ಅರಸೀಕೆರೆ: ಮಾತೃಭಾಷೆ ಕನ್ನಡದ ಸಂಭ್ರಮವನ್ನು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತ ಮಾಡದೆ ನಿಜ ವಾದ ಕನ್ನಡಿಗರು ವರ್ಷ ಪೂರ್ತಿ ಸಂಭ್ರಮಿಸುವಂ ತಾಗಬೇಕಿದ್ದು ಕನ್ನಡ ನಾಡು, ನುಡಿ ನಮ್ಮ ಜೀವನದ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್ ತಿಳಿಸಿದರು.
ನಗರದ ಪಿ.ಪಿ.ವೃತ್ತದ ಹತ್ತಿರದ ಶ್ರೀಸಿದ್ದೇಶ್ವರ ಸಭಾಂಗಣದಲ್ಲಿ ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಕವಿಗೋಷ್ಠಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಂಘಟನೆ:ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಘಟನೆ ಈಗಾಗಲೇ ಕರ್ನಾಟಕ ಸೇರಿದಂತೆ ಮಹಾ ರಾಷ್ಟ್ರ, ಕೇರಳ, ಆಂಧ್ರಪ್ರದೇಶದಲ್ಲಿ ನಿರಂತರ ಕನ್ನಡದ ಕೈಂಕರ್ಯ ಮಾಡುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಹಿನ್ನೆಲೆಯಲ್ಲಿ ಮಹಿಳಾ ಪ್ರಾತಿನಿಧ್ಯದ ಕೂಗು ಎಲ್ಲೆಡೆ ಕೇಳಿ ಬರುತ್ತಿರುವುದು ಸ್ವಾಗತಾರ್ಹ ವಿಷಯ. ಅರಸೀಕೆರೆ ತಾಲೂಕಿನಲ್ಲಿ ಕಳೆದ ಒಂದೂ ವರೆ ವರ್ಷಗಳಲ್ಲಿ ಅನೇಕ ಏಳು ಬೀಳುಗಳ ನಡು ವೆಯೂ ಅಧ್ಯಕ್ಷರು ದಿಟ್ಟ ಹಾಗೂ ಅಚಲ ನಿರ್ಧಾರ ಗಳಿಂದ ಇಲ್ಲಿನ ಸಾಹಿತ್ಯಾಸಕ್ತರ ಸಹಕಾರ ದಿಂದ ಮೌಲ್ಯಯುತ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆಂದರು. ಕವಿ ರಮೇಶ್ ಗೊಲ್ಲರಹಳ್ಳಿ ಉಪನ್ಯಾಸ ನೀಡಿ, ಬ್ರಿಟಿಷರ ಅಧಿಕಾರಕ್ಕೆ ಒಳಗಾದ ಎಲ್ಲಾ ಕನ್ನಡ ಊರು, ತಾಲೂಕು, ಜಿಲ್ಲೆಗಳನ್ನು ಒಟ್ಟುಗೂಡಿಸಿ ಕರ್ನಾಟಕ ಪ್ರಾಂತವೆಂದು ಕರೆಯುವ ಬಗ್ಗೆ ಸರ್ಕಾರಕ್ಕೆ ಬಿನ್ನಹ ಮಾಡಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಧ್ಯಕ್ಷೆ ಗಂಗಮ್ಮ ನಂಜುಂಡಪ್ಪ ಮಾತನಾಡಿ, ಸಾಹಿತ್ಯ ಬರಹಗಾರರು ನೇರ ನಡೆ ನುಡಿ, ರೂಢಿಸಿಕೊಳ್ಳುವುದು ಉತ್ತಮ. ಒಳಗೆ ಒಂದು ಹೊರಗೊಂದು ಬಿಂಬಿಸುವ ವ್ಯಕ್ತಿತ್ವ ದಿಂದ ಬರಹಗಾರರು ಮುಕ್ತರಾಗಬೇಕು ಎಂದರು.
ಕವಿ ಎಚ್.ಎಸ್.ಬಸವರಾಜ್, ಪತ್ರಕರ್ತ ನಾಗರಾಜ್ ಹೆತ್ತೂರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಗಂಜಲಗೂಡು ಗೋಪಾಲಗೌಡ, ಭಾರತ್ ಸ್ಕೌಟ್ಸ್ ಮತ್ತು ಗೆ„ಡ್ಸ್ ತಾಲೂಕು ಕಾರ್ಯ ದರ್ಶಿ ಎಸ್.ಎನ್.ಸುರೇಶ್, ಜಾವಗಲ್ ಪ್ರಸನ್ನ ಕುಮಾರ್, ಜಿಲ್ಲಾ ಸಂಚಾಲಕ ನಿರಂಜನ್ ಎ.ಸಿ.ಬೇಲೂರು, ತಾಲೂಕು ಗೌರವಾಧ್ಯಕ್ಷೆ ಮಮತಾ ರಾಣಿ, ಕೋಶಾಧ್ಯಕ್ಷರಾದ ರುದ್ರೇಶ್, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ್, ಕುಮಾರಿ ಸಿಂಧೂರಿ ಮಾತನಾಡಿದರು.
ದಿಬ್ಬೂರು, ಯೋಗೇಶ್, ವಾಣಿ ಉಮೇಶ್, ಧರ್ಮಬಾಯಿ, ರುದ್ರೇಶ್ ಮುಂತಾದವರು ಕನ್ನಡ ಗೀತೆ ಹಾಡಿ ರಂಜಿಸಿದರು. ಕವಿಗೋಷ್ಠಿಯಲ್ಲಿ ಎ.ಎಚ್.ಬೋರೇಗೌಡ, ಭಾಗ್ಯ ಕೆಂಗರುಬರಹಟ್ಟಿ, ಅಂಶು ಬೆಳವಳ್ಳಿ, ಮಾಲಾ ಚೆಲುವನಹಳ್ಳಿ, ಮಂಜುನಾಥ್, ಜಯಲಕ್ಷಿ$¾à ಕೋಳಗುಂದ, ದಿಬ್ಬೂರು ಯೋಗೇಶ್, ಮಧುಶ್ರೀ, ಧರ್ಮಬಾಯಿ ಕವಿತೆ ವಾಚಿಸಿದರು. ಕರವೇ ಲೋಕೇಶ್‌ಗೌಡ, ಕವಿ ಮಧು ಕರ್, ರವಿಶಂಕರ್, ಶಿವರುದ್ರಪ್ಪ, ಸ್ವಭಾವ್ ಕೋಳ ಗುಂದ ಮತ್ತಿತರರಿದ್ದರು.