Advertisement
ಹೌದು! ನಗರದ ಆಟೋಚಾಲಕ ಗುಜ್ಜಲ ಹುಲಗಪ್ಪ ಎಂಬ ಕನ್ನಡಾಭಿಮಾನಿಗೆ ಕನ್ನಡ ಬಾವುಟ ಹಾರಿಸುವುದು, ಕನ್ನಡ ಗೀತೆಗಳನ್ನು ಕೇಳಿಸುವುದು ಎಂದರೆ ಎಲ್ಲಿಲ್ಲದ ಖುಷಿ.
Related Articles
Advertisement
ಕನ್ನಡ ರಾಜ್ಯೋತ್ಸವ ಆಚರಣೆ ಮಾತ್ರವಲ್ಲದೆ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನದಲ್ಲಿ ಕೂಡ ಅವರ ಆಟೋದ ಮೇಲೆ ತ್ರೀವರ್ಣ ಧ್ವಜ ಹಾರಾಡುತ್ತಿರುತ್ತದೆ. ನಾಡ ದೇವತೆ ಭುವನೇಶ್ವರಿ ದೇವಿ ಹಾಗೂ ಭಾರತಮಾತೆ ಭಾವಚಿತ್ರ ಹೊಂದಿರುವಧ್ವಜ ಹಾರಿಸುವುದು, ದೇಶಭಕ್ತಿ ಗೀತೆಗಳನ್ನು ಕೇಳಿಸುವುದು, ನಗರ ಸುತ್ತುವುದು ಇವರ ಪ್ರತಿವರ್ಷದ ವಾಡಿಕೆ. ಗೆಳೆಯರೊಂದಿಗೆ ಸೇರಿಕೊಂಡು ನಗರದ ಜೋಳದ ರಾಶಿ ಗುಡ್ಡದ ತುದಿಯಲ್ಲಿ ರಾಷ್ಟ್ರಧ್ವಜ ಹಾರಿಸಿ ಸಂಭ್ರಮ ಪಡುತ್ತಾರೆ. ಪ್ರತಿವರ್ಷ ನ.1, ಆ.15 ಹಾಗೂ ಜ. 26ರಂದು ನಗರದ ಮೃತ್ಯುಂಜಯ ನಗರದ 9 ನೇ ಕ್ರಾಸ್‌ನ ಆಟೋ ಸ್ಟಾಂಡ್‌ನಲ್ಲಿಧ್ವಜಾರೋಹಣ ನೆರವೇರಿಸಿ ದೇಶಾಭಿಮಾನ ತೋರುತ್ತಾರೆ.
ಉಚಿತ ಸೇವೆ: ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ದಿನದಂದು ಗರ್ಭಿಣಿ ಹಾಗೂ ವೃದ್ಧರು ಹಾಗೂ ಮಕ್ಕಳಿಗೆ ಹಣ ಪಡೆಯದೇ ತಮ್ಮ ಆಟೋದಲ್ಲಿ ಉಚಿತ ಸೇವೆ ನೀಡುತ್ತಾರೆ.ನ. 1ರಂದು ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕಾಗಿ ತುದಿಗಾಲಿನಲ್ಲಿ ನಿಂತಿರುವ ಹುಲಗಪ್ಪನವರುತಮ್ಮ ಆಟೋವನ್ನು ಈ ವರ್ಷ ವಿಶಿಷ್ಟ ರೀತಿಯಲ್ಲಿ ಅಲಂಕಾರ ಮಾಡುವ ಮೂಲಕ ಕನ್ನಡಪ್ರೇಮವನ್ನು ಮೆರೆಯಬೇಕು. ಈ ಮೂಲಕ ಕನ್ನಡಾಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವದವಿಶೇಷ ಶುಭಾಶಯಗಳನ್ನು ಪರಸ್ಪರಹಂಚಿಕೊಂಡು ನಾಡಿಗೆ ಮಾದರಿಯಾಗಬೇಕು ಎಂಬುದು ಇವರ ಸಂಕಲ್ಪ.
1998ರಿಂದ ನಾನು ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ದಿನದಂದು ನನ್ನ ಆಟೋಕ್ಕೆ ಕನ್ನಡ ಬಾವುಟ ಹಾಗೂ ರಾಷ್ಟ್ರಧ್ವಜದಿಂದ ಸಿಂಗಾರ ಮಾಡುತ್ತೇನೆ. ಜತೆಗೆ ನಾಡಿನ ಖ್ಯಾತ ಗಾಯಕರ ಕನ್ನಡ ಅಭಿಮಾನ ಸೂಸುವ ಗೀತೆ ಹಾಗೂ ದೇಶಭಕ್ತಿಗೀತೆಗಳನ್ನು ಧ್ವನಿವರ್ಧಕದ ಮೂಲಕ ದಾರಿಯುದ್ದಕ್ಕೂ ಕೇಳಿಸುತ್ತೇನೆ. ಈ ಮೂಲಕ ದೇಶಾಭಿಮಾನ, ಕನ್ನಡಾಭಿಮಾನ ಮೆರೆಯುತ್ತೇನೆ.– ಗುಜ್ಜಲ ಹುಲಗಪ್ಪ ಆಟೋಚಾಲಕ, ಹೊಸಪೇಟೆ
-ಪಿ. ಸತ್ಯನಾರಾಯಣ