Advertisement

ಕನ್ನಡ ವೆಲ್ಫೇರ್‌ ಸೊಸೈಟಿ ಘಾಟ್ಕೋಪರ್‌: ಸ್ನೇಹಕೂಟ ಕಾರ್ಯಕ್ರಮ

04:24 PM Jun 20, 2018 | |

ಮುಂಬಯಿ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಕನ್ನಡ ವೆಲ್ಫೆàರ್‌ ಸೊಸೈಟಿ ಘಾಟ್‌ಕೋಪರ್‌ ವತಿಯಿಂದ ಸ್ನೇಹಕೂಟ ಕಾರ್ಯಕ್ರಮವು ಜೂ. 17 ರಂದು ಅಪರಾಹ್ನ  ಸಂಸ್ಥೆಯ ಸಭಾಗೃಹದಲ್ಲಿ ವಿವಿಧ ಸಾಂಸ್ಕೃತಿಕ, ಸಾಮಾಜಿಕ  ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಕನ್ನಡ ವೆಲ್ಫೆàರ್‌ ಸೊಸೈಟಿ ಘಾಟ್‌ಕೋಪರ್‌ ಇದರ ಅಧ್ಯಕ್ಷ ನವೀನ್‌ ಶೆಟ್ಟಿ ಇನ್ನ ಬಾಳಿಕೆ ಅವರ ಅಧ್ಯಕ್ಷ ತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ, ಸಂಸ್ಥೆಯ ಮಹಾದಾನಿ ಮಹೇಶ್‌ ಎಸ್‌. ಶೆಟ್ಟಿ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ನಿಮ್ಮೊಂದಿಗೆ ಬೆರೆಯುವುದು, ತನ್ಮೂಲಕ ನಾಡು ನುಡಿಗಾಗಿ ದುಡಿಯುವುದು ನನ್ನ ಪಾಲಿನ ಸೌಭಾಗ್ಯವೆನಿಸುತ್ತಿದೆ. ಸಂಸ್ಥೆಯ ವತಿಯಿಂದ ನಡೆದ ಧಾರ್ಮಿಕ ಯಾತ್ರೆಯಲ್ಲಿ ಭಾಗ ವಹಿಸಲಾಗದೆ ಹೋದರೂ, ಇಂದು ಜೊತೆಯಾಗಿ ಸಂಭ್ರಮಿಸುವ ಅವಕಾಶ ದೊರೆತಿದೆ. ಸುವರ್ಣ ಮಹೋತ್ಸವ ಸಮಾರಂಭವನ್ನು ನವೀಕರಿಸುವಂತೆಯೂ ನ ಭೂತೋ ಅನ್ನುವ ತೆರದಿ ಆಚರಿಸೋಣ. ಸಂಸ್ಥೆಯನ್ನು ಇನ್ನಷ್ಟು ಸಾಧನೆಯ ಉತ್ತುಂಗ ಶಿಖರಕ್ಕೇರಿಸೋಣ ಎಂದು ನುಡಿದು ಎಲ್ಲರಿಗೂ ಶುಭಾಶಯ ಸಲ್ಲಿಸಿದರು.

ಇನ್ನೋರ್ವ ಗೌರವ ಅತಿಥಿ ರಿಲ ಯೆಬಲ್‌ ಬಿಲ್ಡರ್ಸ್‌ನ  ಮುಖ್ಯ ಆಡಳಿತ ನಿರ್ದೇಶಕ ಡಿ. ಸದಾನಂದ ಶೆಟ್ಟಿ ಅವರು ಮಾತನಾಡಿ, ಸುವರ್ಣ ಮಹೋತ್ಸವಕ್ಕೆ ತನ್ನ ಸಂಪೂರ್ಣ ಸಹಕಾರವಿದೆ. ಇಂದು ಚಿಕ್ಕದಾಗಿ ಕಾಣುವ ಈ ಸಂಸ್ಥೆ ನಿಮ್ಮ ಅಮಿತೋತ್ಸವದೊಂದಿಗೆ ಮುಂ ದೊಂದು ದಿನ ನಗರದ ದೊಡ್ಡ ಸಂಸ್ಥೆಯಾಗಿ ಬೆಳೆಯಲಿದೆ. ನಿಮ್ಮೆಲ್ಲರ ಉತ್ಸಾಹ, ಉಲ್ಲಾಸವನ್ನು ಕಂಡಾಗ ಬಹಳಷ್ಟು ಸಂತೋಷವಾಗುತ್ತಿದೆ. ಸಂಸ್ಥೆಯಿಂದ ಇನ್ನಷ್ಟು ನಾಡು- ನುಡಿಯನ್ನು ಬಿಂಬಿಸುವ ಕಾರ್ಯಕ್ರಮಗಳು ನಡೆಯುತ್ತಿರಲಿ ಎಂದು ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ  ನವೀನ್‌ ಶೆಟ್ಟಿ ಇನ್ನ ಬಾಳಿಕೆ ಅವರು ಮಾತನಾಡಿ, ಸರ್ವ ಸದಸ್ಯರ ಸಂಪೂರ್ಣ ಸಹ ಕಾರದಿಂದ, ಜೊತೆಗೆ ದೇವರ ಕೃಪಾ ಶೀರ್ವಾದದೊಂದಿಗೆ ನಮ್ಮ ತೀರ್ಥ ಕ್ಷೇತ್ರ ಯಾತ್ರೆ ಯಶಸ್ವಿಯಾಗಿದೆ. ನಮ್ಮ ಸಮಿತಿಯ ಸರ್ವರೂ ಪ್ರಶಂಸಾರ್ಹರು. ಪ್ರಥಮವಾಗಿ ಸಂಘಟಿಸಿದ್ದ ಈ ಯಾತ್ರೆಯ ಯಶ, ಮುಂದಿನ ನಮ್ಮ ಕಾರ್ಯ ಕಲಾಪಗಳಿಗೆ ಹೊಸ ಚೈತನ್ಯ ನೀಡಿದೆ. ವೇದಿಕೆಯ ಅತಿಥಿಗಳನ್ನು ಕಂಡಾಗ ಬಡವರ ಮನೆಗೆ ಭಾಗೀರಥಿ ಬಂದಂತಾಗಿದೆ ಎಂದು ಅಭಿಮಾನ ದಿಂದ ವಂದಿಸಿದರು.

