Advertisement

ಯೂಟ್ಯೂಬಿನಲ್ಲಿ ಕನ್ನಡ ಶಾಲಾ ಪಠ್ಯ

04:46 AM Jun 16, 2020 | Lakshmi GovindaRaj |

ಈಗಿನ ಡಿಜಿಟಲ್‌ ಯುಗದ ಅಗಾಧ ಸಾಧ್ಯತೆಗಳಲ್ಲಿ ಮುಖ್ಯವಾದದ್ದು ಹೊಸ ಮಾದರಿಯ ಕಲಿಕೆ. ಅಂತರ್ಜಾಲ ಮತ್ತು ತಂತ್ರಜ್ಞಾನದ ಮೂಲಕ, ಮಕ್ಕಳೀಗ ಮನೆಯಲ್ಲೇ ಕೂತು ವಿವಿಧ ವಿಷಯಗಳ ಕುರಿತು ಅಧ್ಯಯನ  ನಡೆಸಬಹುದಾಗಿದೆ. ಶಾಲೆಗಳು ತೆರೆಯಲಾಗದ ಈ ಕೋವಿಡ್‌ 19 ದಿನಗಳಲ್ಲಿ, ಮಕ್ಕಳಿಗೆ ಅವರ ಮನೆಗಳಿಗೇ ಕಲಿಕಾ ಸಾಮಗ್ರಿಗಳನ್ನು ಪೂರೈಸಬೇಕಾದ ಅಗತ್ಯವಿದೆ.

Advertisement

ಅದರಲ್ಲೂ ಗಣಿತ, ವಿಜ್ಞಾನ, ಇತಿಹಾಸ  ದಂತಹ ಮುಖ್ಯ ವಿಷಯಗಳ  ನಡುವೆ ಹೇಳ ಹೆಸರಿಲ್ಲದಂತಾಗಿರುವ ಭಾಷಾ ಕಲಿಕೆ, ಅಗತ್ಯವಾಗಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ, 30 ವರ್ಷಗಳ ಕನ್ನಡ ಬೋಧನೆಯ ಅನುಭವವಿರುವ, ನಿವೃತ್ತ ಕನ್ನಡ ಅಧ್ಯಾಪಕರಾದ ಪಿ. ಎಸ್‌.ಲಕ್ಷ್ಮೀನಾರಾಯಣ ರಾವ್‌ ಅವರು,  ಶಾಲಾ ವಿದ್ಯಾರ್ಥಿಗಳಿಗಾಗಿ (ಅದರಲ್ಲೂ ಹತ್ತನೇ ತರಗತಿ ಕನ್ನಡ ಪ್ರಥಮ ಭಾಷೆ) ಯೂಟ್ಯೂಬ್‌ ವಿಡಿಯೋಗಳ ಮೂಲಕ ಪ್ರತಿ ವಿದ್ಯಾರ್ಥಿಯ ಮನೆಗೇ ಪಠ್ಯಪುಸ್ತಕದ ಪಾಠಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.

ಈಗಾಗಲೇ ಹತ್ತನೇ  ರಗತಿ ಕನ್ನಡ ಪ್ರಥಮ ಭಾಷೆ ಪಠ್ಯದ ಹಳಗನ್ನಡ ಕಾವ್ಯವನ್ನು ವಿಡಿಯೋ ಪಾಠಗಳಾಗಿ ರೆಕಾರ್ಡ್‌ ಮಾಡಿ LNR Meshtru Kannada Classroom ಶೀರ್ಷಿಕೆಯಲ್ಲಿ ಯೂಟ್ಯೂಬ್‌ ವಾಹಿನಿಗೆ ಸೇರಿಸಿದ್ದಾರೆ. ಇನ್ನು ಉಳಿದ  ಪಠ್ಯಗಳನ್ನು ರೆಕಾರ್ಡ್‌ ಮಾಡುವಲ್ಲಿ ಕಾರ್ಯನಿರತರಾಗಿದ್ದಾರೆ. ಎಲ್ಲ ಪಾಠ/ಪದ್ಯಗಳೂ ಒಂದರ ನಂತರ ಒಂದರಂತೆ ಈ ವಾಹಿನಿಯಲ್ಲಿ ಸೇರಲಿವೆ.

ಪ್ರತಿ ಪಾಠಗಳಿಗೂ ಪೀಠಿಕೆ, ವಿವರಣೆ, ವ್ಯಾಕರಣ/ಛಂದಸ್ಸು ಎಂಬ ಬೇರೆ ಬೇರೆ  ಭಾಗಗಳ ವಿಡಿಯೋಗಳಿದ್ದು, ಇದು ವಿದ್ಯಾರ್ಥಿಗಳಿಗೆ ಅತ್ಯಂತ ಸಹಕಾರಿ ಯಾಗಿದೆ. ಆಸಕ್ತ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಕೆಳಗಿನ ಕೊಂಡಿಯನ್ನು ಉಪಯೋಗಿಸಿಕೊಂಡು ಆ ವಾಹಿನಿಗೆ ತಲುಪಿ, ಆ ಎಲ್ಲ ಪಾಠಗಳ ಶಿಕ್ಷಣವನ್ನು ಉಚಿತವಾಗಿ ಪಡೆಯಬಹುದು. ಸಂದೇಹಗಳನ್ನು ವಾಹಿನಿಯ ಮೂಲಕವೇ ಕಳುಹಿಸಿ, ಉತ್ತರಗಳನ್ನು ಪಡೆದುಕೊಳ್ಳಬಹುದು.

ವಾಹಿನಿ ಹೆಸರು: LNR Meshtru Kannada Classroom
https://www.youtube.com/channel/ UCbDbyjMpPNAWEYeo3opaoGw

Advertisement
Advertisement

Udayavani is now on Telegram. Click here to join our channel and stay updated with the latest news.

Next