Advertisement
ವೃತ್ತಿಪರ ಕೋರ್ಸ್‌ಗಳಲ್ಲಿ ಕನ್ನಡ ಅಧ್ಯಯನ ಕಡ್ಡಾಯಗೊಳಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ವಿಟಿಯು ಆಡಳಿತ ಮಂಡಳಿ ಕನ್ನಡ ಭಾಷೆಯ ಬೋಧನೆ ಅನುಷ್ಠಾನಕ್ಕೆ ನಿರ್ಧರಿಸಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ವ್ಯಾಪ್ತಿಯ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮಾತ್ರವಲ್ಲದೆ ಸ್ವಾಯತ್ತ ಕಾಲೇಜುಗಳು ಕೂಡ ಇದನ್ನು ಜಾರಿ ಮಾಡಬೇಕಿದೆ.
ತಾಂತ್ರಿಕ ಶಿಕ್ಷಣ ಇಲಾಖೆಯ ಪಠ್ಯಪುಸ್ತಕ ರಚನ ಸಮಿತಿಯು ಪಠ್ಯಕ್ರಮ ರೂಪಿಸಿದೆ. ಕನ್ನಡ ಬಲ್ಲವರಿಗೆ ಪ್ರತ್ಯೇಕ ಪಠ್ಯ ಸಿದ್ಧಪಡಿಸಲಾಗಿದೆ. ಕನ್ನಡ ಬಾರದವರಿಗೆ ಮೂಲ ಹಂತದಿಂದಲೇ ಕಲಿಸಲು ಅನುಕೂಲವಾಗುವಂತೆ ಪ್ರತ್ಯೇಕ ಪಠ್ಯ ರಚನೆ ಮಾಡಲಾಗಿದೆ.