Advertisement

ಮೇ 4: ಕನ್ನಡ ವಿಭಾಗ ಮುಂಬಯಿ ವಿವಿಯಲ್ಲಿ ಎರಡು ಕೃತಿಗಳ ಬಿಡುಗಡೆ

02:58 PM May 01, 2019 | Vishnu Das |

ಮುಂಬಯಿ: ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಮೇ 4ರ ಅಪರಾಹ್ನ 2.30 ರಿಂದ ಕಲಿನಾ ಕ್ಯಾಂಪಸ್‌ನಲ್ಲಿ ದಿನಕರ ನಂದಿ ಚಂದನ್‌ ಅವರ “ಆದರ್ಶ ಶಿಕ್ಷಕಿ ಮೇರಿ ಪಿಂಟೊ’ ಹಾಗೂ ಎಚ್‌. ಆರ್‌. ಚಲವಾದಿ ಅವರ “ಆರದ ಕೆಂಡಗಳು’ ಈ ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮ ನೆರವೇರಲಿದೆ.

Advertisement

ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ| ವ್ಯಾಸರಾವ್‌ ನಿಂಜೂರು ಹಾಗೂ ರಾಯಚೂರಿನ ಸಾಹಿತಿ, ಕಲಾವಿದ ವೀರ ಹನುಮಾನ್‌ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಕೃತಿಗಳ ಕುರಿತು ಸಂಘಟಕ, ಕವಿ ಮಲ್ಲಿನಾಥ ಜಲದೆ ಹಾಗೂ ಅಣುಶಕ್ತಿ ನಗರ ಕನ್ನಡ ಕಲಿಕಾ ಕೇಂದ್ರದ ಶಿಕ್ಷಕಿ ಗೀತಾ ಮಂಜುನಾಥ್‌ ಅವರು ಮಾತನಾಡಲಿದ್ದಾರೆ.

ಕಾರ್ಯಕ್ರಮದ ಸಂಯೋಜನೆಯನ್ನು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾ ಪಕರಾದ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಅವರು ಮಾಡಲಿದ್ದಾರೆ. ಹಿರಿಯ ಶಿಕ್ಷಕಿ ಮೇರಿ ಪಿಂಟೊ ಅವರು ಉಪಸ್ಥಿತರಿರುವರು. ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕನ್ನಡ ವಿಭಾಗದ ಪ್ರಕಟಣೆ ತಿಳಿಸಿದೆ.

ಎಚ್‌. ಆರ್‌. ಚಲವಾದಿ
ಥಾಣೆ ಜಿಲ್ಲೆಯ ಅಂಬರ್‌ನಾಥ್‌ನ ಚಿರಪರಿಚಿತ ಕನ್ನಡಿಗರಾಗಿರುವ ಎಚ್‌. ಆರ್‌. ಚಲವಾದಿ ಅವರು ಅಂಬರನಾಥ ನಗರ ಪರಿಷತ್ತಿನ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತ ರಾಗಿದ್ದಾರೆ. ಕನ್ನಡ ಭಾಷಾ ಪಠ್ಯ ಪುಸ್ತಕಗಳ ಅನೇಕ ಸಮೀûಾ ಸತ್ರಗಳಲ್ಲಿ ಭಾಗವಹಿಸಿದ್ದಾರೆ. ಅವರು ಶಿಕ್ಷಕರ ತರಬೇತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಲವಾದಿ ಅವರು ಚಲವಾದಿ ಸಮಾಜ ಸಂಸ್ಥೆಯ ಅಧ್ಯಕ್ಷರಾಗಿ, ಶಿವಾಜಿ, ಪುಣೆ, ಶಾಹೂ, ಅಂಬೇಡ್ಕರ್‌ ಅವರ ಸಾಮಾಜಿಕ ಸಂಘಟನೆಯ ಸಲಹೆಗಾರರಾಗಿ ತಮ್ಮನ್ನು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯಾ ಸಕ್ತರಾಗಿರುವ ಅವರು ಕೆಲವು ಕವನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರ “ಆರದ ಕೆಂಡಗಳು’ ಕವನ ಸಂಕಲನ ಸದ್ಯ ಪ್ರಕಟವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next