Advertisement

ಮಹಾನಗರ ಕನ್ನಡ ಸಂಸ್ಥೆ ವತಿಯಿಂದ  ಸ್ವರ ಸಂಧ್ಯಾ ಕಾರ್ಯಕ್ರಮ 

03:33 PM Apr 13, 2017 | Team Udayavani |

ಡೊಂಬಿವಲಿ: ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ನಮ್ಮ ಸಿರಿವಂತ ಸಂಸ್ಕೃತಿ  ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹಾನಿಯುಂಟಾಗುವ ಆತಂಕವಿದ್ದು, ನಮ್ಮ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಮುಂದಿನ ಪೀಳಿಗೆಗಳಿಗೆ ಪರಿಚಯಿಸುವ ಅಗತ್ಯವಿದೆ ಎಂದು ಖ್ಯಾತ ಹಿಂದುಸ್ತಾನಿ ಗಾಯಕ ಪಂಡಿತ ಶೇಷಗಿರಿದಾಸ ಹೇಳಿದ್ದಾರೆ. ಅವರು ಎ. 9ರಂದು ಡೊಂಬಿವಲಿ ಪಶ್ಚಿಮದ ಜನಗಣ ಮನ ಶಾಲೆಯ ಆವರಣದಲ್ಲಿ ಡೊಂಬಿವಲಿ ಮಹಾನಗರ ಕನ್ನಡ ಸಂಸ್ಥೆ ಆಯೋಜಿಸಿದ ಸ್ವರ ಸಂಧ್ಯಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

Advertisement

ನಮ್ಮ ಭಾಷೆಗೆ ಗಡಿ ಇದ್ದರೂ ಭಕ್ತಿಗೆ ಯಾವುದೇ ಗಡಿ ಇಲ್ಲ. ನಾವೆಲ್ಲರೂ ಭಗವಂತನನ್ನು ನಿರಂತರವಾಗಿ ಆರಾಧಿಸಬೇಕೆಂಬುದೇ ನಮ್ಮ  ದಾಸ, ಸಂತರ ಅನಿಸಿಕೆ. ಆದ್ದರಿಂದ ಅವರು ರಚಿಸಿದ ರಚನೆಗಳನ್ನು ಹಾಡಿ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಲ್ಲದೆ,ಪ್ರತಿ ತಾಯಂದಿರು ತಮ್ಮ ಮಗುವಿಗೆ ಒಂದಾದರೂ ದಾಸರ ಪದವನ್ನು ಕಲಿಸಬೇಕೆಂದು ಕರೆ ನೀಡಿದ ಶೇಷಗಿರಿದಾಸರು, ಡೊಂಬಿವಲಿ ಮಹಾನಗರ ಕನ್ನಡ ಸಂಸ್ಥೆಯ ಕನ್ನಡ ನಾಡು ನುಡಿಯ ಸೇವೆಯನ್ನು ಶ್ಲಾಘಿಸಿದರು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜನಗಣಮನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ| ರಾಜಕುಮಾರ್‌ ಕೋಹ್ಲಿ ಅವರು, ಸಂಗೀತಕ್ಕೆ ಭಾಷೆ ಇಲ್ಲ. ಸಂಗೀತದಿಂದ ಮನಸ್ಸು ಹಾಗೂ ಪರಿಸರವು ಪವಿತ್ರವಾಗುತ್ತದೆ. ಡೊಂಬಿವಲಿ ಮಹಾನಗರ ಕನ್ನಡ ಸಂಸ್ಥೆಯಿಂದ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಅದಕ್ಕೆ ನಮ್ಮ ಸಹಾಯ ಸಹಕಾರ ಸದಾ ಇರಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪಂಡಿತ ಶೇಷಗಿರಿದಾಸ ಹಾಗೂ ಡಾ| ರಾಜಕುಮಾರ್‌ ಕೋಹ್ಲಿ ಅವರನ್ನು ಸಂಸ್ಥೆಯ ವತಿಯಿಂದ ಶಾಲು, ಶ್ರೀಫಲ, ನೆನಪಿನ ಕಾಣಿಕೆ, ಸಮ್ಮಾನ ಪತ್ರ ನೀಡಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಸತೀಶ್‌ ಆಲಗೂರ ಅವರು ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆ ನಡೆದುಬಂದ ದಾರಿ ಹಾಗೂ ಅದರ ಯೋಚನೆ ಮತ್ತು ಯೋಜನೆಗಳನ್ನು ವಿವರಿಸಿದರು.

ಪಂ| ಶೇಷಗರಿದಾಸ ಅವರು 2 ಗಂಟೆಗಳ ಕಾಲ ತಮ್ಮ ಸುಮಧುರ ಕಂಠಸಿರಿಯಿಂದ ದಾಸವಾಣಿಯನ್ನು ಪ್ರಸ್ತುತ ಪಡಿಸಿ ನೂರಾರು ಸಂಗೀತ ಪ್ರಿಯರನ್ನು ಮಂತ್ರಮುಗªಗೊಳಿಸಿದರು. ಈ ಸ್ವರ ಸಂಧ್ಯಾ ಕಾರ್ಯಕ್ರಮಕ್ಕೆ ಶ್ರೀಪಾದದಾಸ (ಹಾರೊ¾àನಿಯಂ) ವಿಜಯ್‌ ಕುಲಕರ್ಣಿ, ಗೋಪಾಲ್‌ (ತಬಲಾ) ಅವರು ಸಹಕರಿಸಿದರು.

Advertisement

ಸಮಾರಂಭಕ್ಕೆ ಗೌರವ ಅತಿಥಿಗಳಾಗಿ ಆಗಮಿಸಿದ ಬಂಟರ ಸಂಘ ಡೊಂಬಿವಲಿ ವಿಭಾಗದ ಗೌರವ ಕಾರ್ಯದರ್ಶಿ ಆನಂದ ಶೆಟ್ಟಿ ಎಕ್ಕಾರು ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.

ವಾಸಂತಿ ದೇಶಪಾಂಡೆ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ವಿದ್ಯಾವತಿ ಆಲಗೂರ ನಿರೂಪಿಸಿದರು. ವೆಂಕಟೇಶ ಕುಲಕರ್ಣಿ ಅವರು ಗಣ್ಯರನ್ನು ಪರಿಚಯಿಸಿದರು. ಡಾ| ಬಿ.ಆರ್‌. ದೇಶಪಾಂಡೆ ವಂದಿಸಿದರು.

ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ, ಕಾರ್ಯದರ್ಶಿ ಸನತ್‌ಕುಮಾರ್‌ ಜೈನ್‌, ಡೊಂಬಿವಲಿ ಮಹಾನಗರ ಕನ್ನಡ ಸಂಘದ ಪದಾಧಿಕಾರಿಗಳಾದ ಜಿ. ಎನ್‌. ಸೋಮಾ, ಗುರುರಾಜ ಪೋತನೀಸ್‌, ದತ್ತಾತ್ರೇಯ ದೇಶಪಾಂಡೆ, ಎಂ. ಆರ್‌. ಹೊಸಕೋಟಿ, ಸೋಮಶೇಖರ ಮಸಳಿ, ಲಕ್ಷ್ಮೀ ನಾರಾಯಣ ಆಲೂರ್‌ ಹಾಗೂ ಮೊದಲಾದವರು ಉಪಸ್ಥಿತರಿದ್ದರು. 

 ಚಿತ್ರ-ವರದಿ: ಗುರುರಾಜ ಪೋತನೀಸ್‌

Advertisement

Udayavani is now on Telegram. Click here to join our channel and stay updated with the latest news.

Next