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದಾರೆ. ಇದರೊಂದಿಗೆ ತಾಯಿನಾಡಿನ ಕಲೆ, ಸಂಸ್ಕೃತಿಯನ್ನು ಉಳಿಸಿ-ಬೆಳೆಸುವಲ್ಲಿ ಉತ್ತಮ ಕೊಡುಗೆಯನ್ನು ನೀಡಿದ್ದಾರೆ ಎಂದು ಮದುಜ್ಜುನಿ ಸದ್ಧರ್ಮ ಸಿಂಹಾ ಸನಾಧೀಶ  ಶ್ರೀ ತರಳಬಾಳು ಜಗದ್ಗುರು   ಡಾ| ಶ್ರೀ  ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ನುಡಿದರು.

Advertisement

ಡಿ. 18 ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃ ಹದಲ್ಲಿ ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಕನ್ನಡ ವೆಲ್ಫೆರ್‌ ಸೊಸೈಟಿ ಘಾಟ್‌ಕೋಪರ್‌ ಇದರ ಸರಣಿ ಕಾರ್ಯಕ್ರಮದ ಅಂಗವಾಗಿ  ಶ್ರೀನಿವಾಸ ಜಿ. ಕಪ್ಪಣ್ಣ ಅವರ ಸಂಯೋಜನೆಯಲ್ಲಿ, ಶ್ರೀ ತರಳಬಾಳು ಜಗದ್ಗುರು ಬ್ರಹನ್ಮಠ ಸಿರಿಗೆರೆ ತರಳಬಾಳು ಕಲಾ ಸಂಘ ಅವರ ಜಂಟಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಜನಪದ ಸಿರಿ-ದೇಶದ ಸಿರಿ ಸಂಭ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಇಲ್ಲಿಯ ಕನ್ನಡಪರ ಸಂಘ-ಸಂಸ್ಥೆಗಳು ಕನ್ನಡವನ್ನು ಕಟ್ಟುವ ಕೆಲಸವನ್ನು ಮಾಡುತ್ತ ಪರಿಸರದ ಜನತೆಯನ್ನು ಒಗ್ಗೂಡಿಸಿ ಕನ್ನಡದ ಸೇವೆಯನ್ನು ಮಾಡುತ್ತಿವೆ. ಕನ್ನಡ ವೆಲ್ಫೆàರ್‌ ಸೊಸೈಟಿಯು ಕಳೆದ ಐವತ್ತು ವರ್ಷಗಳಿಂದ ಮಾಡುತ್ತಿರುವ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ ಕಾರ್ಯಕ್ರಮಗಳು ಅಭಿನಂದ ನೀಯವಾಗಿದೆ. ಭವಿಷ್ಯದಲ್ಲಿ ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿಯನ್ನು ಹೊಂದಲಿ. ಜಾನಪದ ಎನ್ನುವುದು ಕೇವಲ ಒಂದು ಮನೋರಂಜನೆಯ ಕಲೆ ಮಾತ್ರವಲ್ಲ. ಅದು ನಮ್ಮ ಬದುಕಿನ ಸಂಸ್ಕೃತಿಯ ಕಷ್ಟ-ಸುಖಗಳನ್ನು ಬಿಂಬಿಸುವ  ಮಾಧ್ಯಮವಾಗಿದೆ ಎಂದರು.

