Advertisement

ಕನ್ನಡ ಶೇ. ನೂರರಷ್ಟು ಆಡಳಿತ ಭಾಷೆಯಾಗಲಿ

06:55 PM Nov 02, 2020 | Suhan S |

ಕೊಟ್ಟಿಗೆಹಾರ: ಕನ್ನಡ ಭಾಷೆಯನ್ನು ನಿತ್ಯದ ಬದುಕಿನಲ್ಲಿ ಬಳಸುವ ಮೂಲಕ ಕನ್ನಡ ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಬೇಕು. ಆಗ ಮಾತ್ರ ಕನ್ನಡ ಭಾಷೆಯ ಅಭಿವೃದ್ಧಿ ಸಾಧ್ಯ ಎಂದು ಭಾರತಿ ಬೈಲ್‌ನ ಸೇವಾಭಾರತಿ ಸಮಾಜಸೇವಾ ಸಂಘದ ಅಧ್ಯಕ್ಷ ಪ್ರದೀಪ್‌ ಹಳೇಹಳ್ಳಿ ಹೇಳಿದರು.

Advertisement

ಸೇವಾಭಾರತಿ ಸಮಾಜಸೇವಾ ಸಂಘದ ವತಿಯಿಂದ ಭಾರತಿಬೈಲ್‌ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡ ಭಾಷೆಯನ್ನು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚಾಗಿ ಬಳಸಬೇಕು. ಆಡಳಿತದಲ್ಲಿ ಶೇ. 100 ರಷ್ಟು ಕನ್ನಡ ಜಾರಿಯಾಗಬೇಕು. ಕಂಪ್ಯೂಟರ್‌, ಮೊಬೈಲ್‌ ಸೇರಿದಂತೆ ಎಲ್ಲೆಡೆ ಕನ್ನಡ ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಕನ್ನಡವನ್ನು ತಂತ್ರಜ್ಞಾನಸ್ನೇಹಿ ಭಾಷೆಯಾಗಿಸಬೇಕು ಎಂದರು.ಬಿ. ಹೊಸಳ್ಳಿ ಗ್ರಾಪಂ ಅಧ್ಯಕ್ಷ ರವಿ ಗೌಡ ಮಾತನಾಡಿ, ಕನ್ನಡಾಭಿಮಾನವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಪ್ರೋತ್ಸಾಹ ನೀಡಬೇಕು ಎಂದರು.

ಕೋವಿಡ್  ಸೇನಾನಿಗಳಾದ ಆರೋಗ್ಯ ಇಲಾಖೆಯ ಚೆನ್ನಪ್ಪ, ಹರಿಣಾಕ್ಷಿ, ಪ್ರಮೀಳಾ, ಆಶಾ ಕಾರ್ಯಕರ್ತೆ ಪದ್ಮಾಕ್ಷಿ, ಗ್ರಾಪಂ ಅಧ್ಯಕ್ಷ ರವಿ ಗೌಡ ಅವರನ್ನು ಸನ್ಮಾನಿಸಲಾಯಿತು.

ಸೇವಾಭಾರತಿ ಸಮಾಜಸೇವಾ ಸಂಘದ ಕಾರ್ಯದರ್ಶಿ ಮಹೇಶ್‌, ಖಜಾಂಚಿ ರಾಮಚಂದ್ರ, ಗ್ರಾಪಂ ಮಾಜಿ ಅಧ್ಯಕ್ಷ ರತೀಶ್‌ಗೌಡ, ಕಸ್ತೂರಿ ಬಾ ಟ್ರಸ್ಟ್‌ ಅಧ್ಯಕ್ಷ ವಿಶ್ವನಾಥ ಗೌಡ, ನಜರತ್‌ ಶಾಲೆಯ ಸಿಬ್ಬಂದಿ ಲವಕುಮಾರ್‌, ಕಾಫಿ ಬೆಳೆಗಾರರಾದ ಚೆಮಿನ್‌, ಮಹೇಂದ್ರ, ಜೇಸಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ರವಿಶಂಕರ್‌, ಹಳೆಹಳ್ಳಿ ಶಾಲೆಯ ಶಿಕ್ಷಕಿ ಸವಿತಾ ಮತ್ತಿತರರು ಇದ್ದರು.

ಬಾಳೆಹೊನ್ನೂರು ಐಟಿಐನಲ್ಲಿ ರಾಜ್ಯೋತ್ಸವ :

Advertisement

ಬಾಳೆಹೊನ್ನೂರು: ಕನ್ನಡ ನಾಡಿನ ಹಲವಾರು ಪ್ರದೇಶಗಳು ನಮ್ಮ ಮೈಸೂರು ಸಂಸ್ಥಾನಕ್ಕೆ ಸೇರಿದ ಅತ್ಯಮೂಲ್ಯ ದಿನವನ್ನು ನಾವು ಕನ್ನಡ ರಾಜ್ಯೋತ್ಸವ ಎಂದು ಹೆಮ್ಮೆಯಿಂದ ಆಚರಿಸುತ್ತಿದ್ದೇವೆ ಎಂದು ಪಟ್ಟಣ ಐಟಿಐ ಕಾಲೇಜಿನ ಉಪನ್ಯಾಸಕ ಜಿ.ಟಿ. ರುದ್ರಸ್ವಾಮಿ ತಿಳಿಸಿದರು.

ಭಾನುವಾರ ಪಟ್ಟಣದ ಐಟಿಐ ಕಾಲೇಜಿನ ಆವರಣದಲ್ಲಿ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 1956ರ ನ. 1 ಕನ್ನಡಿಗರ ಪಾಲಿಗೆ ಮರೆಯಲಾಗದ ದಿನವಾಗಿದೆ, ನಂತರ 1973ರ ನ. 2 ರಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ದಿ.ದೇವರಾಜ ಅರಸು ಅವರು ಮೈಸೂರು ಸಂಸ್ಥಾನವನ್ನು ಕರ್ನಾಟಕ ಎಂದು ಅ ಧಿಕೃತವಾಗಿ ಘೋಷಣೆ ಮಾಡಿದ್ದರು. ವಾಯುದೇವ ಹನುಮಂತ, ಸಂಗೊಳ್ಳಿ ರಾಯಣ್ಣ, ಸಂತ ಶಿಶುನಾಳ ಶರೀಫ್‌, ಕುವೆಂಪು, ಕೆಟಲ್‌, ಡಾ| ರಾಜ್‌ಕುಮಾರ್‌ ಇಂತಹ ಹಲವಾರು ಮಹನೀಯರು ಜನ್ಮ ತಾಳಿದ ಪವಿತ್ರ ಭೂಮಿ ನಮ್ಮ ಕನ್ನಡ ನಾಡು ಎಂದರು.

ಐಟಿಐ ಕಾಲೇಜಿನ ಪ್ರಾಂಶುಪಾಲ ಎಚ್‌.ಆರ್‌.

ಆನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರವಿರಾಜ್‌, ಶ್ರೀನಿವಾಸ್‌, ಪ್ರಕಾಶ್‌, ಕಿರಣ್‌ ಸೇರಿದಂತೆ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಇದ್ದರು. ವಿನೋದ್‌ ಕುಲಕರ್ಣಿ ಪ್ರಾರ್ಥಿಸಿ, ಉಪನ್ಯಾಸಕ ಅಶೋಕ್‌ ಸ್ವಾಗತಿಸಿ, ಉಮೇಶ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next