ಪ್ರಾರಂಭದಲ್ಲಿ ನಾಟಕಕಾರ, ಸಂಸ್ಥೆಯ ಮಾಜಿ ಅಧ್ಯಕ್ಷ  ನಾರಾಯಣ ಶೆಟ್ಟಿ ನಂದಳಿಕೆ ಅವರು ಭಾಗವಹಿಸಿದ ಸದಸ್ಯರಿಗೆ ರಸಪ್ರಶ್ನೆ, ಗಾದೆನುಡಿ, ಗ್ರಾಮ್ಯ ಪದಗಳ ಅರ್ಥ ವಿವರಿಸುತ್ತ, ಉಪಯುಕ್ತ ಮಾಹಿತಿಗಳೊಂದಿಗೆ ಸರಿಯಾದ ಉತ್ತರ ನೀಡಿದವರನ್ನು ಆಕರ್ಷಕ ಬಹುಮಾನ ನೀಡಿ, ಸಮಯೋಚಿತವಾಗಿ ಹಿತ ಮಿತ ಮಾತುಗಳನ್ನಾಡಿದರು. ಸಂಸ್ಥೆಯ ಮಕ್ಕಳು, ಸದಸ್ಯ-ಸದಸ್ಯೆಯರು ಹಾಡಿ ರಂಜಿಸಿ ಮುದ ನೀಡಿದರು.

Advertisement

ಯಾತ್ರೆಯ ಯಶಸ್ಸಿಗೆ ಸಹಕರಿಸಿ ದವರೆಲ್ಲರನ್ನೂ ಪುಷ್ಪ ಗುತ್ಛನೀಡಿ ಗೌರವಿಸಿ ಕ್ರತಜ್ಞತೆ ಸಲ್ಲಿಸಲಾಯಿತು. ವೇದಿಕೆಯಲ್ಲಿ ಉದ್ಯಮಿ, ಸಂಸ್ಥೆಯ ಹಿತಚಿಂತಕ ಶಿವಣ್ಣ ಶೆಟ್ಟಿ, ಮಹಿಳಾ ಘಟಕದ ಕಾರ್ಯಾಧ್ಯಕ್ಷೆ  ಶಾಂತಾ ನಾರಾಯಣ ಶೆಟ್ಟಿ, ಹರೀಶ್‌ ಶೆಟ್ಟಿ, ಕಾರ್ಯದರ್ಶಿ ಸುಧಾಕರ ಎಲ್ಲೂರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಿಯಾ ನಿತ್ಯಾ ನಂದ ಶೆಟ್ಟಿ ಅವರನ್ನು ಯುವ ವಿಭಾಗದ ಮುಖ್ಯಸ್ಥೆಯಾಗಿ ಸರ್ವಾನುಮತದಿಂದ ಆಯ್ಕೆಮಾಡಿ ಪುಷ್ಪಗುತ್ಛ ನೀಡಿ ಸ್ವಾಗತಿಸಲಾಯಿತು. ಕಾರ್ಯಕ್ರಮವನ್ನು ಬಂಟರ ವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ ನಿರ್ವಹಿಸಿ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸದಸ್ಯ ಬಾಂಧವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next