ಬೀದರ: ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಜಿಲ್ಲಾ ಬಾಲ ಭವನದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಚಿತ್ರಕಲೆ: ಪ್ರಾಥಮಿಕ ವಿಭಾಗ-ಲತಾ ಶಿವಕುಮಾರ ಪ್ರಥಮ, ಸಲೋನಿ ಮಹೇಂದ್ರಕುಮಾರ ದ್ವಿತೀಯ, ವೈಷ್ಣವಿ ತ್ಯಾತೆರಾವ್ ತೃತೀಯ. ಪ್ರೌಢ ವಿಭಾಗ- ಜಾನ್ವಿ ಕುಲಕರ್ಣಿ ಪ್ರಥಮ, ರಾಜಲಕ್ಷ್ಮೀ ಬಸವರಾಜ ದ್ವಿತೀಯ, ಅಭಿಷೇಕ ಮಲ್ಲಿಕಾರ್ಜುನ ತೃತೀಯ. ರಂಗೋಲಿ ಸ್ಪರ್ಧೆ- ಶ್ವೇತಾ ಶರಣಪ್ಪ, ಪ್ರಿಯಾಂಕಾ ಕಿಶನ್ ದ್ವಿತೀಯ. ಮತ್ತು ನಿಕಿತಾ ದಿಲೀಪ ತೃತೀಯ.
ಯೋಗಸನಾ ಸ್ಪರ್ಧೆ- ಭಗಸಿಂಗ್ ಪ್ರಾಥಮಿಕ ಶಾಲೆ ಹುಮನಾಬಾದ ಪ್ರಥಮ, ವೇಷಭೂಷಣ ಸ್ಪರ್ಧೆ-ಸಿದ್ಧಾರೂಢ ಪಬ್ಲಿಕ್ ಸ್ಕೂಲ್ ಬೀದರ, ದ್ವಿತೀಯ ಮತ್ತು ಬಾಲಕಿಯರ ಬಾಲ ಮಂದಿರ ಮೈಲೂರ ಬೀದರ ತೃತೀಯ. ನಾಡಗೀತೆ ಗ್ರೂಪ್-ಸರ್ಕಾರಿ ಪ್ರಾಥಮಿಕ ಶಾಲೆ ಹುಮನಾಬಾದ ಪ್ರಥಮ, ಸಿದ್ಧಾರೂಡ ಪಬ್ಲಿಕ್ ಸ್ಕೂಲ್ ಬೀದರ ದ್ವಿತೀಯ ಹಾಗೂ ಯುನಿಕ್ ಪಬ್ಲಿಕ್ ಶಾಲೆ ಬೀದರ ತೃತೀಯ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ವಟಗಿ ಕಾರ್ಯಕ್ರಮ ಉದ್ಘಾಟಿಸಿದರು. ಇಲಾಖೆ ಉಪ ನಿರ್ದೇಶಕ ಈರಣ್ಣಾ ಪಂಚಾಳ ಅಧ್ಯಕ್ಷತೆ ವಹಿಸಿದ್ದರು.
ಮಕ್ಕಳ ರಕ್ಷಣಾಧಿಕಾರಿ ಗೌರಿ ಶಂಕರ ಪ್ರತಾಪುರೆ, ಜಿಲ್ಲಾ ಅಭಿವೃದ್ಧಿ ಯೋಜನೆ ಅಧಿಕಾರಿ ಬಸವರಾಜ ಕುಂಬಾರ,
ನಾಟ್ಯಶ್ರೀ ನೃತ್ಯಾಲಯದ ರಾಣಿ ಸತ್ಯಮೂರ್ತಿ, ವಿಷಯ ಪರಿವೀಕ್ಷಕಿ ಪಂಡಿತ ಶೇಳ್ಕೆ ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳು, ಪಾಲಕಕರು ಉಪಸ್ಥಿತರಿದ್ದರು. ಬಾಲ ಭವನದ ಸಂಯೋಜಕ ಸೂರ್ಯಕಾಂತ ಮೋರೆ ಸ್ವಾಗತಿಸಿದರು. ಸುಧಾಕರ ನಿರೂಪಿಸಿದರು. ಚಿನ್ನಮ್ಮ ವಂದಿಸಿದರು.