Advertisement
ರಾಷ್ಟ್ರೋತ್ಥಾನ ಸಾಹಿತ್ಯ ಬೆಂಗಳೂರು ಶನಿವಾರ ಕೆಂಪೇಗೌಡ ನಗರದ ಕೇಶವ ಶಿಲ್ಪ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ರಿಯಾಯ್ತಿ ದರಗಳ ಪುಸ್ತಕ ಮಾರಾಟ “ಕನ್ನಡ ಪುಸ್ತಕ ಹಬ್ಬ-2022’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಷ್ಟ್ರೋತ್ಥಾನ ಪರಿಷತ್” ಭಾರತ-ಭಾರತಿ’ ಸೇರಿದಂತೆ ಹಲವು ಮೌಲಿಕ ಕೃತಿಗಳನ್ನು ಪ್ರಕಟಿಸುವ ಮೂಲಕ ಜನರಲ್ಲಿ ಓದಿನ ಅಭಿರುಚಿಯನ್ನು ಹೆಚ್ಚುವಂತೆ ಮಾಡಿದೆ. ಜತೆಗೆ ಜನರಲ್ಲಿ ರಾಷ್ಟ್ರಪ್ರಜ್ಞೆಯ ಅರಿವು ಮೂಡಿಸಿದೆ ಎಂದು ಶ್ಲಾಘಿಸಿದರು.
Related Articles
Advertisement
ಪ್ರತಿ ಹಳ್ಳಿಯಲ್ಲೂ ಪುಸ್ತಕ ಹಬ್ಬ ನಡೆಯಲಿ: ವಾನಳ್ಳಿ : ಬೆಂಗಳೂರು ಉತ್ತರ ವಿವಿಯ ಕುಲಪತಿ ನಿರಂಜನ ವಾನಳ್ಳಿ, ಅಧ್ಯಾತ್ಮಿಕ ಕ್ಷೇತ್ರಕ್ಕೆ ರಾಮಕೃಷ್ಣ ಆಶ್ರಮ ಹೇಗೆಯೋ ಅದೇ ರೀತಿಯಲ್ಲಿ ರಾಷ್ಟ್ರಪ್ರೇಮ ಬೆಳೆಸುವಲ್ಲಿ ರಾಷ್ಟ್ರೋತ್ಥಾನ ಪರಿಷತ್ ಕೆಲಸ ಮಾಡುತ್ತಿದೆ. ಇದೀಗ ಓದುಗರನ್ನು ಸೆಳೆಯುವ ನಿಟ್ಟಿನಲ್ಲಿ ಪುಸ್ತಕ ಹಬ್ಬ ಹಮ್ಮಿಕೊಂಡಿದೆ. ಈ ಹಬ್ಬ ಕನ್ನಡ ನಾಡಿನಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ನಡೆಯಬೇಕು ಎಂದು ಮನವಿ ಮಾಡಿದರು.
ಇತ್ತೀಚೆಗೆ ಪುಸ್ತಕ ಬರೆಯುವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗೆ ಕೊಳ್ಳುವವರ ಸಂಖ್ಯೆ ಕೂಡ ಇದೆ. ಆದರೆ ಈ ಇಬ್ಬರ ನಡುವೆ ಕೊಂಡಿಯಾಗಿ ಕೆಲಸ ಮಾಡುವ ಕಾರ್ಯ ನಡೆಯಬೇಕಾಗಿದೆ. ಮೊಬೈಲ್ ಮತ್ತು ಕಂಪ್ಯೂಟರ್‌ನಲ್ಲಿ ಮುಳುಗಿ ಹೋಗಿರುವ ಯುವ ಸಮೂಹವನ್ನು ಮತ್ತೆ ಪುಸ್ತಕ ಓದಿನತ್ತ ಸೆಳೆಯುವ ಕೆಲಸ ಕೂಡ ಆಗಬೇಕಾಗಿದೆ ಎಂದರು.
ರಿಯಾಯ್ತಿ ದರದಲ್ಲಿ ಪುಸ್ತಕಗಳ ಮಾರಾಟ: ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಅ.29ರಿಂದ ನ.27ರ ವರೆಗೆ ರಾಷ್ಟ್ರೋತ್ಥಾನ ಪರಿಷತ್ ರಿಯಾಯ್ತಿ ದರದಲ್ಲಿ ಕನ್ನಡ ಹಲವು ಲೇಖಕರ ಪುಸ್ತಕಗಳನ್ನು ಮಾರಾಟ ಮಾಡಲಿದೆ. ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಸೇರಿದಂತೆ ಹಲವು ರಾಜಕಾರಣಿಗಳ ಆಂಗ್ಲ ಭಾಷೆಯ ಪುಸ್ತಕಗಳು ಸಾಹಿತ್ಯಾಸಕ್ತರಿಗೆ ದೊರೆಯಲಿವೆ. ಶೇ.10ರಿಂದ 50 ರಿಯಾಯ್ತಿ ದೊರದಲ್ಲಿ ಮಾರಾಟ ನಡೆಯಲಿದೆ. ಕುವೆಂಪು, ತರಾಸು, ಅನಕೃ, ತೇಜಸ್ವಿ, ಎಸ್. ಎಲ್.ಭೈರಪ್ಪ, ಯಶವಂತ ಚಿತ್ತಾಲ ಸೇರಿದಂತೆ ಹಲವು ಸಾಹಿತಿಗಳ ಪುಸ್ತಕಗಳು ಶೇ.10 ರಿಯಾಯ್ತಿ ದರದಲ್ಲಿ ಲಭ್ಯವಿವೆ. ಸಾವರ್ಕರ್, ಬಾಲಗಂಗಾಧರ ತಿಲಕ್, ಅಂಬೇಡ್ಕರ್ ಸೇರಿದಂತೆ ಇನ್ನೂ ಕೆಲವು ಯೋಗ, ಪುರಾಣ, ಆಧ್ಯಾತ್ಮಿಕ ಸೇರಿದಂತೆ ಇನ್ನೂ ಕೆಲ ಕೃತಿಗಳು ಸಾಹಿತ್ಯಾಸಕ್ತರಿಗೆ ದೊರೆಯಲಿವೆ.