Advertisement

ಆಗಸ್ಟ್‌ ಆಸೆ ಬಿಟ್ಟಾಕಿ.. ಸೆಪ್ಟೆಂಬರ್‌ವರೆಗೆ ನಿಮ್ಮಾಸೆ ಕಟ್ಟಾಕಿ…: ಮುಂದೈತೆ ಸಿನಿಹಬ್ಬ

09:35 AM Aug 13, 2021 | Team Udayavani |

ಸ್ಟಾರ್‌ ಸಿನಿಮಾಗಳು ಆಗಸ್ಟ್‌ನಿಂದ ಬಿಡುಗಡೆಯಾಗಲಿವೆ ಎಂದು ಆಸೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಬಹುತೇಕ ನಿರಾಸೆಯಾಗುವುದು ಖಚಿತ. ಅದಕ್ಕೆಕಾರಣ ರಾಜ್ಯದ ಮುಖ್ಯಮಂತ್ರಿ ಗಳು ಹೇಳಿದ ಸ್ಪಷ್ಟ ನುಡಿ.

Advertisement

ಚಿತ್ರಮಂದಿ ರಗಳಿಗೆ ಶೇ100 ಅನುಮತಿ ನೀಡಿ ಎಂದು ಮನವಿ ಮಾಡಿದ್ದ ಚಿತ್ರರಂಗದ ನಿಯೋಗಕ್ಕೆ ಸಿಎಂ, “ಏನಿದ್ದರೂ ಸೆಪ್ಟೆಂಬರ್‌ನಲ್ಲಿ ನೋಡೋಣ…’ ಎನ್ನುವ ಮೂಲಕ ಆಗಸ್ಟ್‌ ಆಸೆ ಕೈ ಬಿಡುವಂತೆ ಆಗಿದೆ. ಈ ಮೂಲಕ ಮತ್ತೆ ಹೊಸ ಲೆಕ್ಕಾಚಾರ. ಆದರೆ, ಈ ಬಾರಿ ಸೂತ್ರಕ್ಕೆ ಸಿಗದ ಲೆಕ್ಕಾಚಾರ ಎನ್ನಬಹುದು. ಅದಕ್ಕೆಕಾರಣ ಈಗಾಗಲೇ ಭಯ ಹುಟ್ಟಿಸಲಾರಂಭಿಸಿದ ಕೋವಿಡ್‌ ಮೂರನೇ ಅಲೆ.

ಆಗಸ್ಟ್‌ ಮಧ್ಯಭಾಗದಿಂದ ಕೋವಿಡ್‌ ಮೂರನೇ ಅಲೆಯ ರುದ್ರನರ್ತನ ಆರಂಭವಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಕೇಸ್‌ಗಳುಕೂಡಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಒಂದು ವೇಳೆ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಮೂರನೇ ಅಲೆಯ ಪ್ರಭಾವ ಕಡಿಮೆಯಾಗಿದ್ದರೆ ಆಗ ಚಿತ್ರಮಂದಿರಗ ಳಲ್ಲಿ ಶೇ100 ಸೀಟು ಭರ್ತಿಯ ಬಗ್ಗೆ ಸರ್ಕಾರ ನಿರ್ಧರಿಸುವುದಾಗಿ ಹೇಳಿದೆ. ಹಾಗಾಗಿ, ಸ್ಟಾರ್‌ ಸಿನಿಮಾಗಳ ಬಿಡುಗಡೆ ಲೆಕ್ಕಾಚಾರ ಮತ್ತೆ ತಲೆಕೆಳಗಾಗಲಿದೆ. ಇತ್ತ ಚಿತ್ರಮಂದಿರದ ಮಾಲೀಕರುಕೂಡಾ ಶೇ 50 ಸೀಟು ಭರ್ತಿಯಲ್ಲಿ ಚಿತ್ರಮಂದಿರ ನಡೆಸೋದುಕಷ್ಟ ಎನ್ನುವ ಮನವರಿಕೆ ಯನ್ನುಕೂಡಾ ಸಿಎಂಗೆ ಮಾಡಿದ್ದಾರೆ.

ಇದನ್ನೂ ಓದಿ:ಪ್ರವಾಸಿಗರನ್ನು ಸ್ವಾಗತಿಸುತ್ತಿದೆ ಪ್ರವಾಸಿಗರ ಫೇವರೇಟ್ ಗೋವಾ | ಭೇಟಿಗೆ ಷರತ್ತುಗಳು ಅನ್ವಯ

ಇವೆಲ್ಲವನ್ನು ನೋಡಿದಾಗ ಇನ್ನೂ ಸ್ಟಾರ್‌ ಸಿನಿಮಾಗಳ ಬಿಡುಗಡೆಯ ಅನಿಶ್ಚಿತತೆ ಮುಂದುವರೆಯುವುದು ಪಕ್ಕಾ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸೆಕೆಂಡ್‌ ಇನ್ನಿಂಗ್ಸ್‌ನ ಮೊದಲ ಸ್ಟಾರ್‌ ಸಿನಿಮಾವಾಗಿ “ಸಲಗ’ ಚಿತ್ರ ಬಿಡುಗಡೆಯಾಗಬೇಕಿತ್ತು. ಆಗಸ್ಟ್‌20ಕ್ಕೆ ಬರುವುದಾಗಿ ಘೋಷಣೆಕೂಡಾ ಮಾಡಿಕೊಂಡಿತ್ತು. ಆದರೆ, ಈಗ ಆಗಸ್ಟ್‌ನಲ್ಲಿ “ಸಲಗ’ ಚಿತ್ರ ಬರುತ್ತಿಲ್ಲ. ಇನ್ನು, ಶಿವರಾಜ್‌ಕುಮಾರ್‌ ಅಭಿನಯದ “ಭಜರಂಗಿ-2′ ಚಿತ್ರ ಸೆಪ್ಟೆಂಬರ್‌10ರಂದು ಬರುವುದಾಗಿ ಹೇಳಿದೆ. ಆದರೆ, ಈ ಚಿತ್ರಕೂಡಾ ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಬರುವ ಸಾಧ್ಯತೆ ಇದೆ.

