Advertisement
ಶನಿವಾರ ಬೆಳಿಗ್ಗೆ ಪ್ರಭುದೇವ ಮತ್ತು ಸಹೋದರರು, ಅರ್ಜುನ್‌ಸರ್ಜಾ, ಸಂಜೆ ನಂದಮೂರಿ ಬಾಲಕೃಷ್ಣ, ರಾಣಾ ದಗು ಬಾಟಿ, ಜ್ಯೂನಿ ಯರ್ ಎನ್‌ಟಿಆರ್, ಚಿರಂಜೀವಿ, ಪ್ರಕಾಶ್ ರಾಜ್, ರಾಮ್‌ಚರಣ್, ಮಂಚು ಮನೋಜ್, ನರೇಶ್, ವಿಕ್ಟರಿ ವೆಂಕಟೇಶ್, ಶ್ರೀಕಾಂತ್, ಅಲಿ ಸೇರಿ ಹಲವರು ಪುನೀತ್ ಪಾರ್ಥಿವ ಶರೀರಕ್ಕೆ ಕೈಮುಗಿದು ಕಣ್ಣೀರಿಟ್ಟಿರು. ಪಕ್ಕದಲ್ಲಿಯೇ ನಿಂತಿದ್ದ ಶಿವರಾಜ್ ಕುಮಾರ್ ಕೂಡ ಭಾವುಕರಾಗಿ ಕಣ್ಣೀರಿಟ್ಟರು. ನಟರೆಲ್ಲರೂ ಅವರನ್ನು ಬಿಗಿ ದಪ್ಪಿ ಧೈರ್ಯ ತುಂಬಿದರು. ಬಳಿಕ ಡಾ|ರಾಜ್ ಕುಟುಂಬದ ಜೊತೆಗಿನ ಬಾಂಧವ್ಯ, ಪುನೀತ್ ಕುರಿತ ತಮ್ಮ ಮಾತುಗಳನ್ನು ಹಂಚಿಕೊಂಡರು.
Related Articles
Advertisement
ಅಪ್ಪ, ಅಮ್ಮನ ಮಡಿಲಲ್ಲೇ ಕಂದನಿಗೆ ಸಮಾಧಿಬೆಂಗಳೂರು: ಪುನೀತ್ ಪಾರ್ಥಿವ ಶರೀರವನ್ನು ಕಂಠೀರವ ಸ್ಟೂಡಿಯೋ ಆವರಣದಲ್ಲಿ ಅವರ ಅಪ್ಪ, ಅಮ್ಮನ ಸಮಾಧಿಯ ಸಮೀಪವೇ ಮಣ್ಣು ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಂಠೀರವ ಸ್ಟೂಡಿಯೋ ಆವರಣದಲ್ಲಿರುವ ವರನಟ ಡಾ|ರಾಜ್‌ಕುಮಾರ್ ಅವರ ಸಮಾಧಿಯ ಸಮೀಪದಲ್ಲೇ ಪಾರ್ವತಮ್ಮ ಅವರ ಸಮಾಧಿ ನಿರ್ಮಿಸಲಾಗಿದೆ. ಅದರ ಪಕ್ಕದಲ್ಲೇ ಪುನೀತ್ ಶರೀರವನ್ನು ಮಣ್ಣುಮಾಡುವುದರಿಂದ ಅಲ್ಲಿಯೇ ಅವರ ಸಮಾಧಿ ನಿರ್ಮಾಣವಾಗಲಿದೆ.
