Advertisement

ಮಾತೃಭಾಷೆ ಶಿಕ್ಷಣದಲ್ಲಿ ಕರ್ನಾಟಕವೇ ಮುಂದೆ! ರಾಜ್ಯದಲ್ಲಿ ಶೇ.53ರಷ್ಟು ಮಕ್ಕಳು ಕನ್ನಡ ಮಾಧ್ಯಮ

09:43 PM Jul 03, 2021 | Team Udayavani |

ಹೊಸದಿಲ್ಲಿ : ದಕ್ಷಿಣ ಭಾರತದಲ್ಲೇ ಮಾತೃ ಭಾಷೆಯ ಮೇಲೆ ಹೆಚ್ಚು ಪ್ರೀತಿ ಇರುವುದು ಕರ್ನಾಟಕದಲ್ಲಿ!
2019-20ರ ಯೂನಿಫೈಡ್‌ ಡಿಸ್ಟ್ರಿಕ್ಟ್ ಇನ್ಫರ್ಮೇಷನ್‌ ಸಿಸ್ಟಂ ಫಾರ್‌ ಎಜುಕೇಷನ್‌ (ಯುಡಿಐಎಸ್‌ಇ) ವರದಿ ಈ ಅಂಶವನ್ನು ಬಹಿರಂಗಪಡಿಸಿದೆ. ಕರ್ನಾಟಕದಲ್ಲಿ ಆಂಗ್ಲ ಶಾಲೆಗಳ ಪ್ರಮಾಣ ಶೇ. 20ರಷ್ಟು ಹೆಚ್ಚಾಗಿದ್ದರೂ ಮಾತೃಭಾಷೆಯಲ್ಲಿ ಕಲಿಯುತ್ತಿರುವವರ ಸಂಖ್ಯೆ ಹೆಚ್ಚಿದೆ ಎಂದು ಈ ವರದಿ ತಿಳಿಸಿದೆ. ಶೇ. 53.5ರಷ್ಟು ಹೆಚ್ಚು ಮಕ್ಕಳು ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

Advertisement

ರಾಜ್ಯವಾರು ಲೆಕ್ಕಾಚಾರ
ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಅಲ್ಲಿ ತೆಲುಗು ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ಶೇ. 25ಕ್ಕಿಂತ ಕಡಿಮೆ. ಶೇ. 73.8ರಷ್ಟು ಮಕ್ಕಳು ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ. ಆಂಧ್ರ ದಲ್ಲಿ ಶೇ. 35ರಷ್ಟು ಮಕ್ಕಳು ತೆಲುಗು ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ. ಕೇರಳದಲ್ಲಿ ಶೇ. 35ರಷ್ಟು ಮಕ್ಕಳು ಮಾತ್ರ ಮಲಯಾಳದಲ್ಲಿ ಕಲಿಯುತ್ತಿದ್ದಾರೆ.

ಇದನ್ನೂ ಓದಿ :ದುರಹಂಕಾರ ಇರುವವರಿಗೆ ಲಸಿಕೆ ಇಲ್ಲ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ತಮಿಳುನಾಡಿನಲ್ಲಿ ಎಷ್ಟು?
ಮಾತೃಭಾಷೆಯ ಮೇಲೆ ಉತ್ಕಟ ಅಭಿಮಾನ ಇರುವ ತಮಿಳುನಾಡಿನಲ್ಲಿಯೂ ತಮಿಳಿನಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಪ್ರಮಾಣ ಗಣನೀಯವಾಗಿ ಇಳಿದಿದೆ. 5 ವರ್ಷಗಳ ಹಿಂದೆ ಶೇ. 57.6ರಷ್ಟಿದ್ದ ಮಕ್ಕಳ ಸಂಖ್ಯೆ ಈಗ ಶೇ. 42.6ಕ್ಕೆ ಇಳಿ ಕೆ ಯಾ ಗಿ ದೆ.

ಮಾದರಿ ಬಂಗಾಲ!
ದೇಶದಲ್ಲಿ ಆಂಗ್ಲ ಶಿಕ್ಷಣಕ್ಕೆ ಮೊರೆ ಹೋಗಿರುವ ಮಕ್ಕಳ ಪ್ರಮಾಣ ಅತೀ ಕಡಿಮೆ ಇರುವ ರಾಜ್ಯ ಪಶ್ಚಿಮ ಬಂಗಾಲ. ಅಲ್ಲಿ ಅವರ ಸಂಖ್ಯೆ ಶೇ. 5.3ರಷ್ಟು ಮಾತ್ರ! ಶೇ. 89.8ರಷ್ಟು ಮಕ್ಕಳು ಬಂಗಾಲಿಯಲ್ಲೇ ಕಲಿಯುತ್ತಿದ್ದಾರೆ. ಇದರ ಪರಿಣಾಮ ಈಶಾನ್ಯ ರಾಜ್ಯಗಳ ಮೇಲೂ ಇದ್ದು, ಒಡಿಶಾದಲ್ಲಿ ಬಂಗಾಲಿಯಲ್ಲಿ ಕಲಿಯುವವರ ಪ್ರಮಾಣ ಶೇ. 80ರಷ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next