Advertisement
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2-3ಸಾವಿರ ಜನರು ಸೇರುವ ನಿರೀಕ್ಷೆ ಇದೆ. ವಿಶೇಷ ಉಪನ್ಯಾಸ ಗೋಷ್ಠಿ, ಕಾವ್ಯ ಸಿಂಚನ ಗೋಷ್ಠಿ, ಸಮ್ಮೇಳನಾಧ್ಯಕ್ಷರ ವಿಶೇಷ ಉಪನ್ಯಾಸ, ಸಂಗೀತ ಗಾಯನ, ಸಂಜೆ 3:30ಕ್ಕೆ ಬಹಿರಂಗ ಅಧಿವೇಶನ, ಸಂಜೆ 4:00ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು. ಪೂಜ್ಯದೊಡ್ಡಪ್ಪ ಅಪ್ಪ ಮಹಾ ವೇದಿಕೆಯಲ್ಲಿ ನಡೆಯುವ ಸಮೇ¾ಳನವನ್ನು ಕರ್ನಾಟಕ ಜಾನಪದ ವಿವಿ ಕುಲಪತಿ ಡಾ| ಡಿ.ಬಿ. ನಾಯಕ ಉದ್ಘಾಟಿಸುವರು. ಇದಕ್ಕೂ ಮುನ್ನ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ ಮೇಯರ್ ಶರಣಕುಮಾರ ಮೋದಿ ಚಾಲನೆ ನೀಡುವರು.
ಎಂ.ಜಿ.ಬಿರಾದಾರ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು ಎಂದು ತಿಳಿಸಿದರು. ನಿವೃತ್ತ ಪ್ರಾಧ್ಯಾಪಕ ಡಾ| ವಿ.ಜಿ. ಪೂಜಾರ ಅವರ ಅಧ್ಯಕ್ಷತೆಯಲ್ಲಿ ಜರುಗುವ ಮೊದಲ ಗೋಷ್ಠಿಯಲ್ಲಿ ಸಾಹಿತಿ ಪ್ರೊ| ಶಿವರಾಜ ಶಾಸ್ತ್ರೀ ಹೇರೂರ ಅವರು ಕಾಯಕ ದಾಸೋಹ ತತ್ವ ಶರಣಬಸವರು, ಪ್ರಾಧ್ಯಾಪಕ ಡಾ| ಟಿ.ಆರ್. ಗುರುಬಸಪ್ಪ ಅವರು ಒತ್ತಡ ಮತ್ತು ಸಮಾಜ, ನಿವೃತ್ತ ಪ್ರಾಧ್ಯಾಪಕ ಪ್ರೊ| ನಾಗಣಗೌಡ ಪಾಟೀಲ ಅವರು ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ, ಸಂಶೋಧಕ ಪ್ರೊ| ಬಿ.ಎ.ಪಾಟೀಲ ಅವರು ವಚನ ಸಾಹಿತ್ಯದಲ್ಲಿ ವೈಜ್ಞಾನಿಕತೆ ಕುರಿತು ಉಪನ್ಯಾಸ ನೀಡುವರು. ನಂತರ ಗುಂಡಣ್ಣ ಡಿಗ್ಗಿ ಅವರಿಂದ
ಹಾಸ್ಯ ಲಾಸ್ಯ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ 1:30ಕ್ಕೆ ಪ್ರಾಧ್ಯಾಪಕ ಡಾ| ಬಸವಂತರಾಯ್ ಪಾಟೀಲ ಜವಳಿ ಅವರು ಸಮ್ಮೇಳನಾಧ್ಯಕ್ಷರ ವಿಶೇಷ ಉಪನ್ಯಾಸ ನೀಡುವರು. 2:30ಕ್ಕೆ ಹಿರಿಯ ಸಾಹಿತಿ ಡಾ| ವಸಂತ ಕುಷ್ಠಗಿ ಅವರ ಅಧ್ಯಕ್ಷತೆಯಲ್ಲಿ ಕಾವ್ಯ ಸಿಂಚನ ಗೋಷ್ಠಿ ಜರುಗಲಿದೆ.
Related Articles
ಲಿಂಗರಾಜ ಸಿರಗಾಪುರ, ಚಿ.ಸಿ.ಲಿಂಗಣ್ಣ, ಪ.ಮಾನು ಸಗರ, ಸಂಗಮೇಶ ಹಿರೇಮಠ, ವೆಂಕಟೇಶ ನೀರಡಗಿ ಇನ್ನೂ
ಹಲವರು ಸುದ್ದಿಗೋಷ್ಠಿಯಲ್ಲಿದ್ದರು.
Advertisement
ಸಮ್ಮೇಳನಾಧ್ಯಕ್ಷ ಪಾಟೀಲಕಲಬುರಗಿ ತಾಲೂಕು ಕಮಲಾಪುರ ಹೋಬಳಿ ಕಿಣ್ಣಿ ಸಡಕ್ ಗ್ರಾಮದ ಸಾಹಿತ್ಯಿಕ ಚಿಂತಕ ಡಾ| ಕಲ್ಯಾಣರಾವ ಪಾಟೀಲ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಾಟೀಲ ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ಹಾಗೂ ಪದವಿ ಶಿಕ್ಷಣವನ್ನು
ಕಲಬುರಗಿಯಲ್ಲಿಯೇ ಮುಗಿಸಿದ್ದಾರೆ. ವಿಮರ್ಶಾತ್ಮಕ ಲೇಖನಗಳು, ಸಂಶೋಧನಾ ಪ್ರಬಂಧಗಳು, ಅಭಿನಂದನಾ ಗ್ರಂಥಗಳು, ಜೀವನಸಾಧನೆ ಚಿತ್ರಗಳು, ಎಲ್ಲೂ ಸೇರಿ ಒಟ್ಟು 83 ಕೃತಿಗಳಿಗಾಗಿ ಕೆಲಸ ಮಾಡಿದ್ದಾರೆ. ಖುದ್ದಾಗಿ 31 ಕೃತಿ ರಚಿಸಿದ್ದಾರೆ. ಇವುಗಳಲ್ಲಿ ಭಕ್ತಿ ಭಂಡಾರಿ, ದಾಸೋಹ ಸಂಸ್ಕೃತಿ ಮತ್ತು ಸ್ವಾಮಿ ವಿವೇಕಾನಂದ ಜೀವನ ಚರಿತ್ರೆ ಪ್ರಮುಖವಾದವು. ಕನ್ನಡ ಭಾಷೆ ಮತ್ತು ಸಾಹಿತ್ಯ ಬಗ್ಗೆ ಅಪಾರ ಕಾಳಜಿ ಮತ್ತು ಕಕ್ಕುಲಾತಿ ಇರುವ ಆವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನಗರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಾಲೂಕು ಕಸಾಪ ಅಧ್ಯಕ್ಷ ಮಾಲಿಪಾಟೀಲ ತಿಳಿಸಿದರು.