Advertisement

ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ ಕೃಷಿ ವಿವಿಗೆ ಶಿಫ್ಟ್‌?

06:45 AM Nov 11, 2018 | |

ಧಾರವಾಡ: ಇಲ್ಲಿನ ಕರ್ನಾಟಕ ಕಲಾ ಮಹಾವಿದ್ಯಾಲಯ ಆವರಣದಲ್ಲಿ 2019ರ ಜ.4ರಿಂದ 3 ದಿನಗಳ ಕಾಲ ನಡೆಸಲು ಉದ್ದೇಶಿಸಿದ್ದ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣಕ್ಕೆ ಸ್ಥಳಾಂತರಗೊಳ್ಳು ವುದು ಬಹುತೇಕ ಖಚಿತವಾದ ಬೆನ್ನಲ್ಲೇ ಇಲ್ಲಿಯ ಹಿರಿಯ ಸಾಹಿತಿಗಳು ಸ್ಥಳಾಂತರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

2 ದಿನಗಳ ಹಿಂದೆ ಕರ್ನಾಟಕ ಕಲಾ ಕಾಲೇಜಿನ ಮೈದಾನ ವೀಕ್ಷಿಸಿದ ಜಿಲ್ಲಾಧಿಕಾರಿ ಮತ್ತು ಕಸಾಪ ಜಿಲ್ಲಾಧ್ಯಕ್ಷ ಡಾ|ಲಿಂಗರಾಜ ಅಂಗಡಿ ಕೃಷಿ ವಿವಿಗೆ ಸಮ್ಮೇಳನ ಸ್ಥಳಾಂತರ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದರು. ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದಿದ್ದರು. ಕೆಸಿಡಿ ಮೈದಾನ ನಗರದ ಹೃದಯ ಭಾಗವಾಗಿದ್ದರಿಂದ ಲಕ್ಷ ಲಕ್ಷ ಜನ ಸೇರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸೂಕ್ತವಲ್ಲ ಎನ್ನುವ ನಿರ್ಧಾರಕ್ಕೆ ಜಿಲ್ಲಾಡಳಿತ ಬಂದಿದೆ. ಇಲ್ಲಿ ಟ್ರಾμಕ್‌ ಮತ್ತು ಜನಸಂದಣಿ ನಿಯಂತ್ರಿಸುವುದು ಕಷ್ಟವಾಗುವ ಲಕ್ಷಣಗಳು ಗೋಚರಿಸುತ್ತಿದ್ದು, ಕೃಷಿ ವಿವಿ ಆವರಣವೇ ಸಮ್ಮೇಳನಕ್ಕೆ ಸೂಕ್ತ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ನಾಳೆ ಸಭೆ: ಸಾಹಿತ್ಯ ಸಮ್ಮೇಳನವನ್ನು ಕೃಷಿ ವಿವಿಗೆ ಸ್ಥಳಾಂತರ ಮಾಡಬೇಕೋ ಬೇಡವೋ ಎನ್ನುವ ಕುರಿತು ನ.12 ರಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಸಭೆ ಕರೆದಿದ್ದು, ಸಾಹಿತಿಗಳು, ಜಿಲ್ಲೆಯ ಪ್ರಮುಖರ, ರಾಜಕೀಯ ಮುಖಂಡರ ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರ ಜತೆ ಚರ್ಚಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next