Advertisement
ಫೆ. 11ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಸಂಜೆ ಕನ್ನಡ ಸಂಘ ಸಾಂತಾಕ್ರೂಜ್ ಇದರ 59ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಲ್. ವಿ. ಅಮೀನ್ ಅವರು ವಹಿಸಿದ್ದರು.
Related Articles
Advertisement
ಅತಿಥಿಗಳು ಮತ್ತು ದಾನಿಗಳಾದ ಸದಾನಂದ ಉಚ್ಚಿಲ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವರಾಮ ಕೋಟ್ಯಾನ್, ಪ್ರಸನ್ನ ಶೆಟ್ಟಿ, ಲಿಂಗಪ್ಪ ಅಮೀನ್, ಆರ್.ಪಿ. ಹೆಗ್ಡೆ, ಸಿಎ ಪ್ರಕಾಶ್ ಶೆಟ್ಟಿ, ದಿನೇಶ್ ಬಿ. ಅಮೀನ್, ಸುಮಾ ಎಂ. ಪೂಜಾರಿ, ಉಷಾ ವಿ. ಶೆಟ್ಟಿ ಮತ್ತಿತರರನ್ನೊಳಗೊಂಡು ಸಂಘವು ವಾರ್ಷಿಕವಾಗಿ ಕೊಡಮಾಡುವ ಶೈಕ್ಷಣಿಕ ವಿದ್ಯಾರ್ಥಿ ವೇತನವನ್ನು ವಿತರಿಸಿ ಶುಭ ಹಾರೈಸಿದರು.
ಸಂಘದ ಉಪಾಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಗೌರವ ಕೋಶಾಧಿಕಾರಿ ಸಿಎ ರಮೇಶ್ ಎ.ಶೆಟ್ಟಿ, ಜತೆ ಕೋಶಾಧಿಕಾರಿ ಆರ್. ಪಿ. ಹೆಗ್ಡೆ, ಜತೆ ಕಾರ್ಯದರ್ಶಿ ಚಂದ್ರಹಾಸ ಜೆ. ಕೋಟ್ಯಾನ್, ಸಲಹಾ ಸಮಿತಿಯ ಸದಸ್ಯರಾದ ನಾರಾಯಣ ಶೆಟ್ಟಿ, ಬಿ. ಡಿ. ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಶಾರದಾ ಎಸ್. ಪೂಜಾರಿ ಸ್ವಾಗತಿಸಿದರು. ಮಹಿಳಾ ವಿಭಾಗದ ಸದಸ್ಯೆಯರು ಪ್ರಾರ್ಥನೆಗೈದರು. ಮಹಿಳಾ ವಿಭಾಗದ ವನಿತಾ ವೈ. ನೊಂಡಾ, ಶಾಲಿನಿ ಜಿ. ಶೆಟ್ಟಿ, ಶಕೀಲಾ ಪಿ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಎಲ್. ವಿ. ಅಮೀನ್ ಅವರು ಅತಿಥಿಗಳನ್ನು ಶಾಲು ಹೊದೆಸಿ, ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್. ಶೆಟ್ಟಿ ವಾರ್ಷಿಕ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣ ಸಮಿತಿಯ ಕಾರ್ಯದರ್ಶಿ ಸುಧಾಕರ ಉಚ್ಚಿಲ್ ವಿದ್ಯಾರ್ಥಿಗಳ ಯಾದಿಯನ್ನು ವಾಚಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಘದ ಸದಸ್ಯರು, ಮಕ್ಕಳಿಂದ ನೃತ್ಯಾವಳಿಗಳು ಪ್ರದರ್ಶನಗೊಂಡವು. ದಿನೇಶ್ ಕಂಕನಾಡಿ ರಚಿಸಿ ಭಾಸ್ಕರ್ ಸಸಿಹಿತ್ಲು ನಿರ್ದೇಶಿಸಿದ “ಯಮುನ ದಾನೆ ನಮೂನೆ’ ತುಳು ಹಾಸ್ಯಮಯ ನಾಟಕವನ್ನು ಸಪ್ತಸ್ವರ ಕಲ್ಚರಲ್ ಅಸೋಸಿಯೇಶನ್ ಮುಂಬಯಿ ಕಲಾವಿದರು ಪ್ರದರ್ಶಿಸಿದರು. ಮನೋಹರ್ ನಂದಳಿಕೆ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಲಕ್ಷ್ಮೀ ಎನ್. ಕೋಟ್ಯಾನ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ನಮ್ಮ ಹಿರಿಯರು ಇಂತಹ ಸಂಘ-ಸಂಸ್ಥೆಗಳನ್ನು ಕಟ್ಟಿರುವುದು ನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಬೆಳೆಸಲು ಎಂಬುದನ್ನು ಮರೆಯು ವಂತಿಲ್ಲ. ನಮ್ಮ ಸಂಘದ ಅಂತರಿಕ ಲೆಕ್ಕ ಪರಿಶೋಧಕರಾದ ದಿನೇಶ್ ಬಿ. ಅಮೀನ್ ಅವರು ಬಿಎಂಸಿ ಚುನಾವಣೆಯಲ್ಲಿ ಎನ್‌ಸಿಪಿ ಅಭ್ಯರ್ಥಿಯಾಗಿ ಸಾಂತಾಕ್ರೂಜ್ ಪೂರ್ವದ ವಕೋಲಾ ವಾರ್ಡ್ ಸಂಖ್ಯೆ 91ರಿಂದ ಒಬಿಸಿ ನೆಲೆಯಲ್ಲಿ ಸ್ಪರ್ಧಿಸುತ್ತಿದ್ದು, ನಾವೆಲ್ಲರೂ ಅವರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸ ಬೇಕಾಗಿದೆ. ಮುಂದಿನ ವರ್ಷ ನಮ್ಮ ಸಂಸ್ಥೆಯ ವಜ್ರ ಮಹೋತ್ಸವದ ಪರ್ವ ಕಾಲ. ಇದೊಂದು ಮಾದರಿ ವರ್ಷ ವನ್ನಾಗಿಸುವ ಅಭಿಲಾಷೆ ನಮ್ಮಲ್ಲಿದೆ. ನಾಡಿನ ಸರ್ವ ಸಹೃದಯಿಗಳ ಪ್ರೋತ್ಸಾಹದಿಂದ ಇದು ಫಲಪ್ರದ ಗೊಳಿಸುವ ಭರವಸೆ ನನಗಿದೆ – ಎಲ್. ವಿ. ಅಮೀನ್ (ಅಧ್ಯಕ್ಷರು: ಕನ್ನಡ ಸಂಘ ಸಾಂತಾಕ್ರೂಜ್). ಚಿತ್ರ-ವರದಿ: ರೋನ್ಸ್ ಬಂಟ್ವಾಳ್