Advertisement

ಹಾಲಿವುಡ್‌ ಸ್ಟೈಲ್‌ನ ಕನ್ನಡ ಸಿನಿಮಾ

02:26 PM Jun 23, 2017 | |

ಈ ಚಿತ್ರವನ್ನು ಹಾಲಿವುಡ್‌ ಸ್ಟೈಲ್‌ನಲ್ಲಿ ಮಾಡಿ ತೋರಿಸುತ್ತೇವೆ …ಹೀಗೆ ತುಂಬ ವಿಶ್ವಾಸದಿಂದ ಹೇಳಿಕೊಂಡರು ಯುವ ನಿರ್ದೇಶಕ ಭಾರ್ಗವ್‌ ಯೋಗಂಬರ್‌. ಅವರು ಹೇಳಿದ್ದು “ಡೇವಿಡ್‌’ ಬಗ್ಗೆ. ಇತ್ತೀಚೆಗೆ ಈ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಇದು ಹೊಸಬರೇ ಸೇರಿ ಮಾಡುತ್ತಿರುವ ಮರ್ಡರ್‌ ಮಿಸ್ಟರಿ ಸಿನಿಮಾ.

Advertisement

ಕೋರಿಯೋಗ್ರಾಫ‌ರ್‌ ಆಗಿರುವ ಭಾರ್ಗವ್‌ ಅವರಿಗೆ ಇದು ಮೊದಲ ಅನುಭವ. “ಸಸ್ಪೆನ್ಸ್‌, ಥ್ರಿಲ್ಲರ್‌ ಆಗಿರುವುದರಿಂದ ಇಲ್ಲಿ ತಾಂತ್ರಿಕತೆ ಸ್ಟ್ರಾಂಗ್‌ ಆಗಿರುತ್ತೆ. ಹಾಗಾಗಿ, ಇಂಟರ್‌ನ್ಯಾಷನಲ್‌ ಲೆವೆಲ್‌ನಲ್ಲಿ ಈ ಚಿತ್ರ ಮಾಡುವುದಾಗಿ’ ಹೇಳಿದ ಭಾರ್ಗವ್‌, “ಇದು ಯಾವುದೇ ಧರ್ಮಕ್ಕೆ ಸಂಬಂಧಿಸಿದ ಚಿತ್ರವಲ್ಲ. “ಡೇವಿಡ್‌’ ಅನ್ನೋದು ಇಲ್ಲಿ ವಿಲನ್‌ ಹೆಸರು. ನಾಲ್ಕು ಪಾತ್ರಗಳ ಸುತ್ತ ನಡೆಯೋ ಕಥೆ ಇದು. ಸಣ್ಣ ಬಜೆಟ್‌ನಲ್ಲೇ ಒಳ್ಳೇ ಸಿನಿಮಾ ಮಾಡುವ ಯೋಚನೆ ನಮ್ಮದು. ಬೆಂಗಳೂರಿನ ಕೆಲ ಸ್ಥಳಗಳನ್ನು ಇಲ್ಲಿ ವಿಶೇಷವಾಗಿ ತೋರಿಸುವ ಪ್ರಯತ್ನ ಮಾಡುತ್ತೇನೆ. ಯಾವುದೇ ಸಂದೇಶ ಕೊಡಲು ಚಿತ್ರ ಮಾಡುತ್ತಿಲ್ಲ.

ಒಂದು ಮನರಂಜನೆ ಜತೆಯಲ್ಲಿ ಹೊಸ μàಲ್‌ ಕೊಡುವ ಚಿತ್ರ ಇದಾಗಲಿದೆ. ಜುಲೈ 17 ರಿಂದ 20 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ’ ಅಂದರು ಭಾರ್ಗವ್‌. ಶ್ರೇಯಸ್‌ ಈ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. “ಪ್ರಕಾಶ್‌ ಬೆಳವಾಡಿ ಅವರ ರಂಗಭೂಮಿಯಲ್ಲಿ ಕೆಲಸ ಮಾಡಿದ್ದ ನಾನು, ಕೆಲ ಜಾಹಿರಾತು, ಶಾರ್ಟ್‌μಲ್ಮ್ಗಳಲ್ಲಿ ನಟಿಸಿದ್ದೇನೆ.

