Advertisement

ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಮು ಮೂಲಗಿ ಉಮೇದುವಾರಿಕೆ

03:11 PM Apr 07, 2021 | Team Udayavani |

ಧಾರವಾಡ: ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಬಯಸಿ ಜಾನಪದ ತಜ್ಞ, ಆಶು ಕವಿ ಡಾ|ರಾಮು ಮೂಲಗಿ ತಹಶೀಲ್ದಾರ್‌ಕಚೇರಿಗೆ ಬೆಂಬಲಿಗರೊಂದಿಗೆ ಆಗಮಿಸಿ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

Advertisement

ನಂತರ ಮಾತನಾಡಿ, ಜಿಲ್ಲಾ ಕನ್ನಡಸಾಹಿತ್ಯ ಪರಿಷತ್‌ಅನ್ನು ಜನಸಾಮಾನ್ಯರಕಲಾವಿದರ, ಸಾಹಿತಿಗಳ ಕೇಂದ್ರವನ್ನಾಗಿಮಾಡಿ, ರಾಜ್ಯಮಟ್ಟದಲ್ಲಿ ಗುರುತಿಸುವಂತೆಕೆಲಸ ಮಾಡುವ ಕನಸು ನನ್ನದು.ಯುವ ಸಾಹಿತಿಗಳು, ಬರಹಗಾರರು,ಕಲಾವಿದರು, ಮಹಿಳೆಯರಿಗೆ ಹೆಚ್ಚಿನಅವಕಾಶ ಕಲ್ಪಿಸುವ ದೃಷ್ಟಿಕೋನದಿಂದಒಮ್ಮೆ ಅವಕಾಶ ಕೊಡಿ ಎಂದರು.

ಬೆಂಬಲಿಗರೊಂದಿಗೆ ಸಭೆ: ನಾಮಪತ್ರಸಲ್ಲಿಕೆಗೂ ಮುನ್ನ ಬಾಸೆಲ್‌ಮಿಷನ್‌ ರಿಷ್‌ ಮೆಮೋರಿಯಲ್‌ಸಭಾಂಗಣದಲ್ಲಿ ಬೆಂಬಲಿಗರೊಂದಿಗೆಸಭೆ ಕೈಗೊಂಡು ರಾಮು ಮೂಲಗಿಅವರು ಮತಯಾಚಿಸಿದರು. ಜಿಲ್ಲೆಯಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದಅಧ್ಯಕ್ಷ ಜಿ.ಆರ್‌. ಭಟ್‌ ಮಾತನಾಡಿ,ತಳಮಟ್ಟದಲ್ಲಿ ಶ್ರಮಪಟ್ಟ ಡಾ|ರಾಮುಮೂಲಗಿ ಅವರು ಸಾಹಿತ್ಯ ಪರಿಷತ್ತಿನಅಧ್ಯಕ್ಷರಾಗುವುದು ಬಹು ಮುಖ್ಯವಾಗಿದೆ. ಇಲ್ಲದಿದ್ದರೆ ಸಾತ್ವಿಕರು ಆತ್ಮವಂಚನೆಮಾಡಿಕೊಂಡಂತಾಗುತ್ತದೆ ಎಂದರು.

ಹುಬ್ಬಳ್ಳಿಯ ನೌಕರರ ಸಂಘದ ಅಧ್ಯಕ್ಷ ಡಾ| ಪ್ರಹ್ಲಾದ ಗೆಜ್ಜಿ ಮಾತನಾಡಿ, ಹಾಲಿ ಅಧ್ಯಕ್ಷರು ಯಾವ ಕಾರಣಕ್ಕೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಆದರೆ, ಈಗ ಯಾರ ಮಾತಿಗೂ ಮಾನ್ಯತೆ ನೀಡಲಿಲ್ಲ. ಇದು ಸಾಹಿತ್ಯ ವಲಯದಲ್ಲಿ ತುಂಬಾ ಬೇಸರವನ್ನುಂಟು ಮಾಡಿದೆ ಎಂದರು.

ಡಾ|ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕಟ್ರಸ್ಟ ಅಧ್ಯಕ್ಷ ಡಾ|ಡಿ.ಎಂ.ಹಿರೇಮಠಅಧ್ಯಕ್ಷತೆ ವಹಿಸಿದ್ದರು. ನವಲಗುಂದಸರ್ಕಾರಿ ನೌಕರರ ಸಂಘದ ಅಧ್ಯಕ್ಷಎ.ಬಿ. ಕೊಪ್ಪದ, ಹಿರಿಯ ಸಂಶೋಧಕಿಹನುಮಾಕ್ಷಿ ಗೋಗಿ, ಅದರಗುಂಚಿಯಶೇಖರಗೌಡ ಪಾಟೀಲ, ಕುಂದಗೋಳದಶಂಬಯ್ಯ ಹಿರೇಮಠ, ಕಲಘಟಗಿಯವಿ.ವಿ. ಆಲೂರ, ಅಳ್ನಾವರದ ಟಿ.ಎಸ್‌.ಚೌಗಲೆ, ಅಣ್ಣಿಗೇರಿಯ ಸಂಜೀವಗೌಡಬಿ.ಎಸ್‌., ಡಾ| ವಿಶ್ವನಾಥ ಚಿಂತಾಮಣಿ ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next