Advertisement
Related Articles
Advertisement
ಇಂದು ಯುವರತ್ನ ಚಿತ್ರತಂಡದ ಬೆನ್ನಿಗೆ ನಿಂತಿರುವ ಕನ್ನಡ ಚಿತ್ರರಂಗದ ತಾರೆಯರು ಸರ್ಕಾರವನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದಾರೆ. ನಟ ಸುದೀಪ್, ಸತೀಶ್ ನೀನಾಸಂ, ನಿರ್ದೇಶಕ ದಿನಕರ್ ತೂಗುದೀಪ, ಜೋಗಿ ಖ್ಯಾತಿಯ ಪ್ರೇಮ್, ನಟ, ನಟ ನಿರ್ದೇಶಕ ರಿಷಭ್ ಶೆಟ್ಟಿ, ರಕ್ಷಿತ್ ಶೆಟ್ಟಿ, ದಿಯಾ ಖ್ಯಾತಿಯ ಪೃತ್ವಿ ಅಂಬರ್, ಡಾಲಿ ಧನಂಜಯ್ ಹಾಗೂ ರವಿಶಂಕರ್ ಗೌಡ ಸೇರಿದಂತೆ ಅನೇಕರು ಈ ಆದೇಶ ಹಿಂಪಡೆದು, 100 % ಆಸನ ವ್ಯವಸ್ಥೆಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಕೇಳಿಕೊಂಡಿದ್ದಾರೆ.
ಸಿನಿಮಾ ಮನರಂಜನೆಗಾಗಿರಬಹುದು. ಅದರ ಜೊತೆಜೊತೆಗೆ ನೀವು ಊಹಿಸಲು ಸಾಧ್ಯವಿಲ್ಲದಷ್ಟು ಕುಟುಂಬಗಳಿಗೆ ಅದುವೆ ಹೊಟ್ಟೆ-ಬಟ್ಟೆ ನೀಡುತ್ತದೆ. ದಯವಿಟ್ಟು ಚಿತ್ರಮಂದಿರಗಳಲ್ಲಿ ಶೇಕಡ 50ರಷ್ಟು ಅನುಮತಿಯ ನಿಯಮವನ್ನು ಹಿಂಪಡೆಯಿರಿ ಎಂದು ನಟ ಸತೀಶ್ ನೀನಾಸಂ ಒತ್ತಾಯಿಸಿದ್ದಾರೆ.
ಚೇತರಿಕೆಯ ಹಾದಿಯಲ್ಲಿರುವ ಕನ್ನಡ ಚಿತ್ರರಂಗಕ್ಕೆ ಸರ್ಕಾರದ ಶೇ.50ರ ನಿರ್ಧಾರದಿಂದ ತೊಂದರೆ ಉಂಟಾಗಲಿದ್ದು, ಸಂಪೂರ್ಣ ಸುರಕ್ಷತಾ ಕ್ರಮಗಳೊಂದಿಗೆ ಚಿತ್ರ ಪ್ರದರ್ಶಿಸಲು ಬದ್ಧರಾಗಿದ್ದೇವೆ. ಸರ್ಕಾರ ದಯವಿಟ್ಟು ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಬೇಕಾಗಿ ಮನವಿ ನಟರು ಮನವಿ ಮಾಡಿದ್ದಾರೆ.
ಯಾವುದೇ ಮುನ್ಸೂಚನೆ ನೀಡದೆ ಸರ್ಕಾರದ ಈ ಆದೇಶ ನೀಡಿ ಒಂದು ಒಳ್ಳೆಯ ಕನ್ನಡ ಸಿನಿಮಾಕ್ಕೆ ಅನ್ಯಾಯ ಮಾಡುವುದು ಸರಿಯಲ್ಲ. ಒಬ್ಬ ಜವಾಬ್ದಾರಿಯುತ್ತ ನಾಗರಿಕನಾಗಿ ಸರ್ಕಾರದ ಆದೇಶವನ್ನು ಗೌರವಿಸುವುದು ಹಾಗೂ ಜನರ ಆರೋಗ್ಯದ ಬಗ್ಗೆ ಕಾಳಜಿವಯಿಸುವುದು ನಮ್ಮ ಕರ್ತವ್ಯ. ಒಂದು ವರ್ಷದ ನಂತರ ಚೇತರಿಸಿಕೊಳ್ಳುತ್ತಿದ್ದ ಚಿತ್ರರಂಗಕ್ಕೆ ಶೇ.50 ರಷ್ಟು ಕಡಿತ ಮಾರಕವಾಗುತ್ತದೆ. ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ಸಂಪೂರ್ಣ ಸಾಮರ್ಥ್ಯದಲ್ಲಿ ಚಿತ್ರಮಂದಿರಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕಾಗಿ ವಿನಂತಿಸಿದ್ದಾರೆ.