Advertisement
ಮಂಗಳೂರಿನಿಂದ ಉಡುಪಿ- ಮಣಿಪಾಲಕ್ಕೆ ತೆರಳುವ ಕೆಲವೊಂದು ಖಾಸಗಿ ಬಸ್‌ಗಳಲ್ಲಿ ಊರಿನ ಹೆಸರು ತಿಳಿಸುವ ಫಲಕಗಳಲ್ಲಿ ಕನ್ನಡ ಭಾಷೆ ಮಾಯವಾಗಿದೆ. ಈ ಕುರಿತು ಸಾರಿಗೆ ಇಲಾಖೆ ಅನೇಕ ಬಾರಿ ಸಂಬಂಧ ಪಟ್ಟವರಿಗೆ ಸೂಚನೆ ನೀಡಿದರೂ ಪಾಲನೆಯಾಗುತ್ತಿಲ್ಲ. ಆಂಗ್ಲ ಭಾಷೆ ಅರಿಯದ ಮಂದಿ ಮಂಗಳೂರು ಬಸ್ ನಿಲ್ದಾಣಕ್ಕೆ ಬಂದು ಬಸ್ ಹುಡುಕುವುದು ಕಷ್ಟಸಾಧ್ಯವಾಗಿದೆ.
ಸಾಮಾಜಿಕ ಕಾರ್ಯಕರ್ತ ಜಿ.ಕೆ. ಭಟ್ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ,”ನಗರದ ಬಹು ತೇಕ ಖಾಸಗಿ ಬಸ್‌ಗಳಲ್ಲಿ ನಾಮಫಲಕ ಆಂಗ್ಲಭಾಷೆಯಲ್ಲಿದೆ. ಅದರ ಜತೆ ಮನಪಾ ವ್ಯಾಪ್ತಿಯ ಕೆಲವೊಂದು ವ್ಯಾಪಾರ ಮಳಿಗೆಗಳು, ಅಂಗಡಿಗಳು, ಮಾಲ್‌ಗಳಲ್ಲಿ ಆಂಗ್ಲ ಭಾಷೆ ಬಳಕೆ ಮಾಡಲಾಗುತ್ತಿದೆ. ಉದ್ದಿಮೆ ಪರವಾನಿಗೆ ನೀಡುವಾಗ ಸರಕಾರದ ಕಾನೂನಿನಂತೆ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕು ಎಂದಿದ್ದರೂ ಕಾನೂನು ಪಾಲನೆ ಆಗುತ್ತಿಲ್ಲ. ಇದನ್ನೂ ಓದಿ:ದಾಳಿ ಬಗ್ಗೆ ಸುಳಿವು : ಮುಖೇಶ್ ಅಂಬಾನಿ ನಿವಾಸದ ಭದ್ರತೆ ಹೆಚ್ಚಳ
Related Articles
Advertisement
ದಂಡ ಹಾಕುತ್ತೇವೆಖಾಸಗಿ ಬಸ್‌ಗಳಲ್ಲಿ ಕನ್ನಡ ಭಾಷೆ ಬಳಕೆ ಮಾಡುವುದು ಕಡ್ಡಾಯ. ಕನ್ನಡ ಬಳಕೆ ಮಾಡದ ಬಸ್‌ಗಳ ವಿರುದ್ಧ ಸಾರಿಗೆ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯಚರಣೆ ನಡೆಸಿ, ನಿಯಮ ಪಾಲಿಸದ ಬಸ್‌ಗಳಿಗೆ ದಂಡ ಹಾಕುತ್ತೇವೆ.
-ಆರ್. ವರ್ಣೇಕರ್, ಮಂಗಳೂರು ಆರ್‌ಟಿಒ