Advertisement

ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ : 105 ವರ್ಷಗಳ ಬಳಿಕ ಮೊದಲ ಮಹಿಳಾ ಅಭ್ಯರ್ಥಿ!

11:32 AM Apr 06, 2021 | Team Udayavani |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಈ ಬಾರಿಯ ಚುನಾವಣೆ ಹಲವು ವಿಶೇಷತೆಗಳಿಗೆ ಮುನ್ನುಡಿ ಬರೆದಿದೆ. ಸಹಕಾರಿ ಕ್ಷೇತ್ರದ ಸಾಧಕರು, ಸರ್ಕಾರಿ ಉದ್ಯೋಗಿಗಳು, ಕನ್ನಡ ಪರ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರ ಜತೆಗೆ ಪರಿಷತ್ತಿನ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆಮಹಿಳಾ ಸಾಧಕಿಯೊಬ್ಬರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.ಸುಮಾರು 105 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ವಿಜಯಪುರಮೂಲದ ಲೇಖಕಿ ಡಾ.ಸರಸ್ವತಿ ಚಿಮ್ಮಲಗಿ ನಾಮಪತ್ರ ಸಲ್ಲಿಸಿಹೊಸತನಕ್ಕೆ ಮುನ್ನಡಿ ಬರೆದಿದ್ದಾರೆ. ಚಿಮ್ಮಲಗಿ ಅವರು ಸ್ಪರ್ಧೆಕುರಿತ ಕೆಲವು ವಿಚಾರಗಳನ್ನು “ಉದಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

Advertisement

ಪರಿಷತ್ತಿನ ಚುನಾವಣೆಯಲ್ಲಿ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆಯುತ್ತಿದ್ದೀರಿ ಹೇಗೆ ಏನು ಅನಿಸುತ್ತೆ?

ಕನ್ನಡ ಸಾಹಿತ್ಯಲೋಕಕ್ಕೆ ಮಹಿಳೆಯರ ಕೊಡುಗೆ ಕಡಿಮೆಯಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ವಿಚಾರವಿರಲಿ, ಇಲ್ಲವೆ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ವಿಚಾರವಿರಲಿ. ಮಹಿಳೆಯರೇಧ್ವನಿ ಎತ್ತದೆ ಹೋದರೆ ಫ‌ಲವಿಲ್ಲ. ಮಗು ಅಳದಿದ್ದರೆ ತಾಯಿಎದೆ ಹಾಲು ಉಣಿಸುವುದಿಲ್ಲ. ಆ ಹಿನ್ನೆಲೆಯಲ್ಲಿ ಮಹಿಳೆಯರ ಧ್ವನಿಯಾಗಿ ನಾನು ರಾಜ್ಯಾಧ್ಯಕ್ಷ ಸ್ಥಾನದ ಕಣಕ್ಕಿಳಿದ್ದಿದ್ದೇನೆ.

ಕನ್ನಡ ಸಾಹಿತ್ಯ ಪರಿಷತ್ತು ಅಂದರೆ ಪುರುಷ ಪ್ರಧಾನ ವ್ಯವಸ್ಥೆ ಎಂಬ ಮಾತಿದೆ? :

ಪರಿಷತ್ತಿನಲ್ಲಿರುವ ಪುರುಷ ಪ್ರಧಾನ ವ್ಯವಸ್ಥೆ ಕೂಡ ಬದಲಾಗಬೇಕು. ಸ್ತ್ರೀಯರಿಂದ ಏನೇನೂ ಆಗದು ಎಂಬ ತಪ್ಪುಕಲ್ಪನೆ ಈಗಲೂಇದೆ. ಮಹಿಳೆಗೆ ಅಧಿಕಾರ ಸಿಗದೆ ಆರೋಪ ಮಾಡು ವುದಸರಿಯಲ್ಲ. ಪುರುಷ ಪ್ರಧಾನ ವ್ಯವಸ್ಥೆ ಪರಿಷತ್ತಿನಲ್ಲಿ ನಿಲ್ಲ ಬೇಕು ಎಂಬ ಉದ್ದೇಶದಿಂದಲೇ ಚುನಾವಣಾ ಅಖಾಡಕ್ಕೆ ಇಳಿದ್ದೇನೆ.

