Advertisement

ನಾವು ನವೆಂಬರ್‌ ಕನ್ನಡಿಗರಲ್ಲ; ಕನ್ನಡದಲ್ಲೇ ದಾರಿ ತೋರಿಸುವ ವೇಝ್!

07:03 PM Oct 31, 2019 | Nagendra Trasi |

ಕನ್ನಡಿಗ ಸಾಗುತ್ತಿರುವ ಪ್ರತಿ ಹಾದಿಯಲ್ಲೂ ಇಂದು “ವೇಝ್’ ಅಪ್ಲಿಕೇಷನ್ನಿನ ಉಪಕಾರ ದೊಡ್ಡದು. ಯುರೋಪ್‌, ಅಮೆರಿಕದಲ್ಲಿ ಹೆಚ್ಚು ಜನಪ್ರಿಯವಾಗಿರುವ ವೇಝ್ ಅನ್ನು ಭಾರತಕ್ಕೆ ಕನ್ನಡದ ಮೂಲಕ ಮೊದಲು ತಂದವರು ಸುಹ್ರುತಾ ಯಜಮಾನ್‌. ಸಾಮಾನ್ಯವಾಗಿ ನಾವು  ರಸ್ತೆಯಲ್ಲಿ ಸಾಗುವಾಗ ಮ್ಯಾಪ್‌ ಅಥವಾ ನೇವಿಗೇಶನ್‌ ಅನ್ನು ಅನುಸರಿಸುತ್ತೇವೆ.

Advertisement

ಭಾರತದಲ್ಲಿ ಇವು ಇಂಗ್ಲಿಷ್‌ ಬಿಟ್ಟು, ಬೇರೆ ಭಾಷೆಯಲ್ಲಿ ಸಿಗುವುದಿಲ್ಲ. ಭಾರತದಿಂದ ಆಚೆಗೆ ಹೋದರೆ, ಐಸ್‌ಲ್ಯಾಂಡ್‌, ಸ್ವಿಜ್ಜರ್ಲೆಂಡ್‌ನ‌ಂಥ ಸಣ್ಣಪುಟ್ಟ ದೇಶದಲ್ಲೂ ಪ್ರಾದೇಶಿಕ ಭಾಷೆಯಲ್ಲಿ ಇವು ಸೇವೆ ಒದಗಿಸುವುದನ್ನು ಕಾಣಬಹುದು. ಕನ್ನಡಿಗರಿಗೆ ದಿಕ್ಸೂಚಿಯ ಈ ತಲೆನೋವನ್ನು ತಪ್ಪಿಸಿ,
ಕನ್ನಡ ಗ್ರಾಹಕರ ಕೂಟದ ಸುಹ್ರುತಾ ಯಜಮಾನ್‌ (ಬೆಂಗಳೂರು)  “ವೇಝ್’ ಅನ್ನು ಪರಿಚಯಿಸಿದ್ದಾರೆ.

ಪ್ರತಿ ಸಲ ಕಾರಿನಲ್ಲಿ ಹೋಗುವಾಗಲೂ ಇಂಗ್ಲಿಷ್‌ನಲ್ಲಿ ಮಾತಾಡುವ ನೇವಿಗೇಶನ್‌ ಬಗ್ಗೆ ಸುಹ್ರುತಾಗೆ ತಣ್ಣನೆ ಕೋಪ ಉಕ್ಕುತ್ತಿತ್ತಂತೆ. “ಇದು ಯಾಕೆ ಕನ್ನಡದಲ್ಲಿ ಮಾತಾಡಲ್ಲ?’ ಎಂಬ ಪ್ರಶ್ನೆ ಇವರಿಗೆ ಹುಟ್ಟುತ್ತಿತಂತೆ. ಜಗತ್ತಿನ ಬೇರೆಡೆ ಜನಪ್ರಿಯವಾಗಿದ್ದ, ಇಸ್ರೇಲ್‌ ಮೂಲದ ವೇಝ್
ಕಂಪನಿಯನ್ನು ಸುಹ್ರುತಾ ಸಂಪರ್ಕಿಸಿದರು.ಭಾರತದಲ್ಲಿ ಮೊದಲು ಹಿಂದಿಯಲ್ಲಿ ವೇಝ್ ಆ್ಯಪ್‌ ಬಿಡುವ ಉತ್ಸಾಹದಲ್ಲಿದ್ದ ಕಂಪನಿಯನ್ನು ಓಲೈಸಿ, ಕನ್ನಡಿಗರ ಮೊಬೈಲಿಗೆ ವೇಝ್
ಇಳಿಸುವಲ್ಲಿ ಸುಹ್ರುತಾ ಸಫ‌ಲರಾದರು. ಇದಕ್ಕಾಗಿ ಒಂದು ವರ್ಷ ಅನುವಾದ ಕೆಲಸ ನಡೆದಿತ್ತು.

ಗಾಯಕಿ ಸ್ಪರ್ಶ ಆರ್‌.ಕೆ. ಇದಕ್ಕೆ ದಿಕ್ಕುಗಳನ್ನು ಸೂಚಿಸಲು, ಮಧುರ ಕಂಠ ನೀಡಿದ್ದಾರೆ. ಕನ್ನಡಿಗರ
ಮಟ್ಟಿಗೆ ಜನಪ್ರಿಯ ದಿಕ್ಸೂಚಿ ಆ್ಯಪ್‌ ಇದು. ಸುಹ್ರುತಾ ಮೂಲತಃ ಬೆಂಗಳೂರಿನ ಬಸವನಗುಡಿ
ಯವರು. ಮ್ಯಾನೇಜ್‌ಮೆಂಟ್‌ ಕನ್ಸಲ್ಟಂಟ್‌ ಆಗಿ ಲಂಡನ್ನಿನಲ್ಲಿದ್ದಾರೆ. ಸುಹ್ರುತಾ ಅವರೊಂದಿಗೆ ಇತರೆ 11 ಮಂದಿ ಇದಕ್ಕೆ ಕೈಜೋಡಿಸಿದ್ದಾರೆ.

*ಕೀರ್ತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next