Advertisement

Kannada Serial; ಕಿರುತೆರೆಗೆ ಬರುತ್ತಿದ್ದಾಳೆ ‘ಮೈನಾ’

05:44 PM Feb 19, 2024 | Team Udayavani |

ಉದಯ ವಾಹಿನಿಯಲ್ಲಿ ಇದೀಗ “ಮೈನಾ’ ಎಂಬ ಮತ್ತೂಂದು ಹೊಸ ಧಾರಾವಾಹಿ ಅನಾವರಣವಾಗುತ್ತಿದೆ.

Advertisement

ಮೈಲಾರಕೋಟೆ ಮೈನಾ ಮನೆಗೆ ಕಿರಿಮಗಳು. ಊರಲ್ಲಿ ಅಲೆಮಾರಿ, ಪರರಿಗೆ ಉಪಕಾರಿ. ಚಿಕ್ಕ ಪೆಟ್ಟಿಗೆ ಅಂಗಡಿ ನಡೆಸುತ್ತಿರುವ ನೀತಿವಂತ ಅಪ್ಪ ಮುತ್ತಣ್ಣ, ಅವರಿವರ ಹೊಲದಲ್ಲಿ ಕೂಲಿ ಮಾಡಿ ಸಂಸಾರದ ನೊಗಕ್ಕೆ ಹೆಗಲು ಕೊಟ್ಟಿರುವ ಅಮ್ಮ, ಸೀತೆಯಂಥ ಅಕ್ಕ ರಾಧೆ… ಹೀಗೆ ಕಥೆ ಸಾಗುತ್ತದೆ.

ಅಂದಹಾಗೆ, ಇದೇ ಫೆ. 19 ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ “ಮೈನಾ’ ಪ್ರಸಾರವಾಗಲಿದೆ. “ಮೈನಾ’ ಪಾತ್ರ ದಲ್ಲಿ ನಟಿ ವಿಜಯಲಕ್ಷ್ಮಿ ಅಭಿನಯಿಸುತ್ತಿದ್ದು, ಉಳಿದಂತೆ ನಾಗಾಭರಣ, ಅಪೂರ್ವ, ಅಂಜಲಿ, ಮಾನಸಿ ಜೋಶಿ, ಸಚಿನ್‌, ಸಿದ್ಧಾರ್ಥ್, ಪ್ರಭಂಜನ, ಸಾಗರ್‌, ಹರ್ಷಾರ್ಜುನ್‌, ಯಶಸ್ವಿನಿ ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next