ಕನ್ನಡ ಮತ್ತು ತುಳು ವಿದ್ವಾಂಸ ಡಾ| ಬಿ. ಎ. ವಿವೇಕ್‌ ರೈ ಅವರು ಸಂಭ್ರ ಮಕ್ಕೆ ಚಾಲನೆ ನೀಡಿ ಮಾತನಾಡಿ,  ಜಾನಪದ ಸಿರಿಯ ಹಣತೆಯು ಇಲ್ಲಿ ಸಾವಿರ ಹಣತೆಗಳಾಗಿ ಬೆಳ ಗಲಿ. ಜನಪದ ಕಲೆಯು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಲೆಯಾಗಿದೆ. ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ 350 ಕ್ಕೂ ಹೆಚ್ಚು ಕಲಾವಿದ ವಿದ್ಯಾರ್ಥಿಗಳು ಬಂದು  ಇಲ್ಲಿ ಅಪರೂಪದ ಜಾ ನಪದ ಉತ್ಸವವದೊಂದಿಗೆ ಮ ನರಂಜಿಸಿದ್ದಾರೆ. ಇದು ಬರಿಯ ಮನೋರಂಜನೆಯಾಗಿರದೆ, ನಮ್ಮ ಹೆಮ್ಮೆಯ ಕರುನಾಡಿನ ಜನಜೀವನದ ಅನಾವರಣವಾಗಿದೆ. ನಶಿಸುತ್ತಿರುವ ಆದರೆ ನಶಿಸಲೇಬಾರದ ಈ ಅದ್ಭುತ ಜಾನಪದ ಸಿರಿಗೆ ವಿದ್ಯಾರ್ಥಿ ವೃಂದದ ಕೊಡುಗೆ ಅಪಾರವಾಗಿದೆ. ಮಕ್ಕಳ ಉತ್ಸಾಹವನ್ನು ಕಂಡಾಗ ಬಹಳ ಸಂತೋಷವಾಗುತ್ತದೆ. ಇಂತಹ ಮಕ್ಕಳಿಂದಲೇ ಈ ಕಲೆಗಳು ಉಳಿಯಲು ಸಾಧ್ಯ ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಕರ್ನಾಟಕ ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಉಪಸ್ಥಿತರಿದ್ದು ಮಾತನಾಡಿ, ಭವ್ಯ ಭಾರತದ ನಿರ್ಮಾಣಕ್ಕೆ ಮಕ್ಕಳ ಕೊ ಡುಗೆ ಬಹಳಷ್ಟಿದೆ. ನಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ಬೆಳೆಸುವ ಕಾರ್ಯ ಮಕ್ಕಳಿಂದಾಗಬೇಕು. ಕನ್ನಡಿಗರಾಗಿ ಹುಟ್ಟಿ ಕನ್ನಡಕ್ಕಾಗಿ ಸೇವೆ ಮಾಡದಿದ್ದಲ್ಲಿ ನಮ್ಮ ಜೀವನ ವ್ಯರ್ಥವಾದಂತೆ ಎಂದು ಹೇಳಿದರು.

ಗೌರವ ಅತಿಥಿಯಾಗಿ ಜಾಗತಿಕ ಬಂಟ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಪಾಲ್ಗೊಂಡು ಮಾತನಾಡಿ, ಕನ್ನಡ ವೆಲ್ಫೆàರ್‌ ಸೊಸೈಟಿಯು ನಿರಂತರವಾಗಿ ಸಮಾಜಪರ ಕಾರ್ಯಗಳನ್ನು ಮಾಡುತ್ತಿದ್ದು, ಮುಂಬಯಿಯಲ್ಲಿ ಇಂತಹ ಕನ್ನಡಪರ ಸಂಘ-ಸಂಸ್ಥೆಗಳಿಂದಾಗಿ ತುಳು -ಕನ್ನಡಿಗರು ಕ್ರಿಯಾಶೀಲರಾಗಿದ್ದು, ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಲು ಸಹಕಾರಿಯಾಗುತ್ತದೆ ಎಂದರು.

Advertisement

ಮುಂಬಯಿ ಕ್ರೈಂ ಬ್ರಾಂಚ್‌ನ ಎಸಿಪಿ ಪ್ರಸನ್ನ ಅವರು ಮಾತನಾಡಿ, ಮುಂಬಯಿಯಲ್ಲಿ ಕೆಲವು ವರ್ಷಗಳಿಂದ  ಕಾರ್ಯ  ನಿರ್ವಹಿಸುತ್ತಿದ್ದರೂ ಕನ್ನಡಿಗರ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ಸಂತೋಷವನ್ನುಂಟುಮಾಡಿದೆ. ಈ ಮಕ್ಕಳ ಕಾರ್ಯಕ್ರಮವು ನಿಜವಾಗಲೂ ಅಭಿನಂದನೀಯ. ಇಲ್ಲಿಯ ಕನ್ನಡಿಗರಿಗಾಗಿ ನನ್ನಿಂದಾಗುವ ಸಹಾಯವನ್ನು ಮಾಡಲು ಸದಾ ಸಿದ್ಧನಿದ್ದೇನೆ ಎಂದರು.

ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂಬಯಿ ತುಳು-ಕನ್ನಡಪರ ಸಂಘಟನೆಗಳು ಸಾಹಿತ್ಯ ಕಾರ್ಯಕ್ರಮಗಳೊಂದಿಗೆ ಸಾ ಮಾಜಿಕ ಕ್ಷೇತ್ರಗಳೂ ತಮ್ಮನ್ನು ತೊಡಗಿಸಿಕೊಂಡಿದ್ದು ಹೆಮ್ಮೆಯ ವಿಷಯವಾಗಿದೆ. ಅದರಲ್ಲೂ ಕಳೆದ ಐವತ್ತು ವರ್ಷಗಳಿಂದ ತುಳು-ಕನ್ನಡ ವೆಲ್ಫೆàರ್‌ ಅಸೋಸಿಯೇಶನ್‌ ಸಾಮಾಜಿಕ ಕಾರ್ಯಗಳೊಂದಿಗೆ ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ಸಾಹಿತ್ಯಕ ಕ್ಷೇತ್ರಗಳಲ್ಲಿ ಗಮನೀಯ ಸಾಧ ನೆಗೈಯುತ್ತಿರುವುದು ಅಭಿನಂ ದನೀಯವಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ಬಾಬಾ ಗ್ರೂಪ್‌ ಇಂಡಸ್ಟಿÅàಸ್‌ ಸಿಎಂಡಿ ಮಹೇಶ್‌ ಎಸ್‌. ಶೆಟ್ಟಿ, ಸಂಗೀತ ಮತ್ತು ನಾಟಕ ಅಕಾಡೆಮಿ ನವದೆಹಲಿ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಜಿ. ಕಪ್ಪಣ್ಣ, ಬಂಟರ ಸಂಘ ಜ್ಞಾನ ಮಂದಿರ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ, ಬಂಟರ ಸಂಘ ಕುರ್ಲಾ-ಭಾಂಡೂಪ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸಿಎ ವಿಶ್ವನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು.

ಕನ್ನಡ ವೆಲ್ಫೆàರ್‌ ಸೊಸೈಟಿ ಘಾಟ್‌ಕೋಪರ್‌ ಅಧ್ಯಕ್ಷ ನವೀನ್‌ ಶೆಟ್ಟಿ ಇನ್ನಬಾಳಿಕೆ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಅಧ್ಯಕ್ಷ ರಂಗಕರ್ಮಿ ನಾರಾಯಣ ಶೆಟ್ಟಿ ನಂದಳಿಕೆ ಅವರು ಸಂಘದ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ರಂಗನಟ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ ಎಲ್ಲೂರು ವಂದಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಜಯರಾಜ್‌ ಜೈನ್‌, ಕೋಶಾಧಿಕಾರಿ ಹರೀಶ್‌ ಶೆಟ್ಟಿ, ಜತೆ ಕಾರ್ಯದರ್ಶಿ ರಮಾನಂದ ಶೆಟ್ಟಿ, ಜತೆ ಕೋಶಾಧಿಕಾರಿ ಪೀಟರ್‌ ರೋಡ್ರಿಗಸ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ಎನ್‌. ಶೆಟ್ಟಿ ಮೊದಲಾದವರು. ಅತಿಥಿಗಳನ್ನು ಸಂಸ್ಥೆಯ ಪದಾಧಿಕಾರಿಗಳು ಗೌರವಿಸಿದರು. ಸಂಸ್ಥೆಯ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ನಡೆದ ಉತ್ಸವದಲ್ಲಿ ನಗರದ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಪೂಜಾ ಕುಣಿತ, ಡೊಳ್ಳು ಕುಣಿತ, ಮಲ್ಲಗಂಬ, ಕರಗ ಕೋಲಾಟ, ವೀರಗಾಸೆ, ಯಕ್ಷಗಾನ ಲಂಬಾಣಿ ನೃತ್ಯ, ಉಮ್ಮತ್ತಾಟ್‌, ಕೀಲು ಕುದು ರೆ, ಪಟ ಕುಣಿತ, ಸೋಲಿಗರ ನೃತ್ಯ, ಮರಗಾಲು ಕುಣಿತ, ಬೀಸು ಕಂಸಾಳೆ, ಗಾರುಡಿ ಗೊಂಬೆ ಇಂತಹ ಹಲವು ಜಾನಪದ ನೃತ್ಯಗಳು, ಸುಮಾರು 350 ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಪ್ರದರ್ಶ ನಗೊಂಡಿತು. ಕನ್ನಡ ವೆಲ್ಫೆàರ್‌ ಸೊಸೈಟಿ ಘಾಟ್‌ಕೋಪರ್‌ ಸುವರ್ಣ  ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಮಹೇಶ್‌ ಎಸ್‌. ಶೆಟ್ಟಿ ಹಾಗೂ ಸರ್ವ ಪದಾಧಿಕಾರಿಗಳ ನೇತೃ ತ್ವದಲ್ಲಿ ಉತ್ಸವವು ಯಶ ಸ್ವಿಯಾಗಿ ನೆರವೇರಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

 ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next