Advertisement
ಟ್ರೇಲರ್ ಬಿಡುಗಡೆಯ ಬಳಿಕ ಮಾತನಾಡಿದ ಚಿತ್ರದ ನಿರ್ದೇಶಕ ಭರತ್ ಜಿ, “ಸ್ಫೂಕಿ ಎಂದರೆ ಭಯ. ಈ ಭಯವನ್ನು ನಮ್ಮ ಸಿನಿಮಾದಲ್ಲಿ ಸ್ವಲ್ಪ ಭಿನ್ನವಾಗಿ ತೋರಿಸಿದ್ದೇವೆ. ಇದೊಂದು ಸೈಕಾಲಜಿಕಲ್ ಹಾರರ್-ಥ್ರಿಲ್ಲರ್ ಶೈಲಿಯ ಸಿನಿಮಾ. ಟ್ರೇಲರ್‌ನಲ್ಲಿ ಕಥೆಯ ಸಣ್ಣ ಎಳೆ ಬಿಟ್ಟುಕೊಟ್ಟಿದ್ದೇವೆ. ಸಿನಿಮಾ ಬೇರೆಯ ಲೆವೆಲ್‌ನಲ್ಲಿ ಇರಲಿದೆ. ಸುಮಾರು 100 ವರ್ಷಕ್ಕೂ ಹಿಂದಿನ ಧಾರವಾಡದ ಕಾಲೇಜ್‌ನಲ್ಲಿ ಸಿನಿಮಾದ ಬಹುಭಾಗ ಶೂಟಿಂಗ್ ನಡೆಸಲಾಗಿದೆ. “ವೀರಕೇಸರಿ’ ಸಿನಿಮಾದ “ಮೆಲ್ಲುಸಿರೆ ಸವಿಗಾನ…’ ಹಾಡನ್ನು ನಮ್ಮ ಸಿನಿಮಾದಲ್ಲಿ ಹೊಸರೀತಿಯಲ್ಲಿ ಬಳಸಿಕೊಂಡಿದ್ದೇವೆ. ಸಿನಿಮಾದ ಸಬ್ಜೆಕ್ಟ್ ಮತ್ತು ಕಲಾವಿದರ ಅಭಿನಯದ ಒಂದು ಹೈಲೈಟ್ ಆದರೆ, ಮ್ಯೂಸಿಕ್, ಛಾಯಾಗ್ರಹಣ, ಸಂಕಲನ, ಆರ್ಟ್ ವರ್ಕ್ ಸಿನಿಮಾದ ಮತ್ತೂಂದು ಹೈಲೈಟ್. ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ಹೊಸ ಫೀಲ್ ಕೊಡುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Related Articles
Advertisement
ಇನ್ನು ಸಿನಿಮಾದ ಟೈಟಲ್ ನಲ್ಲಿರುವಂತೆ ಟ್ರೇಲರ್ ಕೂಡ “ಸ್ಫೂಕಿ’ಯಾಗಿ ಮೂಡಿ ಬಂದಿದ್ದು, ಅನೇಕ ತಾರೆಯರು ಟ್ರೇಲರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಟ್ರೇಲರ್ ಜೋರಾಗಿ ಸದ್ದು ಮಾಡಲು ಯಶಸ್ವಿಯಾಗಿದ್ದು, ಸಿನಿಮಾ ಇದೇ ಜ. 6ಕ್ಕೆ ತೆರೆಗೆ ಬರುತ್ತಿದೆ.