Advertisement

ಭದ್ರಾವತಿ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಕಡೆಗಣನೆ; ತೀವ್ರವಾಗಿ ಖಂಡಿಸುತ್ತೇನೆ ಎಂದ ಸಿದ್ದು

08:11 PM Jan 17, 2021 | Team Udayavani |

ಬೆಂಗಳೂರು: ಭದ್ರಾವತಿ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಕಡೆಗಣನೆ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ, ಕಾರ್ಯಕ್ರಮ ನಡೆದಿರುವುದು ಕರ್ನಾಟಕದಲ್ಲಿ. ಹಾಗಾಗಿ ಕನ್ನಡ ಭಾಷಾ ಬಳಕೆ ಇರಲೇಬೇಕಿತ್ತು ಎಂದು ಕಿಡಿಕಾರಿದರು.

Advertisement

ಕನ್ನಡ ಭಾಷೆ ಬಳಸದೇ ಇರುವುದು ಅಪರಾಧ., ರಾಜ್ಯದಲ್ಲಿ ಹಿಂದಿ ಹೇರಿಕೆ ಅಷ್ಟು ಸುಲಭವಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:  ಬಂಟ್ವಾಳ: ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯ ಮೇಲೆ ಪೊಲೀಸ್ ದಾಳಿ; ಆರೋಪಿಗಳು ವಶಕ್ಕೆ

ಬಿಎಸ್‌ವೈ ಸರ್ಕಾರದ ಬಗ್ಗೆ ಅಮಿತ್ ಶಾ ಗುಣಗಾನ ವಿಚಾರವಾಗಿ ಮಾತನಾಡಿ, ಅವರಿಗೆ ಒಳ್ಳೆಯ ಸರ್ಕಾರ ಕೊಟ್ಟಿರೋದು ಗೊತ್ತಿಲ್ಲ.  ಕೇಂದ್ರದಲ್ಲಿ ಒಳ್ಳೆಯ ಸರ್ಕಾರ ನೀಡಿದ್ದಾರಾ ? ಹಾಗಾಗಿ ಯಡಿಯೂರಪ್ಪ ಸರ್ಕಾರವನ್ನ ಸಮರ್ಥಿಸಿಕೊಳ್ತಿದ್ದಾರೆ. ರಾಜ್ಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಸಮರ್ಥಿಸಿಕೊಳ್ತಿದ್ದಾರೆ ಎಂದು ವ್ಯಂಗ್ಯ ವಾಡಿದರು.

ಇದನ್ನೂ ಓದಿ: ವಿದೇಶದಲ್ಲಿ ಬಸವಣ್ಣನಿಂದ ಗೌರವ, ಕಾಲ್ಪನಿಕ ರಾಮನಿಂದಲ್ಲ: ಶ್ರೀ ನಿಜಗುಣಾನಂದ ಸ್ವಾಮೀಜಿ

Advertisement
Advertisement

Udayavani is now on Telegram. Click here to join our channel and stay updated with the latest news.

Next