Advertisement
ಪಟ್ಟಣದ ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದ ಆಶ್ರಯದಲ್ಲಿ ಕನ್ನಡ ನುಡಿ ಸಂಭ್ರಮ-30ರ ವಿಶೇಷ ಸಾಂಸ್ಕೃತಿಕ ಸಮಾರಂಭ ಏ.15 ರಿಂದ ಏ.17 ರವರೆಗೆ ಮೂರು ದಿನಗಳ ಕಾಲ ವೈಶಿಷ್ಟ್ಯ ಸಂಪೂರ್ಣವಾಗಿ ನೆರವೇರಲಿದ್ದು, ಸಮಾರಂಭದ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
Related Articles
Advertisement
ಐತಿಹಾಸಿಕ ಹಿನ್ನೆಲೆಯ ಅಕ್ಕಿಆಲೂರಿನಲ್ಲಿ ಕನ್ನಡ ನಾಡು-ನುಡಿಯ ಜಾಗೃತ ಸಂದೇಶ ಸಾರುವ ಸಮಾರಂಭ ಇದಾಗಿದ್ದು, ನಾಡಿನ ಮೂಲೆ-ಮೂಲೆಗಳಿಂದ ಕನ್ನಡಾಭಿಮಾನಿ ಗಳ ದಂಡು ಇತ್ತಕಡೆ ಧಾವಿಸಲು ಕಾತರತೆಯಿಂದ ಎದುರು ನೋಡುತ್ತಿದೆ.
ನಾಡಿನ ವಿವಿಧ ಮಠಾಧೀಶರು, ಕಲಾವಿದರು, ಸಾಹಿತಿಗಳು, ಖ್ಯಾತ ವಾಗ್ಮಿಗಳು, ಚಲನಚಿತ್ರ ನಟ-ನಟಿಯರು, ಕಿರುತೆರೆ ನಟ-ನಟಿ ಯರು, ಜನಪ್ರತಿನಿಧಿಗಳನ್ನು ಆಹ್ವಾನಿಸಿ ನಾಡಿನ ಭಾಷೆ, ನೆಲ, ಜಲದ ರಕ್ಷಣೆ ಕಾರ್ಯ ಕೈಗೆತ್ತಿಕೊಂಡಿರುವ ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದ ಕನ್ನಡ ಸೇವೆ ಕಳೆದ 30 ವರ್ಷಗಳಿಂದ ನಿರಂತರವಾಗಿ ನಡೆಯುತ್ತ ಬಂದಿದ್ದು, ಕನ್ನಡ ನುಡಿ ಸಂಭ್ರಮ-30 ರ ಸಮಾರಂಭವನ್ನೂ ಅತಿ ವಿಶಿಷ್ಟವಾಗಿ ಹೆಣೆಯಲಾಗಿದೆ.
ಏ.15 ರಂದು ಕನ್ನಡ ಧ್ವಜಾರೋಹಣದ ಮೂಲಕ ವಿಧ್ಯುಕ್ತ ಚಾಲನೆ ಪಡೆದು ಕೊಳ್ಳಲಿರುವ ಶ್ರೀ ದುಂಡಿಬಸವೇಶ್ವರ ಜನ ಪದ ಕಲಾ ಸಂಘದ ಕನ್ನಡ ನುಡಿ ಸಂಭ್ರಮ-30ಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಜಿಲ್ಲಾ ಉತ್ಸವ ಯಾವುದಕ್ಕೂ ಕಡಿಮೆ ಇಲ್ಲ ಎನ್ನುವಂತೆ ವೈಶಿಷ್ಟ್ಯ ಪೂರ್ಣವಾಗಿ ಕಾರ್ಯಕ್ರಮಗಳನ್ನೊಳಗೊಂಡಂತೆ ರೂಪುಗೊಂಡಿರುವ ಈ ಬಾರಿಯ ಕನ್ನಡ ನುಡಿ ಸಂಭ್ರಮ ಸಾಹಿತ್ಯಾಸಕ್ತರ ಮನ ತಣಿಸುವಲ್ಲಿ ಎರಡು ಮಾತಿಲ್ಲ.
