Advertisement

Kannada Cinema: ಹೊಸ ಅನುಭವ ನೀಡುವ ಮಾಯಾನಗರಿ

12:23 PM Dec 15, 2023 | Team Udayavani |

ಅನೀಶ್‌ ತೇಜೇಶ್ವರ್‌ ನಾಯಕರಾಗಿ ನಟಿಸಿರುವ “ಮಾಯಾನಗರಿ’ ಚಿತ್ರ ಇಂದು ತೆರೆಕಾಣುತ್ತಿದೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಶಂಕರ್‌ ಆರಾಧ್ಯ. ಇದರ ಜತೆಗೆ ನಿರ್ಮಾಣದ ಜವಾಬ್ದಾರಿ ಕೂಡಾ ವಹಿಸಿಕೊಂಡಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಶಂಕರ್‌ ಆರಾಧ್ಯ,”ಹಾರರ್‌, ಆ್ಯಕ್ಷನ್‌, ಫ್ಯಾಮಿಲಿ ಸೆಂಟಿಮೆಂಟ್‌ ಕಥೆ ಇದಾಗಿದ್ದು, ಚಿತ್ರದಲ್ಲಿ ನಾಯಕ ಶಂಕರ್‌ ನಾಗ್‌ ಅಭಿಮಾನಿ, ಚಿತ್ರರಂಗದಲ್ಲಿ ದೊಡ್ಡ ನಿರ್ದೇಶಕನಾಗಬೇಕೆಂದು ಹೋರಾಟ ನಡೆಸುವ ಆತನಿಗೆ ಕೊನೆಗೂ ಒಂದು ಅವಕಾಶ ಸಿಕ್ಕಿ, ಮಾಯಾನಗರಿ ಎಂಬ ಸ್ಥಳಕ್ಕೆ ಹೋಗಬೇಕಾಗುತ್ತದೆ. ಆ ಊರಿಗೆ ಬರುವ ಆತ ಅಲ್ಲಿ ತಾನೇ ಪಾತ್ರವಾಗಬೇಕಾಗುತ್ತದೆ. ಹೀಗೆ ಕುತೂಹಲಕಾರಿಯಾಗಿ ಸಾಗುವ ಈ ಚಿತ್ರಕ್ಕೆ ಬೆಂಗಳೂರು, ಶಿವಮೊಗ್ಗ, ಸಾಗರ, ಚಿಕ್ಕಮಗಳೂರು, ಭದ್ರಾವತಿ ಸುತ್ತಮುತ್ತ ಸುಮಾರು 65 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ವಿಶೇಷವಾಗಿ ಹಿರಿಯ ನಟ ದ್ವಾರಕೀಶ್‌ ಅವರು ರಿಯಲ್‌ ಲೈಫ್ ಪಾತ್ರವನ್ನೇ ಮಾಡಿದ್ದಾರೆ’ ಎನ್ನುತ್ತಾರೆ.

ಚಿತ್ರದಲ್ಲಿ ನಾಯಕ ಅನೀಶ್‌ ಅವರನ್ನು ವಿವಿಧ ಶೇಡ್‌ ಹಾಗೂ ಗೆಟಪ್‌ಗಳಲ್ಲಿ ತೋರಿಸಿದ ಖುಷಿ ನಿರ್ದೇಶಕರದು. ಲವರ್‌ಬಾಯ್‌, ಆ್ಯಕ್ಷನ್‌, ಅಸಿಸ್ಟೆಂಟ್‌ ಡೈರೆಕ್ಟರ್‌.. ಹೀಗೆ ಭಿನ್ನ ಪಾತ್ರಗಳಲ್ಲಿ ಅನೀಶ್‌ ಕಾಣಿಸಿಕೊಂಡಿದ್ದಾರೆ. “ಇಲ್ಲಿ ಅನೀಶ್‌ ಅವರ ಮ್ಯಾನರೀಸಂ ಕೂಡಾ ಭಿನ್ನವಾಗಿದೆ. ಚಿತ್ರದ ಕ್ಲೈಮ್ಯಾಕ್ಸ್‌ ಸನ್ನಿವೇಶ ಚಿತ್ರೀಕರಣ ಇಡೀ ತಂಡಕ್ಕೆ ಸವಾಲಾಗಿತ್ತು. ಇಲ್ಲಿವರೆಗೆ ಯಾರೂ ಕೂಡಾ ಜೋಗ್‌ ಫಾಲ್ಸ್‌ ಅನ್ನು ನಾವು ತೋರಿಸಿದಂತೆ ತೋರಿಸಿಲ್ಲ. ಸ್ಪೆಷಲ್‌ ಮಲ್ಟಿ ಡ್ರೋನ್‌ ಬಳಸಿದ್ದೇವೆ. ಚಿತ್ರದಲ್ಲಿ ಅದ್ಭುತವಾದ ಲೊಕೇಶನ್‌ಗಳಿವೆ. ಆ ಸ್ಥಳ ಹುಡುಕಲು ಸಾಕಷ್ಟು ಸಮಯ ಹಿಡಿಯಿತು’ ಎನ್ನುವುದು ನಿರ್ದೇಶಕರ ಮಾತು.

ಸ್ಯಾಂಡಲ್‌ವುಡ್‌ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಶ್ವೇತಾ ಶಂಕರ್‌ ಸಹ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next