Advertisement

ಇಂದಿನಿಂದ ಅಕ್ಷರ ಜಾತ್ರೆ ಕಲರವ

07:42 AM Nov 24, 2017 | |

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಅಕ್ಷರ ಜಾತ್ರೆಗೆ ಸಜ್ಜಾಗಿದೆ. ಬೆಳಗ್ಗೆ 8.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ರಾಷ್ಟ್ರ ಧ್ವಜಾರೋಹಣ ಮಾಡಲಿದ್ದು, ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌ ಅವರು ಪರಿಷತ್ತಿನ ಧ್ವಜಾರೋಹಣ ಮಾಡಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ನಾಡ ಧ್ವಜಾರೋಹಣ ಮಾಡಲಿದ್ದಾರೆ.

Advertisement

ಸಮ್ಮೇಳನಕ್ಕೆ ಚಾಲನೆ: ಮಹಾರಾಜ ಕಾಲೇಜು ಮೈದಾನದ ಪ್ರಧಾನ ವೇದಿಕೆಯಲ್ಲಿ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರು ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಈ ವೇಳೆ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಬರಗೂರು
ರಾಮಚಂದ್ರಪ್ಪ, ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ ಅವರು ಭಾಷಣ ಮಾಡಲಿದ್ದಾರೆ. ಸಾಂಸ್ಕೃತಿಕ 
ಕಾರ್ಯಕ್ರಮಗಳನ್ನು ಸಚಿವೆ ಉಮಾಶ್ರೀ ಉದ್ಘಾಟಿಸಲಿದ್ದು, ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಸ್ಮರಣ ಸಂಚಿಕೆ
ಬಿಡುಗಡೆ ಮಾಡಲಿದ್ದಾರೆ. ಸಚಿವ ತನ್ವೀರ್‌ ಸೇs… ಅವರು ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ.

ಪರಿಷತ್ತಿನ ಪುಸ್ತಕಗಳನ್ನು ಸಚಿವೆ ಡಾ.ಎಂ.ಸಿ.ಮೋಹನ ಕುಮಾರಿ ಬಿಡುಗಡೆ ಮಾಡಲಿದ್ದು, ಸಂಸದ ಪ್ರತಾಪ್‌ ಸಿಂಹ, ವಿವಿಧ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ವಿಧಾನಪರಿಷತ್‌ ಉಪಸಭಾಪತಿ ಮರಿತಿಬ್ಬೇಗೌಡ ಚಿತ್ರಕಲಾ ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ. ವಾಣಿಜ್ಯ ಮಳಿಗೆಗಳನ್ನು ಸಂಸದ ಆರ್‌.ಧ್ರುವನಾರಾಯಣ ಉದ್ಘಾಟಿಸಲಿದ್ದು, ಮೇಯರ್‌ ಎಂ.ಜೆ.ರವಿಕುಮಾರ್‌ ಮಹಾಮಂಟಪ ಉದ್ಘಾಟಿಸಲಿದ್ದಾರೆ. ಶಾಸಕ ವಾಸು ವೇದಿಕೆ, ಸಂಸದ ಸಿ.ಎಸ್‌. ಪುಟ್ಟರಾಜು ಮುಖ್ಯದ್ವಾರ ಉದ್ಘಾಟನೆ ಮಾಡಲಿದ್ದಾರೆ. 

ಸಮ್ಮೇಳನಾಧ್ಯಕ್ಷರ ಮೆರವಣಿಗೆ
ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ ಅವರನ್ನು ಬೆಳಗ್ಗೆ 9 ಗಂಟೆಗೆ ಅಲಂಕೃತ ಸಾರೋಟಿನಲ್ಲಿ ಕರೆತರಲಾಗುತ್ತದೆ. ಅಲಂಕೃತ ಎತ್ತಿನಗಾಡಿಗಳು, ಸ್ವಯಂಸೇವಕರು, ಎನ್‌ಎಸ್‌ಎಸ್‌, ಎನ್‌ಸಿಸಿ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸಂಘಗಳ ಸದಸ್ಯರು, ಪೊಲೀಸ್‌ ಬ್ಯಾಂಡ್‌, ನಾಡು-ನುಡಿ ಪ್ರತಿಬಿಂಬಿಸುವ ಎಂಟು ಸ್ತಬ್ದಚಿತ್ರಗಳು ಸೇರಿ ಸಾವಿರಾರು ಜನರೊಂದಿಗೆ ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ ನಡೆಯಲಿದೆ. ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಹೊರಟ ಮೆರವಣಿಗೆ ಅಶೋಕ ರಸ್ತೆ, ಇರ್ವಿನ್‌ ರಸ್ತೆ, ವಿಶ್ವೇಶ್ವರಯ್ಯ ವೃತ್ತ, ಸಯ್ನಾಜಿರಾವ್‌ ರಸ್ತೆ, ಕೃಷ್ಣರಾಜ ವೃತ್ತ, ಬಸವೇಶ್ವರ ವೃತ್ತ, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತದ ಮೂಲಕ ಪ್ರಧಾನ ವೇದಿಕೆಗೆ ಬರಲಿದೆ. ರಾಮಸ್ವಾಮಿ ವೃತ್ತದಿಂದ ಪ್ರಧಾನ ವೇದಿಕೆವರೆಗೆ ಪೂರ್ಣಕುಂಭ ಸ್ವಾಗತ ನೀಡಲಾಗುತ್ತದೆ.

ಗೋಷ್ಠಿಗಳು
„ಮಧ್ಯಾಹ್ನ 2ರಿಂದ 6.45ರವರೆಗೆ ಪ್ರಧಾನ ವೇದಿಕೆಯಲ್ಲಿ ಮೂರು ಗೋಷ್ಠಿಗಳು ನಡೆಯಲಿವೆ.

