Advertisement

ಅಖಂಡ ಕರ್ನಾಟಕಕ್ಕೆ ಹೋರಾಟಗಾರರ ಪಾತ್ರ ಹಿರಿದು

03:37 PM Nov 28, 2020 | Suhan S |

ಬೀದರ: ಒಡೆದು ಛಿದ್ರಗೊಂಡಿದ್ದ ಕನ್ನಡ ನಾಡನ್ನು ಒಗ್ಗೂಡಿಸಿ, ಅಖಂಡ ಕರ್ನಾಟಕ ಸ್ಥಾಪಿಸುವಲ್ಲಿ ಜಿಲ್ಲೆಯ ಅನೇಕ ಕನ್ನಡಪರ ಹೋರಾಟಗಾರರು ಹಾಗೂ ಮಠಗಳ ಪಾತ್ರ ಹಿರಿದಾಗಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

Advertisement

ನಗರದ ರಂಗ ಮಂದಿರದಲ್ಲಿ ಶುಕ್ರವಾರ ಜೈ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ, ಸ್ನೇಹಾ ಕಲ್ಚರಲ್‌ ಮತ್ತು ಸೋಶಿಯಲ್‌ ಡೆವಲಪ್‌ಮೆಂಟ್‌ಫೌಂಡೇಶನ್‌ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 65ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾರಾಷ್ಟ್ರಮತ್ತು ತೆಲಂಗಾಣದ ಗಡಿಯಲ್ಲಿರುವ ಬೀದರಜಿಲ್ಲೆಯಲ್ಲಿ ಕನ್ನಡ ಭಾಷೆ ಮಿಶ್ರವಾಗಿದೆ. ಬೀದರ ಕನ್ನಡ ಭಾಷೆ ವಿಶಿಷ್ಟತೆಯಿಂದ ಕೂಡಿದೆ ಎಂದರು. ಪ್ರತಿಫಲದ ಆಸೆ ಮಾಡದೇ ಸೇವೆ ಮಾಡಿದರೆ,ಒಂದಲ್ಲ, ಒಂದು ದಿನ ಜನರ ಆಶೀರ್ವಾದದಿಂದ ಜನನಾಯಕನ ಮನ್ನಣೆ ಸಿಕ್ಕೇ ಸಿಗುತ್ತದೆ. ಸಹಕಾರ ಕ್ಷೇತ್ರದಲ್ಲಿ ಜನಸೇವಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಮುಂದೆಯೂ ಸಲ್ಲಿಸುತ್ತೇನೆ ಎಂದರು.

ಜೈ ಕರವೇ ಜಿಲ್ಲಾಧ್ಯಕ್ಷ ಶ್ರೀಮಂತ ಸಪಾಟೆ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ ತಮ್ಮನೇತೃತ್ವದಲ್ಲಿ ಅನೇಕ ಜನಪರ ಹೋರಾಟಗಳುಅಲ್ಲದೇ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಕನ್ನಡಾಂಬೆ ವೃತ್ತಕ್ಕಾಗಿ ಹೋರಾಟ ಮಾಡಲಾಗಿದೆ. ಬರುವ ದಿನಗಳಲ್ಲಿ ಕನ್ನಡಾಂಬೆ ವೃತ್ತ ನಿರ್ಮಾಣ ಮಾಡಿ, ತಾಯಿ ಭುವನೇಶ್ವರ ಮೂರ್ತಿ ಪ್ರತಿಷ್ಠಾಪನೆ ಮಾಡುವ ಆಶಯ ಇದೆ ಎಂದರು.

ಜೈ ಕರವೇ ರಾಜ್ಯಾಧ್ಯಕ್ಷ ಅರುಣಕುಮಾರ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ,ಉದಯ ಕಾಮಿಡಿ ಪ್ರಶಸ್ತಿ ವಿಜೇತ ಲೋಕೇಶ, ಚಿತ್ರ ನಟಿ ಸ್ವಾತಿ ಚಿನ್ನು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೂರಜ್‌ಸಿಂಗ್‌ ರಾಜಪೂತ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾರ್ವತಿ ಸೋನಾರೆ, ಮಂಜುಳಾ ಪಾಟೀಲ, ಸುರೇಶ ಬಡಿಗೇರ,

ವಿಜಯಕುಮಾರ ಸೋನಾರೆ, ಜಿಪಂ ಮಾಜಿ ಅಧ್ಯಕ್ಷ ರಾಜಕುಮಾರ ಹಜಾರಿ, ಮಾಜಿ ಸದಸ್ಯ ಝರೆಪ್ಪ ಮಮದಾಪೂರೆ, ಯುವ ಉದ್ಯಮಿಗಳಾದ ವಿವೇಕ ವಾಲಿ, ಆದೀಶ ವಾಲಿ ಇತರರು ಇದ್ದರು. ದೇವಿದಾಸ ಜೋಶಿ ನಿರೂಪಿಸಿದರು.

Advertisement

ಮೆರವಣಿಗೆಗೆ ಚಾಲನೆ: ಕಾರ್ಯಕ್ರಮಕ್ಕೂ ಮುನ್ನ ನಗರದ ಕನ್ನಡಾಂಬೆ (ರೋಟರಿ) ವೃತ್ತದಿಂದ ರಂಗ ಮಂದಿರದವರೆಗೆ ನಡೆದ ಮೆರವಣಿಗೆಗೆ ಉದ್ಯಮಿ ಸಂತೋಷ ತಾಡಂಪಳ್ಳಿ ಚಾಲನೆ ನೀಡಿದರು. ಜಿಲ್ಲೆಯ ವಿವಿಧ ಗ್ರಾಮಗಳು ಕಲಾವಿದರ ಕೋಲಾಟ, ಛಕ್ರಿ ಭಜನೆ ಪ್ರದರ್ಶನ ಗಮನ ಸೆಳೆಯಿತು.

ಸೇವೆ ಮಾಡಲು ಸಹಕಾರ ಅಥವಾ ರಾಜಕೀಯ ಕ್ಷೇತ್ರ ಬೇಕಂತ ಏನಿಲ್ಲ. ಸೇವೆ ಮಾಡುವ ಮನೋಭಾವ ಇದ್ದರೆ, ಯಾವುದೇ ಅಧಿಕಾರವಿಲ್ಲದೇ ಜನರ ಸೇವೆ ಸಲ್ಲಿಸಬಹುದು. ನಿಸ್ವಾರ್ಥ ಮನೋಭಾವದಿಂದಜನಸಾಮಾನ್ಯರ ಸೇವೆ ಸಲ್ಲಿಸಿದ್ದಕ್ಕಾಗಿ ರಾಜ್ಯ ಸರ್ಕಾರ ಸಹಕಾರ ರತ್ನ ಪ್ರಶಸ್ತಿ ನೀಡಿ ಗುರುತಿಸಿದೆ. ಉಮಾಕಾಂತ ನಾಗಮಾರಪಳ್ಳಿ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next