Advertisement
ಸಂಸತ್ ಸದಸ್ಯರು, ಶಾಸಕರು, ಅಧಿಕಾರಿಗಳು ಮತ್ತವರ ಕುಟುಂಬದವರಿಗೆ ಜೂ. 22ರಿಂದ 6 ವಿದೇಶಿ ಮತ್ತು 6 ಭಾರತೀಯ ಭಾಷೆಗಳನ್ನು ಆನ್‌ಲೈನ್ ಆಗಿ ಕಲಿಸಲು ಅದು ಮುಂದಾಗಿದೆ. ಶಾಸ್ತ್ರೀಯ ಭಾಷಾ ಸ್ಥಾನಮಾನ ಹೊಂದಿರುವ ಕನ್ನಡ ಆ ಪಟ್ಟಿಯಲ್ಲಿ ಇಲ್ಲದಿರುವುದು ಕನ್ನಡಿಗರ ಬೇಸರಕ್ಕೆ ಕಾರಣವಾಗಿದೆ.
ಶಾಸ್ತ್ರೀಯ ಭಾಷೆಯಾಗಿರುವ ಕನ್ನಡದ ಅವಗಣನೆ ಸರಿಯಲ್ಲ ಎಂಬುದು ಕನ್ನಡ ಹೋರಾಟಗಾರರ ಮಾತು. ತಮಿಳು, ತೆಲುಗುಗಳಿಗೆ ಕನ್ನಡಕ್ಕಿಲ್ಲದ ಮನ್ನಣೆಯನ್ನು ಏಕೆ ನೀಡಲಾಯಿತು ಎಂದು ಸ್ಪಷ್ಟನೆ ನೀಡಬೇಕು ಎಂದವರು ಆಗ್ರಹಿಸಿದ್ದಾರೆ. ಅಸಮಾನತೆಗೆ ಕಾರಣ
ಕೇಂದ್ರ ಸರಕಾರವೇ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದೆ. ಈ ಭಾಷೆಯನ್ನು ಸಂಸದರಿಗೆ ಕಲಿಸುವ ಭಾಷೆಗಳ ಪಟ್ಟಿಯಿಂದ ಕೈಬಿಟ್ಟಿರುವ ಸಚಿವಾಲಯದ ಕಾರ್ಯ ವೈಖರಿ ಖಂಡನೀಯ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
Related Articles
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಜೂ. 22ರ ಬೆಳಗ್ಗೆ 10.30ಕ್ಕೆ ಆನ್‌ಲೈನ್ ಮೂಲಕ ಭಾಷಾ ಕಲಿಕೆಗೆ ಚಾಲನೆ ನೀಡಲಿದ್ದಾರೆ. ಫ್ರಾನ್ಸ್, ಜರ್ಮನಿ, ಜಪಾನ್, ಪೋರ್ಚುಗಲ್, ಸ್ಪೈನ್, ರಷ್ಯಾ ರಾಯಭಾರಿಗಳು ಭಾಗವಹಿಸಲಿದ್ದಾರೆ. 30 ತಾಸುಗಳ ಕೋರ್ಸ್ ಇದಾಗಿದೆ.
Advertisement
ಲೋಕಸಭಾ ಸಚಿವಾಲಯ ಕನ್ನಡವನ್ನು ಕೈಬಿಟ್ಟಿರುವುದು ಅತ್ಯಂತ ನೋವಿನ ಸಂಗತಿ. ಯಾವ ಮಾನದಂಡಗಳಡಿ ಭಾರತೀಯ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬುವುದನ್ನು ಪ್ರಶ್ನಿಸಬೇಕಾಗಿದೆ.-ಟಿ.ಎಸ್. ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