Advertisement

ಕನ್ನಡ ನಾಡು, ನುಡಿ ರಕ್ಷಣೆಗೆ ಸಹಕರಿಸಿ

12:07 PM Nov 02, 2018 | |

ತಿ.ನರಸೀಪುರ: ಕನ್ನಡ ನಾಡು, ನಾಡಿನ ರಕ್ಷಣೆ, ಬೆಳವಣಿಗೆಗೆ ಕನ್ನಡಿಗರೆಲ್ಲರೂ ಶ್ರಮಿಸುವ ಅಗತ್ಯವಿದೆ ಎಂದು ಶಾಸಕ ಡಾ.ಯತೀಂದ್ರ ಹೇಳಿದರು. ಪಟ್ಟಣದ ಮಿನಿ ವಿಧಾನಸೌಧದ ಮುಂದೆ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 63ನೇ ಕನ್ನಡ ರಾಜ್ಯೋತ್ಸವ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ರಾಜ್ಯದಲ್ಲಿ ಭಾಷಾಭಿಮಾನ ಹಾಗೂ ಒಗ್ಗಟ್ಟಿನ ಕೊರತೆ ಇದೆ. ಭಾಷೆ, ಜಲ ವಿಷಯಗಳಲ್ಲಿ ನಾವೆಲ್ಲರೂ ಒಂದಾಗಿ ದುಡಿದು ರಾಜ್ಯವನ್ನು ಸದೃಢವಾಗಿ ಕಟ್ಟಲು ಸಂಕಲ್ಪ ತೊಡಬೇಕು ಎಂದರು. ಕಸಾಪ ಅಧ್ಯಕ್ಷ ಎಂ.ರಾಜು ಮಾತನಾಡಿ, ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದ್ದರೂ ಸಿಗಬೇಕಾದ ಮಾನ್ಯತೆ ಸಿಗುತ್ತಿಲ್ಲ. ಶಾಸ್ತ್ರೀಯ ಭಾಷೆ ಎಂದು ಹೇಳಿದ್ದರೂ ಭಾಷೆಯ ಬೆಳವಣಿಗೆಗೆ ಪೂರಕ ಸೌಲಭ್ಯ ಸಿಗುತ್ತಿಲ್ಲ ಎಂದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಪರಮೇಶ್‌ ಧ್ವಜಾರೋಹಣ ನೆರವೇರಿಸಿದರು. ಬಳಿಕ ಶಾಲಾ ಮಕ್ಕಳ ಪ್ರಭಾತ್‌ ಭೇರಿ ಜರುಗಿತು. ವೇದಿಕೆ ಕಾರ್ಯಕ್ರಮದಲ್ಲಿ ಪಟ್ಟಣದ ಶಾಲಾ ಮಕ್ಕಳು ಕನ್ನಡ ನಾಡು, ನುಡಿ ಕುರಿತ ಗೀತೆಗಳಿಗೆ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನೀಡಿದರು. 

ಜಿಪಂ ಸದಸ್ಯ ಮಂಜುನಾಥ್‌, ತಾಪಂ ಸಾಯಿ ಸಮಿತಿ ಅಧ್ಯಕ್ಷ ಗಣೇಶ್‌, ಶಿರೆಸ್ತೇದಾರ್‌ ಪ್ರಭುರಾಜ್‌, ಕಸಾಪ ಪದಾಧಿಕಾರಿಗಳಾದ ಷಣ್ಮುಖಸ್ವಾಮಿ, ಸೋಸಲೆ ಮಹದೇವಶೆಟ್ಟಿ, ಸ್ವಾಮಿ, ಪ್ರಭುಸ್ವಾಮಿ, ಪಿಎಸ್‌ಐ ಅಜರುದ್ದೀನ್‌, ಬಿಇಒ ಗಂಗಾಧರ್‌, ಇಒ ಡಾ.ನಂಜೇಶ್‌ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next