Advertisement
ಬಾಗಲಕೋಟೆಯ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆದ ತಿಂಗಳ ಅತಿಥಿ ವಿಶೇಷ ಕಾರ್ಯಕ್ರಮ ಸರಣಿ-5ರ ಪ್ರೊ| ವೀರಭದ್ರ ಕೌದಿ ಅವರ ಸಾಹಿತ್ಯಾವಲೋಕನ ಮತ್ತು ಎ.ಎಸ್. ಮಕಾನದಾರ ಅವರ ಉಸಿರು ಗಂಧ ಸೋಕಿ ಗ್ರಂಥ ಲೋಕಾರ್ಪಣೆ ಹಾಗೂ ಜಿಲ್ಲಾ ಕಸಾಪ ಮಹಿಳಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ನಾಡು-ನುಡಿಗಾಗಿ ಸಾಹಿತ್ಯ ಸೇವೆ ಮಾಡಿರುವವರ ಕೃತಿಗಳ ಅವಲೋಕನದಿಂದ ಯುವ ಬರಹಗಾರರಿಗೆ ಸ್ಪೂರ್ತಿ ಮತ್ತು ಪ್ರೇರಣೆ ನೀಡುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಂಕಣಬದ್ಧವಾಗಿದೆ. ನಾವೆಲ್ಲರೂ ಕನ್ನಡ ತಾಯಿಯ ಸೇವೆ ಮಾಡೋಣ ಎಂದು ಹೇಳಿದರು.
ಜಿಲ್ಲಾ ಗೌರವ ಕಾರ್ಯದರ್ಶಿ ಸಿದ್ಧರಾಮ ಶಿರೋಳ, ಡಾ|ಮೈನುದ್ದಿನ್ ರೇವಡಿಗಾರ, ಕೃಷ್ಣಾ ಕೋರಾ, ಎಸ್.ಆರ್. ಎಮ್ಮಿಮಠ, ಸಿ.ಎನ್. ಬಾಳಕನ್ನವರ, ಡಾ|ಉಮಾ ಅಕ್ಕಿ, ಗೀತಾ ದಾನಶೆಟ್ಟಿ, ದ್ರಾಕ್ಷಾಯಣಿ ಮಂಡಿ, ವಿಜಯಶ್ರೀ ಮುರನಾಳ, ಸಾಹಿತಿಗಳು ಕಲಾವಿದರು ಪಾಲ್ಗೊಂಡಿದ್ದರು.
ಬಾಗಲಕೋಟೆ ತಾಲೂಕ ಕಸಾಪ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ಸ್ವಾಗತಿಸಿದರು. ಮಲ್ಲಿಕಾರ್ಜುನ ಶೆಲ್ಲಿಕೇರಿ ಆಶಯ ನುಡಿ ಹೇಳಿದರು. ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ ಕಾರ್ಯಕ್ರಮ ನಿರೂಪಿಸಿದರು. ಸಂಜಯ ನಡುವಿನಮನಿ ವಂದಿಸಿದರು.