Advertisement

ಇನ್ನೊಂದಿಷ್ಟು ಸ್ಟಾರ್‌ ಸಿನಿಮಾಗಳ ನಿರ್ಮಾಪಕರು ಸುಖಾಸುಮ್ಮನೆ ರಿಲೀಸ್‌ ಪ್ಲ್ರಾನ್‌ ಮಾಡಿಕೊಳ್ಳೋದೇ ಬೇಡ, ಎಲ್ಲವೂ ಸರಿ ಹೋಗಲಿ ಆ ನಂತರವೇ ನೋಡೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹಾಗಾಗಿ, “ಎಲ್ಲವೂ ಸರಿ ಹೋಗಲಿ, ಆ ಮೇಲೆ ನೋಡೋಣ’ ಎಂಬ ಉತ್ತರ ಅಂತಹ ನಿರ್ಮಾಪಕರಿಂದ ಬರುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾರನ್ನೂ ದೂಷಿಸಿ ಕೊಂಡುಕೂರುವ ಸಮಯವಲ್ಲ. ಏಕೆಂದರೆ ಮನರಂಜನೆಯ ಜೊತೆಗೆ ಜನರ ಜೀವಕೂಡಾ ಅಷ್ಟೇ ಮುಖ್ಯ. ಜನ ಭಯಮುಕ್ತರಾದಾಗ ಮಾತ್ರ ನಾವು ಮಾಡಿದ ಕೆಲಸಕ್ಕೊಂದು ಸಾರ್ಥಕತೆ ಸಿಗುತ್ತದೆ. ಜನ ಭಯದಲ್ಲಿದ್ದಾಗ ಹೌಸ್‌ಫ‌ುಲ್‌ ಅವಕಾಶಕೊಟ್ಟರೂ ಅದರಿಂದ ಯಾವುದೇ ಪ್ರಯೋಜನವಿಲ್ಲ. ಸೆಪ್ಟೆಂಬರ್‌ನಿಂದ ಹಬ್ಬದ ಸೀಸನ್‌ ಶುರುವಾಗಲಿದೆ. ಆಗ ಸಿನಿಹಬ್ಬವೂ ಆರಂಭವಾಗುವ ನಿರೀಕ್ಷೆ ಇದೆ. ಸೆಪ್ಟೆಂಬರ್‌10 ಗಣೇಶ ಹಬ್ಬ. ಅಲ್ಲಿಂದ ಒಂದೊಂದೇ ಸಿನಿಮಾಗಳು ಬಿಡುಗಡೆಯಾದರೆ, ಪ್ರೇಕ್ಷಕರಿಗ ಸಿನಿಹಬ್ಬವಾಗಲಿದೆ.

ಹೊಸಬರು ರೆಡಿ: ಚಿತ್ರಮಂದಿರಗಳ ಶೇ 100 ಆಸೆಯಿಂದ ಸ್ವಲ್ಪ ದೂರವೇ ಉಳಿದಿರುವ ವರ್ಗವೆಂದರೆ ಅದು ಹೊಸ ಬರದು. ಶೇ50ರಲ್ಲೂ ಸಿನಿಮಾ ಚೆನ್ನಾಗಿದ್ದರೆ ಜನ ನೋಡುತ್ತಾರೆ ಎಂಬ ನಂಬಿಕೆಯೊಂದಿಗೆ ಒಂದಷ್ಟು ಹೊಸಬರ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಈಗಾಗಲೇ ಆ.20ರಂದು ಮೂರ್‍ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಒಂದರ್ಥದಲ್ಲಿ ಹೊಸಬರ ಈ ನಿರ್ಧಾರ ಸ್ವಾಗತಾರ್ಹ. ಏಕೆಂದರೆ ಶೆ100 ಸೀಟು ಭರ್ತಿಗೆ ಕಾದುಕೊನೆಗೆ ಸ್ಟಾರ್‌ಗಳ ಅಬ್ಬರದ ನಡುವೆ ಬಂದುಕಳೆದು ಹೋಗುವ ಬದಲು ಈಗಲೇ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳೋದು ಒಳ್ಳೆಯದು. ಇದಕ್ಕೆ ಉದಾಹರಣೆಯಾಗಿ ಮೊದಲನೇ ಅಲೆಯ ಬಳಿಕ ಚಿತ್ರಮಂದಿರ ತೆರೆದಾಗ ಧೈರ್ಯ ಮಾಡಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ “ಆ್ಯಕ್ಟ್1978′ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಹಿಟ್‌ಲಿಸ್ಟ್‌ ಸೇರಿತು. ಹಾಗಾಗಿ, ಸಿನಿಮಾ ಚೆನ್ನಾಗಿದ್ದರೆ ಪ್ರೇಕ್ಷಕಕೈ ಹಿಡಿಯುತ್ತಾನೆ

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next