Advertisement

„ಮ.2ರಿಂದ 3.30ರವರೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪೊ›.ಎಸ್‌.ಜಿ.ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ

“ಶಿಕ್ಷಣ: ವರ್ತಮಾನದ ಸವಾಲುಗಳು’ ಕುರಿತು ಗೋಷ್ಠಿ ನಡೆಯಲಿದೆ. “ಪ್ರಾಥಮಿಕ ಶಿಕ್ಷಣ: ದೂರವಾಗುತ್ತಿರುವ ಕನ್ನಡ ಕುರಿತು’ ಟಿ.ಎಂ.ಕುಮಾರ್‌ ವಿಷಯ ಮಂಡಿಸಲಿದ್ದಾರೆ. “ಉನ್ನತ ಶಿಕ್ಷಣ: ಗುಣಮಟ್ಟದ ಸವಾಲುಗಳು’ ಕುರಿತು ಡಾ.ಜಯಪ್ರಕಾಶ್‌ ಮಾವಿನಕುಳಿ
ವಿಷಯ ಮಂಡಿಸಲಿದ್ದಾರೆ. “ಕನ್ನಡ ಮಾಧ್ಯಮ: ಉದ್ಯೋಗಾವಕಾಶಗಳು’ ಕುರಿತು ಡಾ.ವಿಷ್ಣುಕಾಂತ ಚಟಪಲ್ಲಿ ವಿಷಯ ಮಂಡಿಸಲಿದ್ದಾರೆ.

„ಮ.3.30ರಿಂದ 5ಗಂಟೆವರೆಗೆ ಡಾ.ಧರಣೀದೇವಿ ಮಾಲಗತ್ತಿ ಅಧ್ಯಕ್ಷತೆಯಲ್ಲಿ ದಲಿತ ಲೋಕ ದೃಷ್ಟಿ ಕುರಿತ ಎರಡನೇ ಗೋಷ್ಠಿ ನಡೆಯಲಿದೆ. “ದಲಿತ ಚಳವಳಿ: ಸಮಕಾಲೀನ ಸವಾಲುಗಳು’ ಕುರಿತು ಡಾ. ಎಚ್‌.ದಂಡಪ್ಪವಿಷಯ ಮಂಡಿಸಲಿದ್ದಾರೆ. “ಹಿಂಸೆ ಮತ್ತು
ಅಪಮಾನದ ನಿರ್ವಹಣೆ’ ಕುರಿತು ಆರ್‌.ಬಿ.ಆಗವಾನೆ ವಿಷಯ ಮಂಡಿಸಲಿದ್ದಾರೆ. “ಅಸ್ಪ್ರಶ್ಯತೆಯ ಹೊಸ ರೂಪಗಳು’ ಕುರಿತು ಡಾ.ಶಿವರುದ್ರ ಕಲ್ಲೋಳಿಕರ ವಿಷಯ ಮಂಡಿಸಲಿದ್ದಾರೆ.

„ಸಂಜೆ 5 ರಿಂದ 6.45ರವರೆಗೆ ತಿಮ್ಮಪ್ಪ ಭಟ್‌ ಅಧ್ಯಕ್ಷತೆಯಲ್ಲಿ “ಮಾಧ್ಯಮ: ಮುಂದಿರುವ ಸವಾಲುಗಳು’ ವಿಷಯ ಕುರಿತ ಗೋಷ್ಠಿ ನಡೆಯಲಿದೆ. ಎಚ್‌.ಆರ್‌.ರಂಗನಾಥ್‌ ದಿಕ್ಸೂಚಿ ಭಾಷಣ ಮಾಡಲಿದ್ದು, “ಸಾಮಾಜಿಕ ಜಾಲತಾಣ’ ಕುರಿತು ಎನ್‌.ರವಿಶಂಕರ್‌ ವಿಷಯ ಮಂಡಿಸಲಿದ್ದಾರೆ.

“ಮುದ್ರಣ ಮಾಧ್ಯಮ’ ಕುರಿತು ಎನ್‌.ಉದಯಕುಮಾರ, “ವಿದ್ಯುನ್ಮಾನ ಮಾಧ್ಯಮ’ ಕುರಿತು ಅಜಿತ್‌ ಹನುಮಕ್ಕನವರ ವಿಷಯ ಮಂಡಿಸಲಿದ್ದಾರೆ.

„ಮಹಾರಾಜ ಕಾಲೇಜು ಶತಮಾನೋತ್ಸವ ಭವನದ ಸಮಾನಾಂತರ ವೇದಿಕೆ-1ರಲ್ಲಿ ಆಧುನಿಕ ಕರ್ನಾಟಕ ನಿರ್ಮಾಣ: ಮೈಸೂರು ರಾಜರ ಕೊಡುಗೆ, ಕರ್ನಾಟಕ ಏಕೀಕರಣ ವಿಷಯ ಕುರಿತು ಗೋಷ್ಠಿಗಳು ನಡೆಯಲಿವೆ. ಕಲಾಮಂದಿರದ ಸಮಾನಾಂತರ ವೇದಿಕೆ-2ರಲ್ಲಿ ಮಕ್ಕಳ ಸಾಹಿತ್ಯ ಗೋಷ್ಠಿ, ಕವಿಗೋಷ್ಠಿ-3, ಕರ್ನಾಟಕ ಕಲಾಜಗತ್ತು ವಿಷಯ ಕುರಿತ ಗೋಷ್ಠಿಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next