Advertisement

ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಲು ಮಹಿಳೆಗೆ 105 ವರ್ಷ ಬೇಕಾಯ್ತು? :

ನಿಜ, ಇದು ದುಃಖದ ವಿಚಾರವಾಗಿದೆ. ಸೋಲೋ ಗೆಲುವೋ ಮೊದಲು ಮಹಿಳೆಯರು ಯುದ್ಧ ಕಣದಲ್ಲಿ ಇಳಿಯುವುದನ್ನು ಕಲಿಯಬೇಕು.ಆ ನಂತರ ಫ‌ಲಿತಾಂಶ ನಿರೀಕ್ಷಿಸಬೇಕು.

ಕಲ್ಯಾಣ ಕರ್ನಾಟಕದವರು ಬಾರಿ ಅಧಿಕ ಸಂಖ್ಯೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ? :

ಈ ಹಿಂದೆ ಅಧಿಕಾರ ನಡೆಸಿದವರು ಬೆಂಗಳೂರು, ಮೈಸೂ ರಿನ ಕಡೆಯವರು ಆಗಿದ್ದಾರೆ. ಹೀಗಾಗಿ ಕಲ್ಯಾಣ ಕರ್ನಾಟಕಕ್ಕೆ ಅವಕಾಶ ಸಿಗಲಿ ಎಂಬ ಕಾರಣಕ್ಕಾಗಿಯೇ ದೊಡ್ಡ ಸಂಖ್ಯೆಯಲ್ಲಿ ಅಖಾಡಕ್ಕಿಳಿದಿದ್ದಾರೆ.

ಕಲ್ಯಾಣ ಕರ್ನಾಟಕದ ಮತ ಚದುರಿಸಲು ಚಿಮ್ಮುಲಗಿ ಅವರು ಚುನಾವಣ ಅಖಾಡಕ್ಕೆ ಇಳಿಸಲಾಗಿದೆ ಎಂಬ ಆರೋಪ ಇದೆ. :

ಹೇಳುವರರು ನೂರು ಹೇಳಲಿ. ಟೀಕೆಗಳು ನನ್ನ ಎತ್ತರಕ್ಕೆ ಬೆಳಸಿವೆ. ನಾನು ಅಖಾಡಕ್ಕೆ ಇಳಿದಿರುವುದು ಕೆಲವರನ್ನು ಎದೆಗುಂದಿಸಿದೆ. ಹೀಗಾಗಿ ಆರೋಪ ಮಾಡುತ್ತಿದ್ದಾರೆ. ನಾನುಯಾರಿಗೂ ಹೆದರುವುದಿಲ್ಲ. ಯಾರ ಮತ ಚದುರಿಸಲುಅಖಾಡಕ್ಕೆ ಇಳಿದಿದ್ದಲ್ಲ.

ಸರಸ್ವತಿ ಚಿಮ್ಮಲಗಿ ಅವರು ವಿಜಯಶಾಲಿ ಆದರೆ ಏನ್‌ ಮಾಡುತ್ತೀರಿ? :

ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲ ಹಂತದಲ್ಲಿ ಮಹಿಳೆಯರಿಗೆ ಸಮಾನ ಆದ್ಯತೆ ನೀಡುತ್ತೇನೆ. ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸುತ್ತೇನೆ. ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಜತೆಗೆ ದಲಿತ ವಿಶೇಷ ಸಾಹಿತ್ಯ ಸಮ್ಮೇಳ ಆಯೋಜಿಸುತ್ತೇನೆ.

 

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next