ಮುಂಬಯಿ: ವಾರ್ಷಿಕ ಆಷಾಢ ಮಾಸ ಇದೀಗಲೇ ನಮ್ಮ ಬದುಕು ಸೇರಿದೆ. ಪೂರ್ವಜರು ಆ ಕಾಲದ ಅನಾನುಕೂಲತೆ ತಿಳಿದು ಬದುಕು ಮಾರ್ಪಡು ಮಾಡಿದ್ದರೇ ಹೊರತು ದೋಷಗಳಿಂದಲ್ಲ. ಏಕೆಂದರೆ ಆಷಾಢ ಮಾಮೂಲಿ ಮಾಸವಲ್ಲ. ಈ ತಿಂಗಳಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಲು ಹಿಂದೇಟು ಹಾಕುವುದು ಉಚಿತವಲ್ಲ. ಆಚರಣೆಗಳು ಸಂಸ್ಕೃತಿ ರಕ್ಷಣೆಗೆ ಪೂರಕವಾಗಿವೆ. ಇವು ಮಾನವ ಜೀವನ ಸಮತೋಲನೆ ಕಾಯ್ದುಕೊಳ್ಳಲು ಸಹಕಾರಿಯಾಗಿವೆ. ಮಕ್ಕಳನ್ನು ಬರೇ ಸಾಮಾಜಿಕ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ಬೆಳೆಸುವುದು ಉಚಿತವಲ್ಲ. ಬದಲಾಗಿ ಮಕ್ಕಳಲ್ಲಿ ಉತ್ತಮ ಭವಿಷ್ಯ ರೂಪಿಸಲು ಆಷಾಢದಲ್ಲಿನ ವಿಶೇಷ ಆಚರಣೆಗಳನ್ನು ರೂಢಿಸಬೇಕು. ಇಂತಹ ಸಂಸ್ಕೃತಿ ರಕ್ಷಣೆ ಎಲ್ಲರ ಹೊಣೆಯಾಗಬೇಕು. ನಮ್ಮ ಹಿರಿಯರು ಆಷಾಢದ ಪ್ರಾಕೃತಿಕ ಸೊಬಗನ್ನು ನಮ್ಮಲ್ಲಿ ರೂಢಿಸಿ ಅದರ ಮಹತ್ವ ನಮ್ಮಲ್ಲಿ ಬೆಳೆಸಿ ಪೋಷಿಸಿದ್ದಾರೆ. ಇದನ್ನೇ ನಮ್ಮ ಮಹಿಳೆಯರು ಮುನ್ನಡೆಸಬೇಕು ಎಂದು ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷ ಎಲ್. ವಿ. ಅಮೀನ್ ಅಭಿಪ್ರಾಯಪಟ್ಟರು.
ಜು. 25 ರಂದು ಸಂಜೆ ಕನ್ನಡ ಸಂಘ ಸಾಂತಾಕ್ರೂಜ್ ವತಿಯಿಂದ ಬಾಂದ್ರಾ ಪೂರ್ವದ ಖೇರ್‌ವಾಡಿಯ ರಾಜಯೋಗ್ ಸಭಾಗೃಹದಲ್ಲಿ ನಡೆದ ವಾರ್ಷಿಕ ಆಷಾಢೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಸಂಘ ಸಾಂತಾಕ್ರೂಜ್ ಸಮಾಜಪರ ಕಾರ್ಯಕ್ರಮಗಳೊಂದಿಗೆ ಇಂತಹ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ ಯುವಪೀಳಿಗೆಗೆ ಮಾದರಿಯಾಗಿದೆ. ಸಂಘದ ಪ್ರತಿಯೊಂದು ಕಾರ್ಯಗಳಲ್ಲಿ ತುಳು-ಕನ್ನಡಿಗರು ಪಾಲ್ಗೊಂಡು ಯಶಸ್ಸಿಗೆ ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಿಕ್ಷಣ ಪ್ರೇಮಿಗಳೂ, ಸಂಘದ ಪ್ರೋತ್ಸಾಹಕರು ಆದ ಸದಾನಂದ ಸಫಲಿಗ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ (ಬಿಸಿಸಿಐ) ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ ಹರೀಶ್ ಜಿ. ಅಮೀàನ್, ಸಾಯಿಕೇರ್ ಸಮೂಹದ ಸುರೇಂದ್ರ ಎ. ಪೂಜಾರಿ, ಬಂಟ್ಸ್ ಸಂಘ ಮುಂಬಯಿ ಇದರ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ಡಾ| ಆರ್. ಕೆ. ಶೆಟ್ಟಿ ಇವರಿಗೆ ಸಂಘದ ಪರವಾಗಿ ಪುಷ್ಪಗುಚ್ಚವನ್ನಿತ್ತು ಅಭಿನಂದಿಸಿದರು.
