ಬೆಂಗಳೂರು: ಕನ್ನಡದ ಅಕ್ಷರ ನನಗೆ ಎಲ್ಲವನ್ನೂ ಕರುಣಿಸಿದೆ. ನನ್ನ ಏಳ್ಗೆಗೆ ಕನ್ನಡ ಭಾಷಾ ಸಾಹಿತ್ಯ ರಚನೆ ಕಾರಣವಾಗಿದೆ.ಹೀಗಾಗಿ ಕನ್ನಡ ಮಾತೆಗೆ ನಾನು ಸದಾ ಋಣಿ ಎಂದು ನಿತ್ಯೋತ್ಸವ ಕವಿ ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ನಾಡೋಜ ನಿಸಾರ್ ಅಹಮದ್ ಅಭಿಮಾನಿಗಳ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ “ನಿತ್ಯೋತ್ಸವ-84′ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಕನ್ನಡ ಭಾಷೆಯಲ್ಲಿನ ಕಾವ್ಯ ರಚನೆ ನನ್ನನ್ನು ಬಹು ಎತ್ತರಕ್ಕೆ ಕೊಂಡೊಯ್ದಿದೆ. ಹೀಗಾಗಿ ಮನಸು ಕೂಡ ಪ್ರಪುಲ್ಲವಾಗಿದೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಅಧ್ಯಾಪಕನಾಗಿದ್ದಾಗ ನಿತ್ಯೋ ತ್ಸವ ಕವನ ಸಂಕಲನ ಹೊರತಂದೆ. ಆ ವೇಳೆ ಸುಗಮ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಹಿರಿಯ ಗಾಯಕ ಮತ್ತು ಸಂಗೀತ ನಿರ್ದೇಶಕ ಮೈಸೂರು ಅನಂತಸ್ವಾಮಿ ಅವರಿಗೆ ನನ್ನ ನಿತ್ಯೋತ್ಸವ ಕವನ ಸಂಕಲ ಕಣ್ಣಿಗೆ ಬಿತ್ತು. ಅವರಿಂದಾಗಿಯೇ ನಿತ್ಯೋ ತ್ಸವ ಗೀತೆಗಳು ನಾಡಿನಾದ್ಯಂತ ಮನ-ಮನೆಗಳಿಗೆ ತಲುಪಿದವು. ನನ್ನ ಕವಿತೆಗಳ ಯಶಸ್ಸಿನ ಶ್ರೇಯಸ್ಸು ಮೈಸೂರು ಅನಂತಸ್ವಾಮಿ ಅವರಿಗೆ ಸಲ್ಲುತ್ತದೆ ಎಂದರು.
ಅನನ್ಯತೆ ತಂದು ಕೊಟ್ಟರು: ಹಿರಿಯ ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಮಾತನಾಡಿ, ಕನ್ನಡ ಸಾಹಿತ್ಯ ಲೋಕಕ್ಕೆ ಕೆ.ಎಸ್.ನಿಸಾರ್ ಅಹಮದ್ ಅವರ ಕೊಡುಗೆ ಅಪಾರ. ಜತೆಗೆ ಹೊಸ ಹೊಸ ಆಯಾಮಗಳಲ್ಲಿ ಕವಿತೆಗಳನ್ನು ರಚಿಸಿ ಕನ್ನಡ ಕಾವ್ಯಲೋಕ್ಕೆ ಅನನ್ಯತೆ ತಂದು ಕೊಟ್ಟ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ ಎಂದು ಶ್ಲಾ ಸಿದರು.
ಸಾಹಿತ್ಯ ಕೃಷಿ: ಅನುವಾದಕ ಎಂ.ಎಸ್.ರಘುನಾಥ್ ಮಾತನಾಡಿ, ನಿಸಾರ್ ಅಹಮದ್ ಅವರ ಮನೆ ಮಾತು ಉರ್ದು. ಆದರೂ ಕನ್ನಡ ಭಾಷೆಯ ಮೇಲಿದ್ದ ಪ್ರೀತಿ ಅವರನ್ನು ಕಾವ್ಯ ರಚನೆಗೆ ಕರೆತಂದಿತು. “ಬೆಣ್ಣೆ ಕದ್ದ ನಮ್ಮ ಕೃಷ್ಣ ‘ ಕವನ ನಿಸಾರ್ ಅವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ. ಸಂವೇದನ ಶೀಲತೆ ಅವರ ಕಾವ್ಯದಲ್ಲಿ ಹುದು ಗಿದೆ ಎಂದು ತಿಳಿಸಿದರು. ಲೇಖಕ ಮತ್ತು ಅನು ವಾದಕರಾದ ಸ.ರಘುನಾಥ್, ಪಾರ್ವತಿ ಐತಾಳ್, ಲತಾಬಾಯಿ, ಮಾಹಿರ್ ಮನ್ಸೂರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.