ಇಲ್ಲಿನ ಮುತ್ತಿನಕಂತಿಮಠ ಗುರುಪೀಠದ ಆವರಣದಲ್ಲಿ ಸಿದ್ಧಗೊಳ್ಳುತ್ತಿರುವ ಪ್ರಧಾನ ವೇದಿಕೆ ನಿರ್ಮಾಣ ಬಹುತೇಕ ಪೂರ್ಣ ಗೊಂಡಿದ್ದು, ಕಳೆದ ಬಾರಿ ದಾಖಲಾದ ಕನ್ನಡಾಭಿಮಾನಿಗಳ ಸಂಖ್ಯೆಗನುಸಾರವಾಗಿ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಸಂಘದ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ, ಸಾಹಿತ್ಯಾಸಕ್ತರ ಪ್ರೋತ್ಸಾಹದ ಮಧ್ಯೆ ಕನ್ನಡ ತಾಯಿ ಭುವನೇಶ್ವರಿಯ ತೇರು ಎಳೆಯಲು ಜಿಲ್ಲಾ ಮತ್ತು ರಾಜ್ಯ ಮಟ್ಟದ ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಸಮಾರಂಭವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ.
ನಾಡಿನ ಖ್ಯಾತ ಸಾಹಿತಿಗಳು, ಕಲಾವಿದರು, ಈ ಭಾಗದಲ್ಲಿ ಪ್ರಾಮಾಣಿಕ ವಾಗಿ ಸೇವೆಗೈದ ಮಹನೀ ಯರ ಹೆಸರಿನಡಿ ನಿರ್ಮಿಸಿರುವ ವೇದಿಕೆಯಲ್ಲಿ ಮಹಿಳಾ ಸಮಾವೇಶ, ಯುವ ಸಂಭ್ರಮ, ಕೃಷಿ ಗೋಷ್ಠಿ, ರೈತ ಸಮಾವೇಶ, ಸಾಂಸ್ಕೃತಿಕ ಸಂಭ್ರಮ ಸೇರಿದಂತೆ ಹತ್ತು ಹಲವಾರು ವಿಶಿಷ್ಟ ಕಾರ್ಯಕ್ರಮಗಳ ಜೋಡಣೆಯ ಮುಖಾಂತರ ನಾಡಿನ ಕನ್ನಡದ ಮನಸ್ಸುಗಳ ಕದ ತಟ್ಟುವಲ್ಲಿ ಕನ್ನಡ ನುಡಿ ಸಂಭ್ರಮ- 30ರ ಸಮಾರಂಭ ಅಕ್ಷರಶಃ ಅಕ್ಷರ ಜಾತ್ರೆಯ ವಿಶಿಷ್ಟ ಅನುಭವ ನೀಡಲಿದೆ.
- ಸಮಾರಂಭಕ್ಕೆ ಶುಭ ಹಾರೈಸುವ ಕಟೌಟ್‌ಗಳು -ಫ್ಲೆಕ್ಸ್‌ಗಳು- ಕನ್ನಡದ ಧ್ವಜಗಳು, ಕಮಾನುಗಳು- ಬಂಟಿಂಗ್ಸ್‌ಗಳ ಕಲರವ
- ನಾಡಿನ ವಿವಿಧ ಮಠಾ ಧೀಶರು, ಕಲಾವಿದರು, ಸಾಹಿತಿಗಳು, ಖ್ಯಾತ ವಾಗ್ಮಿಗಳು, ಚಲನಚಿತ್ರ ನಟ-ನಟಿಯರು, ಕಿರುತೆರೆ ನಟ-ನಟಿಯರು, ಜನಪ್ರತಿನಿಧಿ ಗಳ ಸಮಾಗಮ