Advertisement

ಕನ್ನಡದ ಮೈನಾ ಬಾಲಿವುಡ್ ನಲ್ಲಿ “ಕಲರ್ ಫುಲ್”

08:54 AM Jul 30, 2019 | Nagendra Trasi |

ಸುಮಾರು ಆರು ವರ್ಷಗಳ ಹಿಂದೆ ಕನ್ನಡದಲ್ಲಿ ತೆರೆಗೆ ಬಂದಿದ್ದ “ಮೈನಾ’ ಚಿತ್ರ ನಿಮಗೆ ನೆನಪಿರಬಹುದು. “ಆ ದಿನಗಳು’ ಖ್ಯಾತಿಯ ಚೇತನ್‌ ಮತ್ತು ನಿತ್ಯಾಮೆನನ್‌, ಮಾಳವಿಕಾ
ಮೊದಲಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ “ಮೈನಾ’ ಕನ್ನಡ ಸಿನಿಪ್ರಿಯರ ಮನಗೆದ್ದು ಬಾಕ್ಸಾಫೀಸ್‌ ನಲ್ಲೂ ಗೆಲುವಿನ ನಗೆ ಬೀರಿತ್ತು.

Advertisement

ಕನ್ನಡದಲ್ಲಿ “ಮೈನಾ’ ಚಿತ್ರ ಸಕ್ಸಸ್‌ ಆದ ಬಳಿಕ ಆ ಚಿತ್ರವನ್ನು ಹಿಂದಿಯಲ್ಲಿ ಮಾಡುವುದಾಗಿ “ಮೈನಾ’ ನಿರ್ದೇಶಕ ನಾಗಶೇಖರ್‌ ಅನೇಕ ಬಾರಿ ಹೇಳಿಕೊಂಡು ಬಂದಿದ್ದರೂ,
ವರ್ಷಗಳಾದರೂ “ಮೈನಾ’ ಚಿತ್ರ ಮಾತ್ರ ಬಾಲಿವುಡ್‌ ಹೋಗಿರಲಿಲ್ಲ. ಈಗ ನಿರ್ದೇಶಕ ನಾಗಶೇಖರ್‌ ಅವರ ಹೇಳಿಕೆ ಮತ್ತೆ ಜೀವ ಪಡೆದುಕೊಂಡಿದೆ.

“ಮೈನಾ’ ಚಿತ್ರವನ್ನು ಬಾಲಿವುಡ್‌ಗೆ ತರಲು ತೆರೆಮರೆಯಲ್ಲಿ ತಯಾರಿ ನಡೆಸುತ್ತಿರುವ ನಾಗಶೇಖರ್‌, ಈಗ ಚಿತ್ರಕ್ಕೆ “ಕಲರ್‌ಫ‌ುಲ್‌’ ಅಂತ ಟೈಟಲ್‌ ಫಿಕ್ಸ್‌ ಮಾಡಿದ್ದು, ಈ ಟೈಟಲ್‌ ಜೊತೆಗೆ ಚಿತ್ರದ ಫ‌ಸ್ಟ್‌ಲುಕ್‌ ಅನ್ನು ರಿಲೀಸ್‌ ಮಾಡಿದ್ದಾರೆ.

ಅಂದಹಾಗೆ, ಮೂಲಗಳ ಪ್ರಕಾರ ಸದ್ಯ “ಕಲರ್‌ಫ‌ುಲ್‌’ ಚಿತ್ರದ ಪ್ರಿ-ಪೊಡಕ್ಷನ್‌ ಕೆಲಸಗಳು ಜೋರಾಗಿ ನಡೆಯುತ್ತಿದ್ದು, ಹಿಂದಿಯ ಖ್ಯಾತ ನಿರ್ಮಾಪಕ ಜೋಗಿಂದರ್‌ ಸಿಂಗ್‌ ಪುತ್ರ ಭವೀಶ್‌ ಅವರನ್ನು ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪರಿಚಯಿಸುವ ಯೋಚನೆಯಲ್ಲಿದ್ದಾರೆ.

ಇನ್ನು ಚಿತ್ರದಲ್ಲಿ ಭವೀಶ್‌ಗೆ ನಾಯಕಿಯಾಗಿ ತಾನ್ಯಾ ಹೋಪ್‌ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ನಿತ್ಯಾ ಮೆನನ್‌ ನಿಭಾಯಿಸಿದ್ದ ಪಾತ್ರದಲ್ಲಿ ತಾನ್ಯಾ ಮಿಂಚಲಿದ್ದಾರೆ ಎನ್ನಲಾಗುತ್ತಿದೆ. ಇನ್ನು “ಕಲರ್‌ಫ‌ುಲ್‌’ ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ ಮಾಡುತ್ತಿದ್ದಾರೆ.

Advertisement

ಇಲ್ಲಿಯವರೆಗೆ ಕನ್ನಡ ಚಿತ್ರಗಳಲ್ಲಿ ತಮ್ಮ ಕ್ಯಾಮರ ಕಮಾಲ್‌ ತೋರಿಸಿದ್ದ ಸತ್ಯ ಹೆಗಡೆ “ಕಲರ್‌ಫ‌ುಲ್‌’ ಚಿತ್ರದ ಮೂಲಕ ಬಾಲಿವುಡ್‌ಗೂ ಎಂಟ್ರಿ ಕೊಡುತ್ತಿದ್ದಾರೆ. “ಕಲರ್‌ಫ‌ುಲ್‌’ ಚಿತ್ರದ ಹಾಡುಗಳಿಗೆ ಬಾಲಿವುಡ್‌ ಸ್ವರ ಮಾಂತ್ರಿಕ ಅರ್ಮಾನ್‌ ಮಲ್ಲಿಕ್‌ ಸಂಗೀತ ಸಂಯೋಜನೆ
ಮಾಡುತ್ತಿದ್ದಾರೆ. ಒಟ್ಟಾರೆ ತನ್ನ ಮೊದಲ ಟೈಟಲ್‌ ಪೋಸ್ಟರ್‌ ಮೂಲಕ ಪ್ರೇಕ್ಷಕರ ಮುಂದೆ ಬಂದಿರುವ “ಕಲರ್‌ಫ‌ುಲ್‌’ ಚಿತ್ರದ ಚಿತ್ರೀಕರಣ ಆಗಸ್ಟ್‌ ಕೊನೆವಾರ ಶುರುವಾಗಲಿದೆ ಎನ್ನಲಾಗುತ್ತಿದ್ದು, ತೆರೆಮೇಲೆ “ಕಲರ್‌ಫ‌ುಲ್‌’ ಹೇಗೆ ಬರಲಿದೆ ಅನ್ನೋದಕ್ಕೆ ಮುಂದಿನ ವರ್ಷದ ಮಧ್ಯಭಾಗದಲ್ಲಿ ಉತ್ತರ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next