“ರಂಗ್‌ಬಿರಂಗಿ’ ಚಿತ್ರದಲ್ಲೂ ನಟಿಸುತ್ತಿದ್ದೇನೆ. ಇಲ್ಲಿ ಗೌತಮ್‌ ಎಂಬ ಪಾತ್ರ ನಿರ್ವಹಿಸುತ್ತಿದ್ದು, ಇದೊಂದು ಕಾಮನ್‌ ಮ್ಯಾನ್‌ವೊಬ್ಬನ ಸಿಂಪಲ್‌ ಸ್ಟೋರಿ. ಯುಎಸ್‌ ರಿಟರ್ನ್ ಆಗಿರುವ ಹುಡುಗನ ಲೈಫ್ನಲ್ಲಿ ಏನಾಗುತ್ತೆ ಎಂಬುದೇ ಕಥೆ. ಇಲ್ಲಿ ಎರಡು ಶೇಡ್‌ ಇರುವ ಪಾತ್ರ ನನ್ನದು’ ಅಂದರು ಶ್ರೇಯಸ್‌. ಸಾರಾ ಹರೀಶ್‌ ಚಿತ್ರದ ನಾಯಕಿ. 
ಮೂಲತಃ ಕೊಡಗಿನವರಾದ ಸಾರಾ, ಮಾಡೆಲಿಂಗ್‌ ಕ್ಷೇತ್ರದಲ್ಲಿದ್ದವರು. ಕಥೆ ಮತ್ತು ಪಾತ್ರ ಕೇಳಿದಾಗ, ಒಳ್ಳೇ ಅವಕಾಶ ಅಂದುಕೊಂಡು ನಟಿಸುತ್ತಿದ್ದೇನೆ. ಅವಿನಾಶ್‌ ಅವರ ಮಗಳ ಪಾತ್ರ ನನ್ನದು ಅಂದರು ಸಾರಾ. ನವ್ಯಾ ಎಂಬ ಮತ್ತೂಬ್ಬ ಹೊಸ ಹುಡುಗಿಗೂ ಇದು ಮೊದಲ ಅನುಭವ. ಅವರಿಲ್ಲಿ ಆಂಗ್ಲೋ ಇಂಡಿಯನ್‌ ಹುಡುಗಿ ಪಾತ್ರವಂತೆ. ಕಾವ್ಯಾ ಶಾ ಕೂಡ ಇಲ್ಲೊಂದು ವಿಶೇಷ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡರು. ಪ್ರತಾಪ್‌ ನಾರಾಯಣ್‌, ಇಲ್ಲಿ ವಿಕ್ರಮ್‌ ಶೆಟ್ಟಿ ಎಂಬ ಪಾತ್ರ ಮಾಡುತ್ತಿದ್ದು, ಅವರ ಹಿಂದಿನ ಎಲ್ಲಾ ಸಿನಿಮಾಗಳಲ್ಲೂ ಒಂದು ರೀತಿಯ ಮುಗ್ಧ ಹುಡುಗನಾಗಿ ಕಾಣಿಸಿಕೊಂಡಿದ್ದರಂತೆ.

ಇಲ್ಲಿ ಬಿಜಿನೆಸ್‌ಮ್ಯಾನ್‌ವೊಬ್ಬರ ಮಗನಾಗಿ, ಸ್ಟೈಲಿಶ್‌ ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ ಪ್ರತಾಪ್‌
ನಾರಾಯಣ್‌.

Advertisement

ಇನ್ನು, ಚಿತ್ರಕ್ಕೆ ಅಲೋಕ್‌ ಸಂಗೀತ ಕೊಡುತ್ತಿದ್ದಾರೆ. ಮೂರು ಹಾಡುಗಳಿದ್ದು, ಎಲ್ಲವೂ ಫ್ರೆಶ್‌ ಆಗಿರಲಿವೆ. ಹೊಸತಂಡಕ್ಕೆ ನಿಮ್ಮ ಬೆಂಬಲ ಇರಲಿ ಅಂದರು ಅಲೋಕ್‌. ಆಸ್ಟ್ರೇಲಿಯಾದ ಸ್ಟೀವ್‌ ರೇಸ್‌ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಮಾತಿಗೂ ಮುನ್ನ ಪ್ರಕಾಶ್‌ ಬೆಳವಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next