Advertisement
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ 65ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೇರವೇರಿಸಿಮಾತನಾಡಿದ ಅವರು, ಯುವಜನತೆ ಓದಿನ ಜೊತೆ ಜೊತೆಗೆ ಕನ್ನಡ ಸಾಹಿತ್ಯ, ಸಂಸ್ಕೃತಿಕ ಹಾಗೂ ಕಲೆಯಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು. ಪರಂಪರೆಯ ವಾರಸುದಾರರಾಗಿ ಕನ್ನಡತನ, ಕನ್ನಡತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
Related Articles
Advertisement
ಇದಕ್ಕೂ ಮೊದಲು ಅರಮನೆ ಆವರಣದಲ್ಲಿ ಭುವನೇಶ್ವರಿಗೆ ಪೂಜೆ ಸಲ್ಲಿಸಲಾಯಿತು. ನಂತರ ಧ್ವಜಾರೋಹಣ ನಡೆಯಿತು. ಪೊಲೀಸ್ ಬ್ಯಾಂಡ್ ನೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗೌರವ ವಂದನೆ ಸ್ವೀಕರಿಸಿದರು.
ಶಾಸಕರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಎನ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಎಸ್‌ಪಿ ರಿಷ್ಯಂತ್ ಇತರರಿದ್ದರು.
ಭಾರತೀಯ ಸಾಹಿತ್ಯ ಲೋಕದಲ್ಲಿ ಕನ್ನಡ ವಿಶೇಷ ಛಾಪು :
ತಿ.ನರಸೀಪುರ: ಭಾರತೀಯ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ, ಅತಿ ಹೆಚ್ಚಿನ ಜ್ಞಾನ
ಪೀಠ ಪ್ರಶಸ್ತಿಯನ್ನು ಪಡೆದ ಹಿರಿಮೆ ಈ ನಾಡಿಗಿದೆ. ಕನ್ನಡ ಜನತೆ ವಿಶಾಲ ಹೃದಯವಂತರು, ಬುದ್ಧಿವಂತರು, ಧೈರ್ಯವಂತರು ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ತಲಕಾಡು ಮಂಜುನಾಥ್ ಬಣ್ಣಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 65ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡಿಗರು ಶಾಂತಿ, ಸೌಹಾರ್ದತೆಯನ್ನು ಎಂದೆಂದಿಗೂ ತಮ್ಮ ಜೀವನ ಶೈಲಿಯಲ್ಲಿ ತೋರಿಸಿದ್ದಾರೆ. ಇಂತಹ ರಾಜ್ಯದ ಸೌಂದರ್ಯ ವೈಭವ ಹಾಗೂ ಕನ್ನಡ ಕಂಪು ಅಷ್ಟ ದಿಕ್ಕುಗಳಲ್ಲಿ ಪಸರಿಸಬೇಕು. ಕೆಚ್ಚೆದೆ ಕಲಿಗಳ, ಸಾಹಿತಿಗಳ ನಾಡಾದ ನಮ್ಮ ಕರ್ನಾಟಕವು ಎಂದೆಂದೂ ಹಸಿರಾಗಿರಬೇಕು, ಕನ್ನಡವು ನಿತ್ಯವಾಗಿರಬೇಕು ಎಂದು ತಿಳಿಸಿದರು.
ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ರಮೇಶ್ ಮಾತನಾಡಿ, ಕನ್ನಡ ನಾಡಿನಲ್ಲಿ ಹುಟ್ಟಿದ ಮೇಲೆ ಅದರ ಋಣವನ್ನು ತೀರಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನಿಗಿದೆ. ಭಾಷೆ, ನೆಲ, ಜಲ ಸಂರಕ್ಷಣೆಗೆ ನಾವೆಲ್ಲರೂ ಬದ್ಧರಾಗಬೇಕು ಎಂದರು. ತಹಶೀಲ್ದಾರ್ ಡಿ.ನಾಗೇಶ್ ಧ್ವಜರೋಹಣನೆರವೇರಿಸಿದ ನಂತರ ಮತನಾಡಿ, ಕನ್ನಡನಾಡಿನಲ್ಲಿರುವ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಮಾತನಾಡಿ ಬೆಳೆಸಬೇಕು. ಕನ್ನಡ ನಾಡಿನ ನಿವಾಸಿಯಾಗಿ ಕನ್ನಡದ ಮನಸ್ಸಾಗಿರಬೇಕು. ಬೇರೆ ಭಾಷೆಗಳನ್ನು ಗೌರವಿಸಬೇಕು ಎಂದರು. ನಾವು ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ, ತಾಂತ್ರಿಕ, ಸಾಹಿತ್ಯಾತ್ಮಕ, ಆಡಳಿತಾತ್ಮಕವಾಗಿ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಾಧನೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಜೈಪಾಲ್ ಭರಣಿ, ತಾಪಂ ಸದಸ್ಯ ಸಾಜಿದ್ ಅಹಮದ್, ತಾಪಂ ಇಒ ಜೆರಾಲ್ಡ್ ರಾಜೇಶ್, ಬಿಇಒ ಮರಿಸ್ವಾಮಿ, ಉಪ ತಹಶೀಲ್ದಾರ್ ಜೆ.ಕೆ. ಪ್ರಭುರಾಜ್, ನೌಕರರ ಸಂಘದಅಧ್ಯಕ್ಷ ಶಿವಶಂಕರಮೂರ್ತಿ, ದೈಹಿಕ ಶಿಕ್ಷಣ ಪರಿವೀಕ್ಷಕ ಮಹಂತಪ್ಪ ನಾಗವಾರ, ಜಿಪಂ ಮಾಜಿ ಸದಸ್ಯ ಹೊನ್ನನಾಯಕ, ವಿಚಾರವಾದಿ ಕರುಹಟ್ಟಿ ಪ್ರಭುಸ್ವಾಮಿ, ಎಡಿಎಂ ಕೃಷ್ಣ ಮೂರ್ತಿ, ಆರ್‌ಐಗಳಾದ ದೇವಣ್ಣ, ಸಿದ್ದರಾಜು, ಬಸವರಾಜು, ಮಹದೇವನಾಯ್ಕ, ಸಾಹಿತ್ಯ ಪರಿಷತ್ತಿನ ಜಯಲಕ್ಷ್ಮೀ, ಮಹದೇವಮ್ಮ, ಮಹದೇವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.