Advertisement

ಸಾಹಿತ್ಯ ಸಮ್ಮೇಳನ: ನೋಂದಣಿಗೆ ಆ್ಯಪ್‌  

11:51 PM Dec 01, 2022 | Team Udayavani |

ದಾವಣಗೆರೆ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಡಿಜಿಟಲ್‌ ಮೊರೆ ಹೋಗಿರುವ ಕನ್ನಡ ಸಾಹಿತ್ಯ ಪರಿಷತ್‌, ಹಾವೇರಿಯಲ್ಲಿ ನಡೆಯುವ 86ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (ಜ. 6, 7 ಮತ್ತು 8)ದಲ್ಲಿ ಭಾಗವಹಿಸುವರ ಹೆಸರು ನೋಂದಣಿ ಮತ್ತು ಸಮ್ಮೇಳನದ ಮಾಹಿತಿಗಾಗಿ “ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ’ ಎಂಬ ಹೊಸ ಆ್ಯಪ್‌ ಸಿದ್ಧಪಡಿಸಿದೆ.

Advertisement

ಆ್ಯಪ್‌ನ ಮುಖಪುಟದಲ್ಲಿ ನೋಂದಣಿ ವಿಭಾಗ ಇಡಲಾಗಿದೆ. ಜತೆಗೆ ಕನ್ನಡ ನಾಡಿನ ಇತಿಹಾಸ, ಈವರೆಗೆ ರಾಜ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನಗಳ ವಿವರ, ಸಮ್ಮೇಳನಾಧ್ಯಕ್ಷರ ಮಾಹಿತಿ ನೀಡಲಾಗಿದೆ.

ಒಳಪುಟದಲ್ಲಿ ಸಹಾಯವಾಣಿ, ಹಾವೇರಿ, ಗೋಷ್ಠಿಗಳ ವಿವರ, ಸಮ್ಮೇಳನದ ನೀಲನಕ್ಷೆ, ಸಂಪರ್ಕ ಮತ್ತಿತರ ವಿಭಾಗ ತೆರೆಯಲಾಗಿದೆ. ಪ್ರತಿನಿಧಿ ನೋಂದಣಿ ಡಿ. 1ರಂದು ರಾತ್ರಿ 12 ಗಂಟೆಯಿಂದ ಆರಂಭವಾಗಲಿದ್ದು, ಡಿ. 18ರ ವರೆಗೆ ನಡೆಯಲಿದೆ. ಮೊದಲು ನೋಂದಣಿ ಮಾಡಿಕೊಂಡವರಿಗೆ ಆದ್ಯತೆ ನೀಡಲಾಗುವುದು. ನೋಂದಣಿ ಶುಲ್ಕ 500 ರೂ. ಗಳನ್ನು ಆನ್‌ಲೈನ್‌ನಲ್ಲೇ ಪಾವತಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next