ಅಂತ್ಯಕ್ರಿಯೆ ನಡೆಯಲಿರುವ ಜಾಗ ಹೊರತು ಪಡಿಸಿ ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಡಾ|ರಾಜ್ ಕುಟುಂಬ ವರ್ಗ ಸಹಿತವಾಗಿ ನಿರ್ದಿಷ್ಟ ಸಂಖ್ಯೆಯ ಅತಿಥಿಗಳಿಗಷ್ಟೇ ಅಂತ್ಯಕ್ರಿಯೆ ಸಂದರ್ಭ ದಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಯಾವುದೇ ರೀತಿಯಲ್ಲೂ ಸಮಸ್ಯೆ ಆಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪೊಲೀಸ್ ಭದ್ರತೆ: ಕಂಠೀರವ ಸ್ಟೂಡಿಯೋ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾ ಗಿದೆ. ಮುಖ್ಯದ್ವಾರ ಹೊರತುಪಡಿಸಿ ಬೇರೆಲ್ಲ ದ್ವಾರಗಳನ್ನು ಬಂದ್ ಮಾಡಲಾಗಿದೆ. ಡಾ|ರಾಜ್ ಸಮಾಧಿಗೆ ಹೋಗುವ ದಾರಿಗೂ ನಿರ್ದಿಷ್ಟ ಜಾಗ ಬಿಟ್ಟು, ಉಳಿದೆಲ್ಲ ಕಡೆ ಬ್ಯಾರಿಕೇಡ್ ಹಾಕಲಾಗಿದೆ. ಅಂತ್ಯಕ್ರಿಯೆ ಸಂದರ್ಭದಲ್ಲಿ ಭದ್ರತೆ ಕಾಪಾಡಿ ಕೊಳ್ಳಲು ವಿಶೇಷ ಪೋಲಿಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸಮಾಧಿಗೆ ಪುಷ್ಪಾಲಂಕಾರ: ಡಾ|ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ಅವರ ಸಮಾಧಿಗೆ ವಿಶೇಷ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ಶನಿ ವಾರ ಮಧ್ಯಾಹ್ನದಿಂದಲೇ ಅಲಂಕಾರ ಕಾರ್ಯ ಕೈಗೊಂಡಿದ್ದು, ಸಮಾಧಿಯ ಸಮೀಪಕ್ಕೆ ಸಾರ್ವ ಜನಿಕರು ಸಹಿತವಾಗಿ ಯಾರೂ ಹೋಗದಂತೆ ನೋಡಿಕೊಳ್ಳಲಾಗುತ್ತಿದೆ. ಬೆಟ್ಟದ ಹೂ ಸಿನಿಮಾ ವೀಕ್ಷಿಸಿದ ಎಚ್‌ಡಿಡಿ
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಶನಿವಾರ ಪುನೀತ್ ಬಾಲನಟನಾಗಿ ಅಭಿನಯಿಸಿದ್ದ “ಬೆಟ್ಟದ ಹೂ’ ಸಿನಿಮಾ ವೀಕ್ಷಿಸಿದರು. ಶುಕ್ರವಾರ ಪುನೀತ್ ಪಾರ್ಥಿವ ಶರೀರದ ದರ್ಶನ ಮಾಡಿದ್ದ ದೇವೇಗೌಡರು, ಶನಿವಾರ ಪದ್ಮನಾಭನಗರ ನಿವಾಸದಲ್ಲಿ ಬೆಟ್ಟದ ಹೂ ಸಿನಿಮಾ ವೀಕ್ಷಿಸಿದರು. ಈ ವೇಳೆ ಪುನೀತ್ ಅಭಿನಯ ನೋಡಿ ಕಣ್ಣೀರಾದರು. ಎಚ್.ಡಿ.ದೇವೇಗೌಡರು ಪುನೀತ್ ಅಭಿನಯದ ಪೃಥ್ವಿ ಹಾಗೂ ರಾಜಕುಮಾರ್ ಚಿತ್ರವನ್ನು ಅಪ್ಪು ಜತೆಯಲ್ಲೇ ವೀಕ್ಷಿಸಿದ್ದರು. ಡಾ|ರಾಜ್‌ಕುಮಾರ್ ಪುತ್ರ ನಿಜಕ್ಕೂ ಯುವರತ್ನ ಎಂದು ಆಗ ಪ್ರಶಂಸೆ ವ್ಯಕ್ತಪಡಿಸಿದ್ದರು. ಪುನೀತ್‌ಗೆ ದಶ ದಿಕ್ಕುಗಳಲ್ಲೂ ಶ್ರದ್ಧಾಂಜಲಿ ಸಲ್ಲಿಕೆ
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ನಗರದ ವಿವಿಧ ವೃತ್ತಗಳು, ಆಟೋ, ಟೆಂಪೋ ಹಾಗೂ ಟ್ಯಾಕ್ಸಿ ನಿಲ್ದಾಣ, ಬಸ್ ನಿಲ್ದಾಣಗಳು, ಗಲ್ಲಿ ಗಲ್ಲಿಗಳಲ್ಲಿ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ಕೆಲ ಯುವಕರ ತಂಡ ಶನಿವಾರ ಮಧ್ಯಾಹ್ನ ಕಂಠೀರವ ಸ್ಟೇಡಿಯಂನಿಂದ ಕಂಠೀರವ ಸ್ಟೂಡಿಯೋದವರೆಗೆ ಬೈಕ್‌ನಲ್ಲಿ ಅಪ್ಪು ಫೋಟೋ ಹಿಡಿದು, ಕನ್ನಡ ಧ್ವಜದೊಂದಿಗೆ ರ್‍ಯಾಲಿ ನಡೆಸಿದರು. ನಗರದ ದಶದಿಕ್ಕುಗಳಿಂದಲೂ ಅಭಿಮಾನಿಗಳು ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ರಾಜ್ಯದ ಬಹುತೇಕ ಎಲ್ಲೆಡೆಯೂ ಶನಿವಾರವಿಡೀ ಇದೇ ದೃಶ್ಯಗಳು ಸಾಮಾನ್ಯವಾಗಿದ್ದವು.