Advertisement

ಸುಗಮ ಸಂಗೀತ: KSN ಅವರ ಕುರಿಗಳು ಸಾರ್, ಬೆಣ್ಣೆ ಕದ್ದ ನಮ್ಮ ಕೃಷ್ಣ ಕವಿತೆ ಮರೆಯಲು ಸಾಧ್ಯವೇ?

08:28 AM May 04, 2020 | Nagendra Trasi |

ಮಣಿಪಾಲ: ಕನ್ನಡ ಸಾಂಸ್ಕೃತಿಕ ಲೋಕದ ಶ್ರೇಷ್ಠ ಕವಿ, ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧಿಯಾಗಿದ್ದ ಕೆಎಸ್ ನಿಸಾರ್ ಅಹಮದ್(ಕೊಕ್ಕರೆ ಹೊಸಳ್ಳಿ ಶೇಖಹೈದರ್ ನಿಸಾರ್ ಅಹಮದ್) ಅವರು ಭಾನುವಾರ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಹತ್ತನೇ ವಯಸ್ಸಿನಲ್ಲಿಯೇ ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದ ಕೆಎಸ್ ಎನ್ ಅವರು ಜಲಪಾತ ಎಂಬ ಕವನ ಬರೆದು ಪ್ರತಿಭೆಯನ್ನು ತೋರ್ಪಡಿಸಿದ್ದರು.

Advertisement

ಈವರೆಗೆ 21 ಕವನ ಸಂಕಲನಗಳು, 14 ವೈಚಾರಿಕ ಕೃತಿಗಳು, 5 ಅನುವಾದ, 13 ಸಂಪಾದನಾ ಗ್ರಂಥ ಹಾಗೂ 5 ಮಕ್ಕಳ ಸಾಹಿತ್ಯ ಕೃತಿಗಳನ್ನು ಹೊರತಂದಿರುವ ಹೆಗ್ಗಳಿಕೆ ಕೆಎಸ್ ಎನ್ ಅವರದ್ದಾಗಿದೆ.

ಮನಸು ಗಾಂಧಿಬಜಾರು ಹಾಗೂ ನಿತ್ಯೋತ್ಸವ ಇವರ ಪ್ರಸಿದ್ಧ ಕವನ ಸಂಕಲನಗಳಾಗಿವೆ. ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ 1978ರಲ್ಲಿ ಹೊರಬರುವ ಮೂಲಕ ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆದಿದ್ದು ಇತಿಹಾಸವಾಗಿದೆ.

ಸಂವೇದನಾಶೀಲ ಹಾಗೂ ಜನಪ್ರಿಯ ಕವಿ ನಿಸಾರ್ ಅಹ್ಮದ್ ಅವರ “ಕುರಿಗಳು ಸಾರ್ ಕುರಿಗಳು, ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನಗಳು ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ. ನೆನದವರ ಮನದಲ್ಲಿ, ನಾನೆಂಬ ಪರಕೀಯ, ಅನಾಮಿಕ ಆಂಗ್ಲರು, ಸುಮಹೂರ್ತ, ಸಂಜೆ ಐದರ ಮಳೆ, ಸ್ವಯಂ ಸೇವೆಯ ಗಿಳಿಗಳು ಕೆಎಸ್ ಎನ್ ಅವರ ಪ್ರಸಿದ್ಧ ಕವನ ಸಂಕಲನಗಳಾಗಿವೆ.

ಇದುವರೆಗೆ ಕೆಎಸ್ ನಿಸಾರ್ ಅಹಮದ್ ಅವರ 13 ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು, ಗೀತೆಗಳು ಸಂಗೀತದೊಂದಿಗೆ ಮಿಳಿತವಾಗಿ ಕನ್ನಡ ನಾಡಿನಾದ್ಯಂತ ಜನಪ್ರಿಯಗೊಂಡಿವೆ. ಮೆಚ್ಚಿನ ಕವಿಯಾಗಿ ಗುರುತಿಸಿಕೊಂಡಿದ್ದ ಕೆಎಸ್ ಎನ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನಕೃ, ಗೊರೂರು, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ ಪಡೆದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next