Advertisement
ಬಿಜೆಪಿ ಸರಕಾರದ ಆಡಳಿತ ಅವಧಿಯಲ್ಲೇ ನಾಟಕ ಅಕಾಡೆಮಿ ಡಿಜಿಟಲೀಕರಣ ಪೂರ್ಣವಾಗಬೇಕಿತ್ತು. ಅನುದಾನದ ಕೊರತೆ, ಕಾರ್ಯಕಾರಿ ಸಮಿತಿ ಡಿಜಿಟಲೀಕರಣ ವಿಳಂಬ ಸೇರಿ ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ನಾಟಕ ಅಕಾಡೆಮಿ ರಂಗಭೂಮಿ ಚರಿತ್ರೆ ಡಿಜಿಟಲೀಕರಣ ಯೋಜನೆ ಪೂರ್ಣಗೊಳ್ಳುವ ಹಂತ ತಲುಪಿದೆ. ಈಗ ಕೆ.ವಿ. ನಾಗರಾಜಮೂರ್ತಿ ಅವರ ಅಧ್ಯಕ್ಷತೆಯ ಹೊಸ ಕಾರ್ಯಕಾರಿ ಸಮಿತಿ ಈ ಯೋಜನೆಯನ್ನು ಪೂರ್ಣಗೊಳಿಸಿದೆ. ಜಾಲತಾಣ karnatakanatakaacademy.gov.in ಎಂದು ಸೃಜಿಸಲಾಗಿದೆ.
ಈ ಹಿಂದೆ ನಾಟಕ ಅಕಾಡೆಮಿ ಡಿಟಲೀಕರಣ ಯೋಜನೆಗೆ ಸುಮಾರು 20 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿತ್ತು. ಸಮಗ್ರ ನಾಟಕ ಚರಿತ್ರೆ ಸಂಗ್ರಹಿಸಲು ಆಗ ನಿಘಂಟು ತಜ್ಞ ಪ್ರೊ| ಜಿ. ವೆಂಕಟಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನೂ ರಚಿಸಲಾಗಿತ್ತು. 10 ಲಕ್ಷ ರೂ. ಮೊತ್ತದಲ್ಲಿ ಡಿಜಿಟಲೀಕರಣಗೊಳಿಸಲು ಬೇಕಾದ ಸಲಕರಣೆಗಳನ್ನು ಖರೀದಿಸಲಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.