ಸಂಘದ ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ. ಕೋಟ್ಯಾನ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗೋವಿಂದ ಆರ್. ಬಂಗೇರಾ, ಸುಮಾ ಎಂ. ಪೂಜಾರಿ, ಶಾಲಿನಿ ಎಸ್. ಶೆಟ್ಟಿ, ಸಲಹಾ ಸಮಿತಿಯ ಸದಸ್ಯರಾದ ಬಿ. ಆರ್. ಪೂಂಜಾ, ಎನ್. ಎಂ. ಸನೀಲ್, ವಿಶೇಷ ಆಮಂತ್ರಿತ ಸದಸ್ಯರಾದ ವಿಜಯಕುಮಾರ್ ಕೆ. ಕೋಟ್ಯಾನ್, ಉಷಾ ವಿ. ಶೆಟ್ಟಿ, ಹರೀಶ್ ಜೆ. ಪೂಜಾರಿ, ಸುಜಾತಾ ಸುಧಾಕರ್ ಉಚ್ಚಿಲ್, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್, ಕಾರ್ಯದರ್ಶಿ ಶಕೀಲಾ ಪಿ. ಶೆಟ್ಟಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ವನಿತಾ ವೈ. ನೋಂದ ಮತ್ತು ದೊಡ್ಡಗುತ್ತು ಭುಜಂಗ ಶೆಟ್ಟಿ, ಭೋಜಾ ಎಂ. ಶೆಟ್ಟಿ, ವಿ. ಕೆ. ಶೆಟ್ಟಿ (ಟೆಂಡರ್ ಫ್ರೆಶ್), ಸುಜಾತಾ ಗುಣಪಾಲ್ ಶೆಟ್ಟಿ, ಬಿಸಿಸಿಐ ನಿರ್ದೇಶಕ ಪುರುಷೋತ್ತಮ ಎಸ್. ಕೋಟ್ಯಾನ್, ರತ್ನಾ ಕೆ. ಶೆಟ್ಟಿ, ಪ್ರಮೋದಾ ಎಸ್. ಶೆಟ್ಟಿ ಸೇರಿದಂತೆ ಸಂಘದ ಹಿತೈಷಿಗಳು ಉಪಸ್ಥಿತರಿದ್ದರು.
ಪೂರ್ವಜರು ಅನಾನುಕೂಲದ ದೃಷ್ಟಿಯಿಂದ ಶುಭಕಾರ್ಯ ನಿಷೇಧಿಸಿದ್ದರು. ಶಾಸ್ತ್ರದಲ್ಲೇ ಆಷಾಡ ಮಾಸ ಅಶುಭ ಎಂದು ಉಲ್ಲೇಖೀಸಿಲ್ಲ. ಮದುವೆಯ ಮೊದಲ ವರ್ಷದ ಮೊದಲ ಆಷಾಢದಲ್ಲಿ ಅತ್ತೆ-ಸೊಸೆ ಒಂದೇ ಮನೆಯಲ್ಲಿ ವಾಸಿಸುವುದು ನಿಷೇಧ ಎನ್ನುವ ಕಾರಣ ಮತ್ತು ಆಷಾಢದಲ್ಲಿ ಅಧಿಕ ಮಳೆ ಆಗುವುದರಿಂದ ಹೊಲ ಗದ್ದೆಗಳಲ್ಲಿ ಮತ್ತು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ಕಾರ್ಯಗಳು ಹೆಚ್ಚಿರುತ್ತವೆ. ಅತ್ತೆ ಸೊಸೆಗೆ ಹೆಚ್ಚು ಕೆಲಸದ ಒತ್ತಡ ತರಬಹುದು, ಇದರಿಂದ ಅವರಿಬ್ಬರಲ್ಲಿ ವೈಮನಸ್ಸುವುಂಟಾಗಿ ಜಗಳಕ್ಕೆ ಕಾರಣ ಆಗಬಹುದು ಎಂದು ಒಂದು ತಿಂಗಳ ಕಾಲ ತವರು ಮನೆಗೆ ಕಳಿಸುವ ಸಂಪ್ರದಾಯ ಹಿಂದೆಯಿತ್ತು ಎನ್ನುವುದಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಲಕ್ಷಿ¾à ಎನ್. ಕೋಟ್ಯಾನ್ ಆಷಾಢ ಬಗ್ಗೆ ಸ್ಥೂಲವಾಗಿ ವಿವರಿಸಿದರು.
ಸುಧಾ ಎಲ್. ವಿ. ಅಮೀನ್ ಅವರು ಸಾಂಪ್ರದಾಯಿಕ ಅಮವಾಸ್ಯೆ ಕಷಾಯ ನೀಡಿದರು. ಗೌರವ ಪ್ರಧಾನ ಕೋಶಾಧಿಕಾರಿ ಸುಧಾಕರ್ ಉಚ್ಚಿಲ್ ಸ್ವಾಗತಿಸಿದರು.
ಗೌರವ ಪ್ರಧಾನ ಕಾರ್ಯದರ್ಶಿ ಸುಜತಾ ಆರ್. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸದಸ್ಯೆಯರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ – ವರದಿ : ರೋನ್ಸ್ ಬಂಟ್ವಾಳ್