Advertisement

‘ಜೋರ್ಡನ್’ ನಲ್ಲಿ ಫ್ಯಾಮಿಲಿ ಡ್ರಾಮಾ: ಡಿ.30ಕ್ಕೆ ತೆರೆಗೆ

06:31 PM Dec 19, 2022 | Team Udayavani |

ಸದ್ದಿಲ್ಲದೇ ತಯಾರಾದ, ವಿನೋದ್‌ ಧಯಾಳನ್‌ ನಿರ್ದೇಶನದ “ಜೋರ್ಡನ್‌’ ಸಿನಿಮಾ ಬಿಡುಗಡೆಯ ಹೊಸ್ತಿಲಿಗೆ ಬಂದಿದೆ. ಇದೇ ಡಿಸೆಂಬರ್‌ 30 ರಂದು ಚಿತ್ರ ತೆರೆಕಾಣಲಿದ್ದು, ಬಿಡುಗಡೆಯ ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದೆ ಚಿತ್ರತಂಡ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ. ಹರೀಶ್‌ ಟ್ರೇಲರ್‌ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

Advertisement

ನಿರ್ದೇಶಕ ವಿನೋದ್‌ ಧಯಾಳನ್‌ ಮಾತನಾಡಿ, “ಅಮೆರಿಕನ್‌ ಬಾಸ್ಕೆಟ್‌ ಬಾಲ್‌ ಆಟಗಾರ ಮೈಕಲ್‌ ಜೋರ್ಡನ್‌ ಹೇಳಿರುವ ವೈಫ‌ಲ್ಯವನ್ನು ನಾನು ಒಪ್ಪಿಕೊಳ್ಳುತ್ತೇನೆ, ಪ್ರತಿಯೊಬ್ಬರೂ ಯಾವುದಾದರೂ ವಿಷಯದಲ್ಲಿ ವಿಫ‌ಲರಾಗುತ್ತಾರೆ ಆದರೆ ಪ್ರಯತ್ನ ಪಡದೇ ವೈಫ‌ಲ್ಯವನ್ನು ನಾನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂಬ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಕಥೆಯನ್ನು ಹೆಣೆಯಲಾಗಿದೆ. ಕೌಟುಂಬಿಕ ಕಥಾಹಂದರ ಒಳಗೊಂಡ ಸ್ಪೂರ್ತಿದಾಯಕ ಸಿನಿಮಾವಾಗಿದೆ. ಕಥೆಯೇ ಈ ಚಿತ್ರದ ಹೀರೋ. ಕಾಮಿಡಿ ಕಿಲಾಡಿ ಖ್ಯಾತಿಯ ಮಹೇಂದ್ರ ಪ್ರಸಾದ್‌ ಹಾಗೂ ಸಂಪತ್‌ ಮೈತ್ರೇಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಹಿಂದೆ ಕಿರು ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನನಗೆ ಇದು ಮೊದಲ ಸಂಪೂರ್ಣ ಸಿನಿಮಾ’ ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ನಾಯಕ ಮಹೇಂದ್ರ ಪ್ರಸಾದ್‌ ಮಾತನಾಡಿ, “ನನ್ನ ನಟನೆಯ ಮೊದಲ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಮೈಕಲ್‌ ಪಾತ್ರವನ್ನು ಮಾಡಿದ್ದೇನೆ. ತಂದೆ ಮಗನ ಬಾಂಧವ್ಯ ಚಿತ್ರದಲ್ಲಿದೆ. ಈ ಸಿನಿಮಾ ಮುಗಿಯುವವರೆಗೆ ಯಾವ ಚಿತ್ರವನ್ನು ನಾನು ಒಪ್ಪಿಕೊಳ್ಳದೇ ಪಾತ್ರದಲ್ಲೇ ತಲ್ಲೀನನಾಗಿದ್ದೆ. ನಿರ್ದೇಶಕರು ನನ್ನ ಪಾತ್ರದ ಬಗ್ಗೆ ತಿಳಿಸಿಕೊಟ್ಟು ನನ್ನಿಂದ ಅಭಿನಯ ಮಾಡಿಸಿದ್ದಾರೆ’ ಎಂದರು.

ಚಿತ್ರದ ಮತ್ತೋರ್ವ ನಾಯಕ ಸಂಪತ್‌ ಮೈತ್ರೇಯ ಮಾತನಾಡಿ, “ನನ್ನ ಸ್ನೇಹಿತರೊಬ್ಬರ ಮೂಲಕ ಈ ಸಿನಿಮಾ ನನಗೆ ಸಿಕ್ಕಿತು. ತುಂಬಾ ಒಳ್ಳೆ ಕಂಟೆಂಟ್‌ ಇರುವ ಸಿನಿಮಾ’ ಎಂದರು.

ಸೀತಾರ, ಸುನೀಲ್, ಯೋಗೇಶ್‌ ಶಂಕರ್‌ ನಾರಾಯಣನ್‌, ಗಣೇಶ್‌ ಜೈ ಕುಮಾರ್‌ ಚಿತ್ರದ ತಾರಾಬಳಗದಲ್ಲಿದ್ದಾರೆ. ನೋ ನಾನ್ಸೆನ್ಸ್ ಕ್ರಿಯೇಷನ್ಸ್ ಬ್ಯಾನರ್‌ ನಡಿ ಜೆ.ಜಾನಕಿರಾಮ್, ಎನ್‌ ಆರ್‌ .ಪಾಟೀಲ್‌ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೈಕುಮಾರ್‌ ಜೆ ಸ್ಟಾಲಿನ್‌ ಛಾಯಾಗ್ರಹಣ, ಸಾಯಿ ಸರ್ವೇಶ್‌ ಸಂಗೀತ ನಿರ್ದೇಶನ ಹಾಗೂ ಸಾಹಿತ್ಯ, ನಿರಂಜನ್‌ ದೇವರಮನೆ ಸಂಕಲನ ಚಿತ್ರಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next