Advertisement
ರಾಷ್ಟ್ರೀಯ ಹೆದ್ದಾರಿಯ ಮೂವತ್ತು ಮುಡಿಯಿಂದ ಕನ್ನಡಕುದ್ರುವಿಗೆ ಸಂಪರ್ಕ ಕಲ್ಪಿಸುವ ಸೇತುವೆಯಿಂದ ತುಸು ಮುಂದಕ್ಕೆ ಸಾಗಿದರೆ ಅಲ್ಲಿಂದ ಕೊನೆಯವರೆಗೆ ಸುಮಾರು 1 ಕಿ.ಮೀ. ಮಣ್ಣಿನ ರಸ್ತೆಯಿದೆ. ಪ್ರತಿ ವರ್ಷದ ಮಳೆಗಾಲದಲ್ಲಿ ಈ ರಸ್ತೆ ಕೆಸರುಮಯವಾಗುತ್ತಿದ್ದು, ವಾಹನ ಸಂಚಾರವೇ ಸಂಕಷ್ಟ ಎಂಬಂತಾಗುತ್ತದೆ.
ಈಗ ಮಳೆ ಸ್ವಲ್ಪ ಕಡಿಮೆಯಾಗಿದ್ದು, ಹೆಮ್ಮಾಡಿ ಗ್ರಾಮ ಪಂಚಾಯತ್ ವತಿಯಿಂದ ಅಧ್ಯಕ್ಷ ಸತ್ಯನಾರಾಯಣ ಹಾಗೂ ಸ್ಥಳೀಯ ಸದಸ್ಯ ರಾಘವೇಂದ್ರ ಪೂಜಾರಿ ಹೆದ್ದಾರಿಮನೆ ಅವರ ಮುತುವರ್ಜಿಯಲ್ಲಿ ಗುತ್ತಿಗೆದಾರರ ಮೂಲಕ ರಸ್ತೆಗೆ ಮಣ್ಣು ಹಾಕಿ, ಜೆಸಿಬಿ ಮೂಲಕ ಸಮತಟ್ಟು ಗೊಳಿಸುವ ಕಾರ್ಯವನ್ನು ಮಾಡಲಾಗಿದೆ. ಇದನ್ನೂ ಓದಿ:ಅಂಟಾಲಿಯಾ ಪ್ರಕರಣ: ಮಾಜಿ ಪೊಲೀಸ್ ಅಧಿಕಾರಿ ಸೇರಿ 10 ಮಂದಿ ವಿರುದ್ಧ ಚಾರ್ಜ್‌ಶೀಟ್
Related Articles
ಕೆಸರುಮಯ ರಸ್ತೆಯಿಂದಾಗಿ ಕನ್ನಡಕುದ್ರು ವಿನಿಂದ ಪಡಿತರ, ಗ್ರಾ.ಪಂ. ಕಚೇರಿ, ಗ್ರಾಮ ಕರಣಿಕರ ಕಚೇರಿ ಕೆಲಸಕ್ಕೆ, ಪೇಟೆಗೆ ಬರಲು ಇಲ್ಲಿನ ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತಿತ್ತು. ಈಗ ರಸ್ತೆ ದುರಸ್ತಿಯಾಗಿರುವುದರಿಂದ ಗ್ರಾಮಸ್ಥರಿಗೆ ಸ್ವಲ್ಪ ಮಟ್ಟಿಗೆ ಸಮಸ್ಯೆ ನಿವಾರಣೆಯಾದಂತಾಗಿದೆ.
Advertisement
ಸುದಿನ ವರದಿಹೆಮ್ಮಾಡಿಯ ಕನ್ನಡಕುದ್ರು ಸಂಪರ್ಕಿಸುವ ರಸ್ತೆಯ ಅವ್ಯವಸ್ಥೆ ಕುರಿತಂತೆ “ಉದಯವಾಣಿ ಸುದಿನ’ವು “ಒಂದು ಊರು-ಹಲವು ದೂರು’ ಸರಣಿಯಲ್ಲಿ ಆ. 6 ರಂದು “ಇಲ್ಲಿ ವಾಹನ ಸಾಗುವುದೇ ಸಾಹಸ!’ ಎನ್ನುವುದಾಗಿ ವಿಶೇಷ ವರದಿ ಪ್ರಕಟಿಸಿ, ಗಮನಸೆಳೆದಿತ್ತು.