Advertisement
ಕನ್ನಡ ಕಲಾಕೇಂದ್ರ ಮುಂಬಯಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕರ್ಣಾಟಕ ಬ್ಯಾಂಕ್ ಮಂಗಳೂರು ಇವರ ಪ್ರಾಯೋಜಕತ್ವತಲ್ಲಿ ಮಾ. 11ರಂದು ಅಪರಾಹ್ನ 3ರಿಂದ ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ನಡೆದ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಮುಂಬ ಯಿಯಲ್ಲಿ ಕನ್ನಡ ಉಳಿವಿಗಾಗಿ ಪತ್ರಿಕೆಗಳ ಯೋಗದಾನವು ಮಹತ್ತರವಾಗಿದೆ. ಇಲ್ಲಿನ ಎರಡು ದಿನ ಪತ್ರಿಕೆಗಳು, ಜಾತೀಯ ಸಂಘಟನೆಗಳ ಮುಖವಾಣಿಗಳು ಸದಾ ಕನ್ನಡಕ್ಕಾಗಿ, ಕನ್ನಡದ ಉಳಿವಿಗಾಗಿ ಶ್ರಮಿಸುತ್ತಿವೆ. ರಂಗಭೂಮಿ ಎಂದರೆ ನಮ್ಮ ಬದುಕಿಗೆ ಹತ್ತಿರವಾದ ಕ್ಷೇತ್ರವಾಗಿದೆ. ಮನುಷ್ಯನ ಬದುಕಿನ ವಿಕಾಸಕ್ಕಾಗಿ ರಂಗಭೂಮಿಯ ಪಾತ್ರ ಮಹತ್ತರವಾಗಿದೆ. ಕನ್ನಡ ಕಲಾಕೇಂದ್ರವು ಕಳೆದ ಆರು ದಶಕಗಳಿಂದಲೂ ಹೆಚ್ಚಿನ ಕಾಲದಿಂದ ರಂಗಭೂಮಿಗೆ ಸೇವೆ ಸಲ್ಲಿಸುತ್ತಾ ಬಂದಿದೆ. ಕನ್ನಡ ಕಲಾಕೇಂದ್ರದ ಪ್ರೇಕ್ಷಕರ ಸ್ಥಾನದಲ್ಲಿ ಕುಳಿತು ನೋಡಿ ಬೆಳೆದವನು ನಾನು. ಈ ಸಂಸ್ಥೆಯ ರಂಗಭೂಮಿಗೆ ನೀಡಿದ ಕೊಡುಗೆಯನ್ನು ನೆನೆಪಿ ಸುವಾಗ ಆಶ್ಚರ್ಯವಾಗುತ್ತದೆ. ಬೈಲೂರು ಬಾಲಚಂದ್ರ ರಾವ್ ಅವರ ನೇತೃತ್ವದಲ್ಲಿ ಕನ್ನಡ ಕಲಾಕೇಂದ್ರವು ರಂಗಕಲಾವಿದರನ್ನು ಗೌರವಿಸುತ್ತಿರುವುದು ಅಭಿನಂದನೀ ಯವಾಗಿದೆ ಎಂದರು.
Related Articles
Advertisement
ಪ್ರಧಾನ ಕಾರ್ಯದರ್ಶಿ ಮಧುಸೂದನ್ ಟಿ. ಆರ್. ಅವರು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನಿರ್ವಹಿಸಿದರು. ಸಂಪೂರ್ಣ ಕಾರ್ಯಕ್ರಮವನ್ನು ಗೀತಾ ಭಟ್ ನಿರ್ವಹಿಸಿದರು. ಕಲಾಕೇಂದ್ರದ ಗೌರವ ಉಪಾಧ್ಯಕ್ಷೆ ಡಾ| ಸುನೀತಾ ಎಂ. ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ದಾನಿ ಎಂ. ಬಿ. ಕುಕ್ಯಾನ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ಡಾ| ಪಿ. ಜಿ. ರಾವ್, ಜತೆ ಕಾರ್ಯದರ್ಶಿ ರಮೇಶ್ ಬಿರ್ತಿ, ಕೋಶಾಧಿಕಾರಿ ರಮೇಶ್ ಎಂ. ರಾವ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿಯ ಸದಸ್ಯರಾದ ರಂಗನಿರ್ದೇಶಕ ಮನೋಹರ ಶೆಟ್ಟಿ ನಂದಳಿಕೆ, ಜಗದೀಶ್ ರೈ, ಗೋಪಿನಾಥ್ ರಾವ್, ವಾಣಿ ಭಟ್, ಶಕುಂತಲಾ ಸಾಮಗ ಮೊದಲಾದವರು ಸಹಕರಿಸಿದರು. ಇದೇ ಸಂದರ್ಭದಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿಯನ್ನು ಪಡೆದ ಶ್ಯಾಮಲಾ ಪ್ರಕಾಶ್ ಮತ್ತು ಸುರೇಖಾ ನಾಯಕ್ ಇವರನ್ನು ಗೌರವಿಸಲಾಯಿತು.
ಪ್ರಾರಂಭದಲ್ಲಿ ಪ್ರಮೋದಿನಿ ರಾವ್ ಮತ್ತು ಬಳಗದವರಿಂದ ಭಕ್ತಿಗೀತೆಗಳ ಗಾಯನ ನಡೆಯಿತು. ಮಂಜುಳಾ ಬಾದಾಮಿ ಇವರಿಂದ ಆತ್ಮ ಬಯಲು ನಾಟಕದ ಏಕಪಾತ್ರಾಭಿನಯ ವೈ. ಡಿ. ಬಾದಾಮಿ ಅವರ ನಿರ್ದೇ ಶನದಲ್ಲಿ ಜರಗಿತು. ಆನಂತರ ನಟನಾ ಬಳಗ ಮೈಸೂರು ಇದರ ಕಲಾವಿದರಿಂದ ರವೀಂದ್ರನಾಥ ಠಾಗೋರ್ ಮೂಲಕಥೆಯ, ಕನ್ನಡಕ್ಕೆ ಅನುವಾದಿತ “ಕೆಂಪು ಕಣಗಿಲೆ’ ನಾಟಕವು ಡಾ| ಶ್ರೀಪಾದ ಭಟ್ ಇವರ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಕಲಾ ಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಚಿತ್ರ-ವರದಿ : ಸುಭಾಷ್ ಶಿರಿಯಾ