Advertisement
“ರಾಜ-ಹಂಸ’ ಚಿತ್ರದ ಒಂದು ಹಾಡನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಎರಡನೆಯ ಹಾಡನ್ನು ಸಂತೋಷ್ ಆನಂದ್‌ರಾಮ್ ಬಿಡುಗಡೆ ಮಾಡಿದ್ದರು. ಈಗ ಎಲ್ಲಾ ಹಾಡುಗಳನ್ನು ಅಜೇಯ್ ರಾವ್ ಅವರಿಂದ ಇತ್ತೀಚೆಗೆ ಬಿಡುಗಡೆ ಮಾಡಿಸಲಾಯಿತು. ಅಂದು ಗೌರಿಶಿಖರ್ ಜೊತೆಗೆ, ನಿರ್ದೇಶಕ ಜಡೇಶ್, ನಾಯಕಿ ರಂಜನಿ ರಾಘವನ್, ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಬಿ.ಸಿ. ಪಾಟೀಲ್, ಯಮುನಾ ಮುಂತಾದ ಹಲವರು ಇದ್ದರು. ಸರಳವಾಗಿ ಹೇಳಬೇಕೆಂದರೆ, ಚಿತ್ರದ ಸಂಗೀತ ನಿರ್ದೇಶಕ ಜೋಶ್ವಾ ಶ್ರೀಧರ್ ಅವರನ್ನು ಹೊರತುಪಡಿಸಿ, ಮಿಕ್ಕಂತೆಎಲ್ಲರೂ ಇದ್ದರು. ದೇಶದಲ್ಲಿಲ್ಲದ ಕಾರಣ ಜೋಶ್ವಾ ಬಂದಿರಲಿಲ್ಲ.
ತೀರ್ಮಾನಿಸಿದ್ದರಂತೆ. ಅದರಂತೆ ಚಿತ್ರದ ಕೆಲಸಗಳನ್ನೆಲ್ಲಾ ಮುಗಿಸಿ, ಈಗ ಮಾತಾಡುವುದಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಚಿತ್ರದ ಹಾಡುಗಳ ಬಿಡುಗಡೆ ಮುಗಿದಿದ್ದು, ಆಗಸ್ಟ್ ಎರಡನೆಯ ಅಥವಾ ಮೂರನೆಯ ವಾರದಲ್ಲಿ ಚಿತ್ರ ಬಿಡುಗಡೆಯಾಗುತ್ತದಂತೆ. “ಚಿತ್ರಕ್ಕೆ ಹಣ ಹಾಕಿದವರು ಒಬ್ಬಿಬ್ಬರಲ್ಲ. ಹತ್ತಾರು ಸ್ನೇಹಿತರು. ಜನರು ಮನಸ್ಫೂರ್ವಕವಾಗಿ ಚಿತ್ರ ಮಾಡುವುದಕ್ಕೆ ಮುಂದಾಗಿರುವುದರಿಂದ ಜನಮನ ಸಿನಿಮಾಸ್ ಎಂಬ ಬ್ಯಾನರ್ ಹುಟ್ಟುಹಾಕಿ, ಈ ಚಿತ್ರ ಮಾಡಿದ್ದೇವೆ’ ಎಂದರು ಗೌರಿಶಿಖರ್. ನಂತರ ಬಿ.ಸಿ. ಪಾಟೀಲ್, ಯಮುನಾ, ಅಜೇಯ್ ರಾವ್ ಮುಂತಾದವರೆಲ್ಲಾ ಚಿತ್ರತಂಡಕ್ಕೆ ಶುಭ ಕೋರುವುದರ ಜೊತೆಗೆ, ಚಿತ್ರ ಗೆಲ್ಲಲಿ ಎಂದು ಹಾರೈಸಿದರು.