Advertisement
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲ ವಿನ್ಯಾಸಗಳಲ್ಲಿ ಯುನಿಕೋಡ್ ಪೂರ್ಣ ರೂಪದಲ್ಲಿ ಕನ್ನಡ ಸುಲಭವಾಗಿ ಎಲ್ಲರಿಗೂ ಲಭ್ಯವಾಗುವ ಹಾಗೆ ಮಾಡಿರುವುದು ಕನ್ನಡ ಭಾಷೆ ವಿಶ್ವ ಪ್ರಸಾರಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
Related Articles
Advertisement
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಬುಡಾದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಜಿಲ್ಲಾಧಿ ಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿಪಂ ಸಿಇಒ ಟಿ. ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಮ್. ಗಂಗಪ್ಪ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರು ಹಾಗೂ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಜೀವನ ಬಡಿಗೇರ, ಬಸವರಾಜ ಭಜಂತ್ರಿ, ಹನಮಂತ ಭಜಂತ್ರಿ (ಜಾನಪದ), ಶಿವಪುತ್ರಪ್ಪ ತಾರಿವಾಳ (ಸಂಗೀತ), ಲಕ್ಷ್ಮಣ ಮಾದರ (ತಬಲಾ), ಮುಪ್ಪನಗೌಡ ಗೌಡರ, ಜಯಶ್ರೀ ಬನಹಟ್ಟಿ (ನಾಟಕ), ಎನ್. ಎಸ್.ಸನ್ನೂರ, ತಯಾನಖಾನ್ ಇನಾಮದಾರ (ರಂಗಭೂಮಿ), ಹಯತಸಾಬ ಮದರಖಾನ (ಬಯಲಾಟ), ಮಹಾದೇವ ಜಗತಾಪ (ಚಿತ್ರಕಲೆ), ಹನಮಂತ ತಳವಾರ (ಶಿಲ್ಪಕಲೆ), ಸಿದ್ದಪ್ಪ ಮಾದರ, ಶೀಲಾಕಾಂತ ಪತ್ತಾರ (ಸಾಹಿತ್ಯ), ವಿಜಯಕುಮಾರ ಪವಾರ (ಬಲ್ಬಕಲೆ), ಗುಣಾಕರ ಶೆಟ್ಟಿ, ಆರ್.ಡಿ.ಬಾಬು, ಅಶೋಕ ಶ್ಯಾವಿ, ಲಕ್ಷ್ಮೀ ಗೌಡರ, ನಿಂಗರಾಜ ಮಬ್ರುಮಕರ (ಸಮಾಜ ಸೇವೆ), ಬಿ.ರತ್ನಾಕರ ಶೆಟ್ಟಿ, ರಾಘವೇಂದ್ರ ಕಲಾದಗಿ (ಪತ್ರಿಕಾ ಮಾಧ್ಯಮ) ಅವರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸನ್ಮಾನಿಸಲಾಯಿತು.