Advertisement
ಕನ್ನಡ ಸೇವಾ ಸಂಘ ಪೊವಾಯಿ ವತಿಯಿಂದ ಸಂಘದ ಸಭಾ ಗೃಹದಲ್ಲಿ ನಡೆದ ಪಾಸ್‌ಪೋಲಿ ಮುನ್ಸಿಪಲ್ ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ನಾನು ಸಹ ಮುನ್ಸಿಪಲ್ ಶಾಲೆಯಲ್ಲಿ ಶಿಕ್ಷಣ ಪಡೆದವನು. ಹಾಗಾಗಿ ನಿಮ್ಮಲ್ಲಿ ಸಹ ಅಂತಹ ಯಾವುದೇ ರೀತಿಯ ಕೀಳರಿಮೆ ಬೇಡ. ಕಲಿಯುವ ಆಸಕ್ತಿ ಇದ್ದರೆ ಯಾವುದೇ ಶಾಲೆಯಲ್ಲಿ ಸಹ ಕಲಿಯಬಹುದು. ಕಲಿಯುವ ಆಸಕ್ತಿಯನ್ನು ಬೆಳೆಸಿಕೊಂಡು ವಿದ್ಯಾವಂತ ನಾಗರಿಕರಾಗಿ ಸಮಾಜದಲ್ಲಿ ಮುಂದೆ ಬನ್ನಿ. ಶಿಕ್ಷಣಕ್ಕೆ ನನ್ನಿಂದ ಆಗುವ ಎÇÉಾ ಸಹಕಾರವನ್ನು ಸದಾ ನಿಮಗೆ ನೀಡುತ್ತೇನೆ ಎಂದು ನುಡಿದು ಮಕ್ಕಳಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪುಸ್ತಕ ವಿತರಣೆಯ ಪ್ರಾಯೋಜಕ
ರಾದ ಸೋನಿ ಸ್ಟೀಲ್ ಅಪ್ಲಾಯನ್ಸ್‌ನ ನಿರ್ದೇಶಕ ಸಿದ್ದೇಶ್ ಪಾಂಡುರಂಗ ಅವರು ಮಾತನಾಡಿ, ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಹಳ ಸಂತೋಷವಾಗುತ್ತಿದೆ. ಈ ಪುಸ್ತಕವು ನಿಮ್ಮ ಉಜ್ವಲ ಭವಿಷ್ಯ ನಿರ್ಮಾಣವಾಗಲು ಸಹಕಾರವಾಗಲಿ ಎಂದು ಶುಭ ಹಾರೈಸಿದರು.
Related Articles
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಬಾಬಾ ಪ್ರಸಾದ್ ಅರಸ ಕುತ್ಯಾರು ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಯಶೋದಾ ಪೂಜಾರಿ ಧನ್ಯವಾದಗೈದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ, ಸಲಹೆಗಾರ ಆರ್. ಜಿ. ಶೆಟ್ಟಿ, ಮಾಜಿ ಅಧ್ಯಕ್ಷ ರಮೇಶ್ ರೈ, ಪ್ರಭಾಕರ ಶೆಟ್ಟಿ ನಾನಯರ ಗರಡಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸವಿತಾ ಎಸ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ಮಾಜಿ ಕೋಶಾಧಿಕಾರಿ ಸಂದೇಶ್ ವಿಜಯ್ ಶೆಟ್ಟಿ, ಪ್ರಶಾಂತಿ ಡಿ. ಶೆಟ್ಟಿ, ಜ್ಯೋತಿ ಆರ್. ಶೆಟ್ಟಿ, ಅನಿತಾ ಶೆಟ್ಟಿ, ಸಂಘದ ಪದಾಧಿಕಾರಿಗಳು, ಸದಸ್ಯರು, ಪಾಲಕರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
Advertisement