Advertisement

ಎಲ್ಲೆಡೆ ರಾಜ್ಯೋತ್ಸವ ಸಂಭ್ರಮ; ಕನ್ನಡದ ಬಗ್ಗೆ ಅಭಿಮಾನವಿರಲಿ; ಸಿಎಂ

10:45 AM Nov 01, 2017 | |

ಬೆಂಗಳೂರು: ಸುದೀರ್ಘ‌ ಇತಿಹಾಸ ಹಾಗೂ ಲಿಪಿಯನ್ನು ಹೊಂದಿರುವ ಭಾಷೆ ಕನ್ನಡ. ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಹೊಂದಿರಬೇಕು ಆದರೆ ಅತಿಯಾದ ಉದಾರಿತನ ಬೇಡ. ಕನ್ನಡೇತರರು ಕನ್ನಡ ಕಲಿಯುವ ವಾತಾವರಣ ನಿರ್ಮಾಣ ಮಾಡಬೇಕು. ಯಾವುದೇ ಭಾಷೆಯನ್ನು ಕಲಿಯಿರಿ ಆದರೆ ಕನ್ನಡವನ್ನು ಕಲಿಯದೇ ಇರುವುದು ಕನ್ನಡ ನಾಡಿಗೆ ಮಾಡುವ ಅವಮಾನ, ಮೊದಲು ಕನ್ನಡಿಗ ನಂತರ ಭಾರತೀಯ ಎಂಬ ಭಾವನೆ ಪ್ರತಿಯೊಬ್ಬ ಕನ್ನಡಿಗರಲ್ಲಿ ಮೂಡಬೇಕು. ನಮ್ಮ ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

Advertisement

ಬುಧವಾರ ನಗರದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ 62ನೇ ಕನ್ನಡರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 

ಕನ್ನಡ ಸೌರಭ ಅಂತರ್ಜಾಲ ಲೋಕಾರ್ಪಣೆ
ಇದೇ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಕನ್ನಡ ಕಲಿಕೆ ಕಡ್ಡಾಯ ಈ ಕಲಿಕೆ ಸುಲಭ ಉಪಾಯ‘ ಎಂಬ ಧ್ಯೇಯದೊಂದಿಗೆ ಆರಂಭಗೊಳ್ಳುತ್ತಿರುವ ಕನ್ನಡ ಸೌರಭ ಅಂತರ್ಜಾಲವನ್ನು( www.schooleducation.kar.nic.in ) ಲೋಕಾರ್ಪಣೆಗೊಳಿಸಿದರು. 

ಬಿಜೆಪಿ ನಾಯಕರು ಗೈರು
ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರನ್ನು ಅತಿಥಿಗಳಾಗಿ ಆಹ್ವಾನಿಸಲಾಗಿತ್ತು ಆದರೆ ಎಲ್ಲಾ ನಾಯಕರು ಸಾಮೂಹಿಕ ಗೈರಾಗಿದ್ದು ವಿಶೇಷವಾಗಿತ್ತು. 

ಕನ್ನಡದಲ್ಲಿ ಮೋದಿ ರಾಜ್ಯೋತ್ಸವ ಹಾರೈಕೆ 
ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಟ್ವೀಟ್‌ ಮಾಡುವ ಮೂಲಕ ಕನ್ನಡಿಗರಿಗೆ 62ನೇ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. “ಕರ್ನಾಟಕ ರಾಜ್ಯೋತ್ಸವದಂದು ಕರ್ನಾಟಕದ ಜನತೆಗೆ ನನ್ನ ಶುಭ ಹಾರೈಕೆಗಳು. ಕರ್ನಾಟಕದ ಶ್ರೀಮಂತ ಸಂಸ್ಕೃತಿಯ ಬಗ್ಗೆ ನಮಗೆ ಹೆಮ್ಮೆ ಇದೆ. ಅದರ ಪ್ರಗತಿಗಾಗಿ ಪ್ರಾರ್ಥಿಸುತ್ತೇನೆ‘ ಎಂದು ಶುಭ ಹಾರೈಸಿದ್ದಾರೆ.

Advertisement

ಸಮಾರಂಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಆರ್‌.ರೋಶನ್‌ ಬೇಗ್‌,  ತನ್ವೀರ್‌ ಸೇಠ್ ಹಾಗೂ ಮೇಯರ್‌ ಸಂಪತ್‌ ರಾಜ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next